ನದಾಫ್ ಅಭಿವೃದ್ಧಿ ಮಂಡಳಿ ರಚಿಸುವಂತೆ ಆಗ್ರಹ

1
134

ಕಲಬುರಗಿ: ರಾಜ್ಯದಲ್ಲಿ ೩೮ ಲಕ್ಷ ಜನಸಂಖ್ಯೆ ಹೊಂದಿರುವ ಅತೀ ಹಿಂದುಳಿದ ಸಮುದಾಯವಾಗಿರುವ ನದಾಫ್, ಪಿಂಜಾರ ಸಮುದಾಯಕ್ಕೆ ಪ್ರತ್ಯೇಕವಾಗಿ ನದಾಫ್,ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಸಮಾಜದ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮೌಲಾಲಿ ನದಾಫ್ ಅವರು ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಗಮ ಮಂಡಳಿಗೋಸ್ಕರ ಕಳೆದ ೧೪ ವರ್ಷಗಳಿಂದಲೂ ಹೋರಾಟ ಮಾಡುತ್ತಾ ಬಂದಿದ್ದು, ಈ ಕುರಿತಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರೂ ಸರ್ಕಾರ ಇನ್ನೂವರೆಗೆ ಸ್ಪಂದಿಸಿಲ್ಲ, ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಸರ್ಕಾರ ಬಂದಾಗ ಖಂಡಿತ ನದಾಫ್ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ, ಈ ಕೂಡಲೇ ಎಚ್ಚೆತ್ತು ಮಂಡಳಿ ರಚಿಸಲಿ ಎಂದರು.

Contact Your\'s Advertisement; 9902492681

ಹೊಸ ಧರ್ಮಗಳ ಉದಯ ಪಾಠ ತೆಗೆದುಹಾಕಿರುವುದನ್ನ ಖಂಡಿಸಿ ಎಸ್ಎಫ್ಐ ಪ್ರತಿಭಟನೆ

ನದಾಫ್, ಪಿಂಜಾರ ಸಮುದಾಯದ ಜನರು ಗಾದಿ, ನೂಲು ನೇಯುವಿಕೆಯನ್ನು ಕುಲಕಸುಬಾಗಿ ತೊಡಗಿಸಿಕೊಂಡಿದ್ದಾರೆ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವುದರಿಂದ ಸಮಾಜದ ಜನರು ಇನ್ನೂವರೆಗೂ ಉನ್ನತ ಹುದ್ದೆಗಳನ್ನು ಪಡೆದಿಲ್ಲ, ಹೀಗಾಗಿ ಪ್ರತ್ಯೇಕವಾಗಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸಮಾಜದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರನ್ನಾಗಿಸಲು ಸರ್ಕಾರದಿಂದ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮೌಲಾಲಿ ನದಾಫ್ ತಿಳಿಸಿದರು.

ಒಂದು ವೇಳೆ ಈ ಬಾರಿಯು ಮಂಡಳಿ ಸ್ಥಾಪಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದರೇ, ಬೀದರನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಮೂರು ಪುಸ್ತಕಗಳ ಲೋಕಾರ್ಪಣೆ ನಾಳೆ

ಜಿಲ್ಲಾಧ್ಯಕ್ಷ ಮೊಹ್ಮದ್ ಉಮರ ನದಾಫ್ ಮಾತನಾಡಿ, ಮಂಡಳಿ ರಚನೆಗೆ ಹಲವಾರು ಬಾರಿ ರಾಜ್ಯದ್ಯಂತ ಪ್ರತಿಭಟನೆ ನಡೆಸಿ, ಮನವಿ ಮಾಡಿದ್ದೇವೆ, ಸಾಂಕೇತಿಕ ಧರಣಿ ಸಹ ಕೈಗೊಂಡು ಎಚ್ಚರಿಸಿದ್ದೇವೆ, ಮುಂದಿನ ಬಜೆಟ್ ವೇಳೆ ಸಮುದಾಯವನ್ನು ಗುರುತಿಸಿ ನಿಗಮ ಮಂಡಳಿ ರಚನೆಗೆ ಆದೇಶ ಹೊರಡಿಸಬೇಕೆಂದು ಸರ್ಕಾರಕ್ಕೆ ಸುದ್ದಿಗೋಷ್ಠಿಯಲ್ಲಿ ಒತ್ತಡ ಹೇರಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಇಮ್ರಾನ್ ನದಾಫ್, ನಗರಾಧ್ಯಕ್ಷ ಯುಸೂಫ್ ನದಾಫ್, ಉಪಾಧ್ಯಕ್ಷ ಆಸೀಫ್ ಮತ್ತಿತರರು ಹಾಜರಿದ್ದರು.

ಎಸಿಸಿ ಅಧಿಕಾರಿಗಳ ಬಂಧನಕ್ಕೆ ವಾಲ್ಮೀಕಿ ಸಮಾಜ ಒತ್ತಾಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here