ರಾಯಚೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಆಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ಜನ ವಿರೊಧಿ ನೀತಿ ಕೈ ಬಿಡಲು ಆಗ್ರಹಿಸಿ ಇಂದು ರಾಯಚೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂದೆ CPM ಪಕ್ಷದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಮಂತ್ರಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ರ ಪ್ರತಿಕೃತಿ ದಹನ ಮಾಡಲು ಮುಂದಾದಾಗ ಪೋಲಿಸರು ಪ್ರತಿಕೃತಿ ದಹನ ಮಾಡದಂತೆ ತಡೆಯಲು ಯತ್ನಿಸಿದರು. ಈ ವೇಳೆಯಲ್ಲಿ ಪ್ರತಿಭಟನಾಕಾರರ ಮತ್ತು ಪೋಲಿಸರ ನಡುವೆ ಘರ್ಷಣೆ ಉಂಟಾಗಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕಲಬುರಗಿ: ವಿಷ ಸೇವಿಸಿ ರೈತ ಆತ್ಮಹತ್ಯೆ
ನಂತರ ಪಟ್ಟು ಬಿಡದ ಹೋರಾಟಗಾರರು ಪೋಲಿಸರ ಕಣ್ಣು ತಪ್ಪಿಸಿ ಅಮೀತ್ ಷಾ ಮತ್ತು ಮೋದಿಯವರ ಭಾವಚಿತ್ರ ಸುಡುವುದರ ಜೊತೆಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ CPI ( M ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ ವಿರೇಶ, ಮುಖಂಡರಾದ ಕರಿಯಪ್ಪ ಅಚ್ಚೋಳ್ಳಿ ಎಚ್, ಪದ್ಮಾ, ಹಾಗೂ ಶಿವಕುಮಾರ ಮ್ಯಾಗಳಮನಿ, ಲಿಂಗರಾಜ ಕಂದಗಲ್, ಬಸವರಾಜ ದೀನಸಮುದ್ರ, ಜಿಲಾನಿ ಸೇರಿ ಇತರರಿದ್ದರು