ಬಿಸಿ ಬಿಸಿ ಸುದ್ದಿ

ಸುರಪುರ:ತಾಲೂಕು ಪಂಚಾಯತ ಆವರಣದಲ್ಲಿ ವಿಕಲಚೇತನರ ತರಬೇತಿ ಉದ್ಯೋಗ ಶಿಬಿರ

ಸುರಪುರ: ತಾಲೂಕಾ ಪಂಚಾಯತ ಆವರಣದಲ್ಲಿ ದಿ. ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆ ಬೆಂಗಳೂರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಾದಗಿರಿ ಮತ್ತು ತಾಲೂಕಾ ಪಂಚಾಯತ ಸುರಪುರ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರ ನಡೆಸಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾ ಪಂಚಾಯತ ಯೋಜನಾ ಅಧಿಕಾರಿಗಳಾದ ಕುಮಲಯ್ಯ, ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸ್ವಾಲಂಬನೆಗಳ ಜೀವನ ನಡೆಸುವುದರ ಜೊತೆಗೆ ಎ.ಪಿ.ಡಿ. ಸಂಸ್ಥೆಯಂತ ಸಹಕಾರದಿಂದ ಉದ್ಯೋಗ ಪಡೆದು ಇನ್ನೊಬ್ಬರಿಗೆ ಮಾದರಿಯಾಗುವಂತ ವ್ಯಕ್ತಿಗಳಾಗಿ ಬದಲಾಗಬೇಕೆಂದು ನುಡಿದರು. ಹಾಗೂ ಗ್ರಾಮ ಪಂಚಾಯತಿಮಟ್ಟದ ಶೇಕಡಾ ೫ ರಷ್ಟು ಅನುದಾನವನ್ನು ೧೫ನೇ ಹಣಕಾಸು ಯೋಜನೆಯಲ್ಲಿ ಹೊಸ ತಂತ್ರಜ್ಞಾನದಲ್ಲಿ ವಿಕಲಚೇತನರಿಗೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಒಲಂಪಿಕ್ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಬಹುಮಾನ ವಿತರಣೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತಾಲೂಕಾ ವಿಕಲಚೇತನ ನೋಡಲ್ ಅಧಿಕಾರಿಗಳಾದ ಮೀನಾಕ್ಷಿ ಪಾಟೀಲ ಮಾತನಾಡಿ, ಎ.ಪಿ.ಡಿ. ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಕಾಷ್ಟು ವಿಕಲಚೇತನರಿಗೆ ಉದ್ಯೋಗಗಳನ್ನು ನೀಡಿದ್ದು ಅವರ ಕಾರ್ಯ ಶ್ಲಾಘನೀಯ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿಕಲಚೇತನರ ಹಕ್ಕುಗಳ ಒಕ್ಕೂಟದ ವಿಭಾಗಿಯ ಅಧ್ಯಕ್ಷ ಹಾಗು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಂಗನಗೌಡ ಧನರಡ್ಡಿ ಇವರಿಗೆ ಸನ್ಮಾನಿಸಿಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ೧೦ ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ಸಾಧನೆ ಸಲಕರಣೆ ವಿತರಿಸಲಾಯಿತು. ೬೦ಕ್ಕೂ ಅಧಿಕ ವಿಕಲಚೇತನರು ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ

ಈ ಸಂದರ್ಭದಲಿ ವಿಕಲಚೇತನರ ಮುಖಂಡರಾದ ವಿಕಲಚೇತನರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೈರಿಮರಡಿ,ತಾಲೂಕು ಅಧ್ಯಕ್ಷ ನಾಗೇಂದ್ರ ದೊರಿ ಚಂದಲಾಪೂರ, ಎಪಿ.ಡಿ. ಸಂಸ್ಥೆಯ ಅಧಿಕಾರಿಗಳಾದ ಶಿವಯೋಗಿ ಗುಲಬರ್ಗಾ, ಶ್ರೀಧರ ಮಂಗಳೂರು ಎಮ್.ಆರ್.ಡಬ್ಲ್ಯೂ, ಮಾಳಪ್ಪ ಪೂಜಾರಿ, ದೇವಿಂದ್ರಪ್ಪ ಬಾಚಿಮಟ್ಟಿ ಉಪಾಧ್ಯಕ್ಷರು, ಶರಣಯ್ಯಸ್ವಾಮಿ ದೇವಪುರ, ಪ್ರದೀಪಗೌಡ ಪಾಟೀಲ, ಶಂಕ್ರಯ್ಯಸ್ವಾಮಿ ಸಹ ಕಾರ್ಯದರ್ಶಿ, ಸಿದ್ದಪ್ಪ ಅರಿಕೇರಿ ಸ್ವಾಗತಿಸಿದರು, ರೇಣುಕಾ ಪಾಟೀಲ ಪ್ರಾರ್ಥಿಸಿದರು, ದೊಡ್ಡಪ್ಪಗೌಡ ನಾಗರಾಳ ನಿರೂಪಿಸಿದರು, ಮರಲಿಂಗಪ್ಪ ಚಂದ್ಲಾಪುರ ವಂದಿಸಿದರು.

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago