ವಚನ ಹಸ್ತಪ್ರತಿಗಳು ಆರಾಧನೆ ವಸ್ತುಗಳಾಗಿದ್ದು ವಿಷಾದನೀಯ: ಹಿರಿಯ ಸಾಹಿತಿ ಮ.ಗು.ಬಿರಾದಾರ

ಕಲಬುರಗಿ: ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ ವಚನಗಳ ಹಸ್ತಪ್ರತಿಗಳು ಸಾಕಷ್ಟು ಹಾಳಾಗಿವೆ. ಜನರು ಆ ಹಸ್ತಪ್ರತಿಗಳನ್ನು ಜಗಲಿ ಮೇಲಿಟ್ಟು ವಿಭೂತಿ, ಕುಂಕುಮ ಹಚ್ಚಿ ಪೂಜೆ ಮಾಡಿ ಆರಾಧನೆಯ ವಸ್ತುಗಳನ್ನಾಗಿಸಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ. ಮ.ಗು.ಬಿರಾದಾರ ಅವರು ವಿಷಾದ ವ್ಯಕ್ತಪಡಿಸಿದರು.

ಗುರುವಾರ ಕಲಬುರಗಿಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವ ಪೀಠವು ವಿ.ವಿ.ಯ ಸಮ್ಮೇಳನ ಸಭಾಂಗಣದಲ್ಲಿ “ವಚನ ಸಾಹಿತ್ಯ, ಸಾಮಾಜಿಕ, ಸಾಂಸ್ಕøತಿಕ ಮತ್ತು ವೈಚಾರಿಕ ಅನುಸಂಧಾನ” ಕುರಿತು ಆಯೋಜಿಸಿದ ಎರಡು ದಿನಗಳ ಅಂತರÀರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಮೌಲ್ಯವನ್ನು ಅರಿಯುವ ಬದಲು ಪೂಜನೀಯ ಸ್ಥಾನದಲಿಟ್ಟಿದ್ದು ಬೇಸರದ ಸಂಗತಿ ಎಂದರು.

ಕೆ.ಕೆ.ಆರ್.ಡಿ.ಬಿ: ನಾಲ್ಕನೇ ಕಂತಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ

12ನೇ ಶತಮಾನದ ಕಾಲಘಟ್ಟದಲ್ಲಿ ಮಠಗಳು ವಚನಗಳಿಗೆ ಧಾರ್ಮಿಕ-ಜಾತಿ ಸ್ವರೂಪÀವನ್ನು ನೀಡಿದವು. ಇದರಿಂದಾಗಿ ಬೇರೆ ಧರ್ಮದವರು ವಚನಗಳತ್ತ ಮುಖ ಮಾಡಲು ಸಾಧ್ಯವಾಗಲಿಲ್ಲ. ಮಹಾ ಮಾನವತಾವಾದಿ ಬಸವಣ್ಣನವರನ್ನು ಒಂದೆಡೆ ಕಟ್ಟಿಹಾಕುವ ಹುನ್ನಾರವನ್ನು ಆಗಿನ ಮಠಸ್ಥರು ಮಾಡಿದ್ದರು. ಹೀಗಾಗಿ ವಚನ ಸಾಹಿತ್ಯದ ಪ್ರಚಾರ ಕ್ರಿಯೆ ಪಸರಗೊಳ್ಳಲಿಲ್ಲ ಎಂದರು.

ವಚನವು ಸಾಮಾಜಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಸಂಪತ್ತು ಎಂದು ಅಭಿಪ್ರಾಯಪಟ್ಟ ಅವರು, ಬಸವಣ್ಣ ಅವರ ಚಿಂತನೆಗಳು ಸಾಮಾಜಿಕ ಕ್ರಿಯಾತ್ಮಕ ಶಕ್ತಿಯಾಗಿವೆ. ಶರಣರ ವಚನಗಳನ್ನು ನಾವು ಸೃಜನಾತ್ಮಕವಾಗಿ ಬೆಳೆಸಬೇಕು ಎಂದು ಕರೆ ನೀಡಿದರು.

ವಚನ ಸಾಹಿತ್ಯವನ್ನು ಡಾರ್ವಿನ್ ಅವರ ವಿಕಾಸವಾದಕ್ಕೆ ತೌಲನಿಕವಾಗಿ ಉದಾಹರಣೆ ನೀಡಿದ ಮ.ಗು. ಬಿರಾದಾರ ಅವರು, ಡಾರ್ವಿನ್‍ನ ಜೀವ ವಿಕಾಸವಾದಂತೆ ವಚನ ಸಾಹಿತ್ಯದಲ್ಲಿ ಬಸವಣ್ಣ ಅವರು ಆತ್ಮ ವಿಕಾಸನವನ್ನು ಹಂತ-ಹಂತವಾಗಿ ಮಾಡಿದ್ದಾರೆ. ಪ್ರಸ್ತುತ ವಚನ ಸಾಹಿತ್ಯವನ್ನು ಸೃಜನಾತ್ಮವಾಗಿ ಬಳಸುವ ಮೂಲಕ ವಚನದಲ್ಲಿ ರೂಪಾಂತರ ಕ್ರಿಯೆ ಆಗಬೇಕು ಎಂದು ಆಶಿಸಿದರು.

ಪ್ರಧಾನಿ ಮೋದಿ, ಷಾ ಪ್ರತಿಕೃತಿ ದಹಿಸಿ ಪ್ರತಿಭಟನೆ

ವಚನಗಳು ಮಾನವೀಯತೆ ತುಂಬಿದ ಖಜಾನೆ: ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಮಾತನಾಡಿ, ಶರಣರ ವಚನಗಳು ಮಾನವೀಯತೆ ತುಂಬಿದ ಖಜಾನೆ, ಭಂಡಾರಗಳಾಗಿವೆ ಎಂದ ಶ್ಲಾಘಿಸಿದ ಅವರು ಈ ಜಗತ್ತಿಗೆ ಶರಣರು ನೀಡಿದ ಅತ್ಯಂತ ಮಹತ್ವದ ತತ್ವವೆಂದರೆ ಅದು ‘ಶರಣರ ತತ್ವ’. ಬಸವಣ್ಣನವರು ವಿಶ್ವ ಮಾನವ ತತ್ವವನ್ನು ನೀಡಿದ್ದು, ನೈಜ ಪ್ರಜಾಪ್ರಭುತ್ವದ ಕಲ್ಪನೆಯನ್ನು ವಚನಗಳ ಮೂಲಕ ಬಸವಾದಿ ಶರಣರು ನಮಗೆ ನೀಡಿದ್ದಾರೆ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ. ರಂಗರಾಜ ವನದುರ್ಗಾ ಅವರು ಮಾತನಾಡಿ, ಕನಕನಿಗೆ ರಾಗಿ ರಾಜ್ಯ ಕನಿಸಿತ್ತು, ಗಾಂಧೀಜಿ ಅವರಿಗೆ ರಾಮರಾಜ್ಯ ಕಟ್ಟುವ ಕನಸಿತ್ತು. ಡಾ.ಅಂಬೇಡ್ಕರ್ ಅವರಿಗೆ ಸಮತಾ ರಾಜ್ಯ, ಪ್ಲೇಟೋ ಅವರಿಗೆ ಆದರ್ಶ ರಾಜ್ಯ, ಮಾಕ್ರ್ಸ್‍ನಿಗೆ ಕಾರ್ಮಿಕ ರಾಜ್ಯ, ನಂಜುಂಡಸ್ವಾಮಿ ಅವರಿಗೆ ರೈತ ರಾಜ್ಯವಾದರೆ ಬಸವಣ್ಣನವರಿಗೆ ಕಲ್ಯಾಣ ರಾಜ್ಯ ಕಟ್ಟುವ ಕನಸಿತ್ತು ಎಂದರು.

ವಿದ್ಯಾರ್ಥಿಗಳಿಗಾಗಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ: ಬಸವರಾಜ ಯಳಸಂಗಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವಿ.ಅಳಗವಾಡಿ ಅವರು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಮೌಲ್ಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ. ವಚನ ಹಸ್ತಪ್ರತಿಗಳು ಲಭ್ಯವಾದಲ್ಲಿ ಅವುಗಳಿಗೆ ಡಿಜಿಟಲ್ ಸ್ಪರ್ಶ ನೀಡಿ ವಿದ್ಯಾರ್ಥಿಗಳ ಹಾಗೂ ಮುಂದಿನ ಪೀಳಿಗೆಗಳ ಅರಿವಿಗಾಗಿ ಸಂರಕ್ಷಿಸುವ ಕೆಲಸ ವಿ.ವಿ. ಮಾಡಲಿದೆ ಎಂದರು.

ಲೇಖಕ ಪ್ರೊ. ಬಸವರಾಜ ಕಲ್ಗುಡಿ ಅವರು ಆಶಯ ಭಾಷಣ ಮಾಡಿದರು. ಸಮ್ಮೇಳನದಲ್ಲಿ ವಿ.ವಿ. ಕುಲಸಚಿವ ಪ್ರೊ.ಬಸವರಾಜ ಡೊಣೂರ, ಬಸವ ಪೀಠದ ಸಂಯೋಜಕ ಗಣಪತಿ ಬಿ. ಸಿನ್ನೂರ, ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಬಸವ ಸಮಿತಿಯ ಹಲವು ಮುಖಂಡರು ಉಪಸ್ಥಿತರಿದ್ದರು.

ಕಲಬುರಗಿ: ವಿಷ ಸೇವಿಸಿ ರೈತ ಆತ್ಮಹತ್ಯೆ

ಡಾ.ಸಫಿಯಾ ಪರ್ವಿನ್ ಮತ್ತು ಪ್ರೊ. ಕಿರಣ್ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಜಯದೇವಿ ತಂಡದಿಂದ ವಚನಗಾಯನ ನಡೆಯಿತು.

sajidpress

Recent Posts

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

6 mins ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

9 mins ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

14 mins ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ್ಲ –ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

19 mins ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

24 mins ago

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420