ಆಳಂದ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೋವಿಡ್-19 ನಂತರದ ದಿನಗಳಲ್ಲಿ ಬಸ್ ಗಳ ಓಡಾಟ ಇಳಿಮುಖವಾದ ಪರಿಣಾಮ ಇಂದಿಗೂ ಕೂಡಾ ವಿದ್ಯಾರ್ಥಿಗಳು ಹಲವು ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ಅಗಮಿಸಬೇಕಾದರೆ, ಬಸ್ ಪಾಸ್ ಹೊಂದಿದ್ದರು ಕೂಡಾ ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡುವಂತ ಸ್ಥಿತಿ ಆಳಂದ ತಾಲ್ಲೂಕಿನಲ್ಲಿ ಕಂಡು ಬರುತ್ತಿದೆ.
ಆಳಂದ ತಾಲ್ಲೂಕಿನ ಸಾವಳೇಶ್ವರ, ಪಡಸಾವಳಿ, ಜಿಡಗಾ, ಜಮಗಾ, ಮುನ್ನೊಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಸ್ ಸಂಚಾರ ಓಡಾಟ ಇಳಿಮುಖವಾದ ಪರಿಣಾಮ ವಿದ್ಯಾರ್ಥಿಗಳು ಬಸ್ ಗಾಗಿ ಬೆಳಿಗ್ಗೆ 9:00 ಗಂಟೆಯಿಂದ ಕಾಯ್ದು ಕುಳಿತ್ತಿದ್ರು ಕೂಡಾ ಬಸ್ ನಲ್ಲಿ ಸ್ಥಳವಿಲ್ಲದೆ ಅನೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುವಂತಾಗುತ್ತಿಲ್ಲ.
ಕಲಬುರಗಿ: ವಿಷ ಸೇವಿಸಿ ರೈತ ಆತ್ಮಹತ್ಯೆ
ಆಳಂದ ತಾಲ್ಲೂಕಿನಲ್ಲಿ ಆಳಂದ ಬಸ್ ಘಟಕದ ವತಿಯಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೊದಲಿರುವ ಬಸ್ ಹಾಗೂ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು, ಬಸ್ ನಲ್ಲಿ ಸ್ಥಳವಿಲ್ಲದೆ ಅನೇಕ ವಿದ್ಯಾರ್ಥಿಗಳು ಬಸ್ ಗೆ ಜೋತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಯಾರು ಹೊಣೆಗಾರರು? ಕೂಡಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸಂಚಾರ ಹೆಚ್ಚಿಸಿದಾಗ ಮಾತ್ರ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತದೆ, ಕೂಡಲೇ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ನ ವ್ಯವಸ್ಥೆ ಕಲ್ಪಿಸಬೇಕೆಂದು ಸಾಮಾಜಿಕ ಹೋರಾಟಗಾರ ಹಾಗೂ ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.