ಕಲಬುರಗಿ: ಪುಸ್ತಕಗಳಿಂದ ಮಸ್ತಕದ ಬೆಳವಣಿಗೆ ಸಾಧ್ಯ. ಕಟ್ಟಿದ ಕಟ್ಟಡಗಳು ಒಂದಿಲ್ಲ ಒಂದು ದಿನ ನಾಶವಾಗಬಹುದು. ಆದರೆ ಪುಸ್ತಕಗಳಿಂದ ಮನುಕುಲದ ಉಳಿವು ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ಹೇಳಿದರು.
ಬಿಸಿಲ ನಾಡು ಪ್ರಕಾಶನ ಸಂಸ್ಥೆ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ರಚಿಸಿದ ಸುಬೇದಾರ ರಾಮಜಿ ಸಕ್ಪಾಲ್, ಹೀಂಗ್ಯಾಕಂತಾರೆ, ಮನಸೇ ಬದುಕು ನಿನಗಾಗಿ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಭಾರತದ ನಿರ್ಮಾಪಕರಲ್ಲೊಬ್ಬರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ತಂದೆಯವರ ಕುರಿತು ರಚಿಸಿರುವ “ಸುಬೇದಾರ ರಾಮಜಿ ಸಕ್ಪಾಲ್ ” ಕೃತಿ ಕನ್ನಡದ ಮೊದಲ ಕೃತಿ ಎಂಬುದು ಹೆಮ್ಮೆಯ ಸಂಗತಿ ಎಂದರು.
ತಹಸೀಲ್ದಾರ ನೇತೃತ್ವದಲ್ಲಿ ಕಂದಾಯ ಇಲಾಖೆಯ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ
ಈ ಭಾಗದ ಲೇಖಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪುಸ್ತಕಗಳನ್ನು ಖರೀದಿಸುವುದಕ್ಕಾಗಿ ಕಾರ್ಯದರ್ಶಿ ಯೊಂದಿಗೆ ಮಾತಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪುಸ್ತಕ ಲೋಕಾರ್ಪಣೆ ಮಾಡಿದ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ, ಸಂವಿಧಾನದ ಮೂಲಕ ಸಮಾನತೆ ತಂದುಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ರಾಮಜಿ ಸಕ್ಪಾಲ್ ಅವರನ್ನು ನಿಜಕ್ಕೂ ಗೌರವಿಸಲೇಬೇಕಾಗಿದೆ ಎಂದು ತಿಳಿಸಿದರು.
ರಟಕಲ್ ಗ್ರಾಮದಲ್ಲಿ ಖಾನವಳಿ ಚನ್ನವ್ವಾ ಅಭೂತಪೂರ್ವ ನಾಟಕ ಪ್ರದರ್ಶನ
ದೇವಾಲಯ ಕಟ್ಟುವ ಬದಲು ಗ್ರಂಥಾಲಯ ಕಟ್ಟಬೇಕು. ದೇವಾಲಯ ಕಟ್ಟಿದರೆ ಮೂಢನಂಬಿಕೆ, ಅಸ್ಪೃಶ್ಯತೆ ಬೆಳೆಯುತ್ತದೆ. ಗ್ರಂಥಾಲಯ ಕಟ್ಟಿದರೆ ಸುಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ. ಬಹುತ್ವದ ಭಾರತ ಕಟ್ಟಲು ಪುಸ್ತಕ ಸಂಸ್ಕೃತಿ ಬಹಳಷ್ಟು ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಆ ಕಾಲದಲ್ಲೇ ೫೦ ಸಾವಿರ ಗ್ರಂಥಗಳ ಗ್ರಂಥಾಲಯ ಹೊಂದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಪುಸ್ತಕವಿಲ್ಲದೆ ಬದುಕುತ್ತಿರಲಿಲ್ಲ. ಅವರು ರಚಿಸಿದ ಸಂವಿಧಾನ ಬದಲಾವಣೆ ಮಾಡಬೇಕೆನ್ನುವವರು ಸಂವಿಧಾನಿಕ ರೀತಿಯಲ್ಲಿ ಆಡಳಿತ ನಡೆಸಬೇಕು ಎಂದು ವಿವರಿಸಿದರು.
ಪುಸ್ತಕಗಳ ಕುರಿತು ಡಾ. ಸೂರ್ಯಕಾಂತ ಸುಜ್ಯಾತ, ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿ, ಕೃತಿಗಳ ಮಹತ್ವ, ಒಳ ಹೂರಣವನ್ನು ಬಿಚ್ಚಿಟ್ಟರು.
ನದಾಫ್ ಅಭಿವೃದ್ಧಿ ಮಂಡಳಿ ರಚಿಸುವಂತೆ ಆಗ್ರಹ
ವಿಜಯಕರ್ನಾಟಕ ದಿನಪತ್ರಿಕೆಯ ಕಲಬುರಗಿ ಅವೃತ್ತಿಯ ಸ್ಥಾನಿಕ ಸಂಪಾದಕ ಗುತ್ತೇದಾರ, ದಿಶಾ ಕಾಲೇಜಿನ ಪ್ರಾಚಾರ್ಯ ಶಿವಾನಂದ ಖಜೂರಗಿ ವೇದಿಕೆಯಲ್ಲಿದ್ದರು.
ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ಸಿ.ಎಸ್. ಮಾಲಿಪಾಟೀಲ ಪ್ರಾರ್ಥನೆಗೀತೆ ಹಾಡಿದರು. ಲೇಖಕ ಪ್ರಭುಲಿಂಗ ನೀಲೂರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…