ಜಿಮ್ಸ್‍ನಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಿ: ಡಾ. ಕವಿತಾ ಪಾಟೀಲ್

ಕಲಬುರಗಿ: ಜಿಮ್ಸ್‍ನ ಇ.ಎನ್.ಟಿ. ವಿಭಾಗದಲ್ಲಿ ಆಡಿಯೋಮೆಟ್ರಿ ಹಾಗೂ ಸ್ಪೀಚ್ ಥೆರೆಪಿಗೆ ಸಂಬಂಧಿಸಿದ ಎಲ್ಲಾ ಮೂಲ ಸೌಕರ್ಯಗಳು ಲಭ್ಯವಿದ್ದು, ಅದನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲಬುರಗಿ ಜಿಮ್ಸ್ ಆಸ್ಪತ್ರೆಯ ನಿರ್ದೇಶಕಿ ಡಾ. ಕವಿತಾ ಪಾಟೀಲ ಅವರು ಮನವಿ ಮಾಡಿಕೊಂಡರು.

ಬುಧವಾರ ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯ ಇ.ಎನ್.ಟಿ. ವಿಭಾಗ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ “ಇರಲಿ ಎಲ್ಲರಿಗೂ ಶ್ರವಣದ ಆರೈಕೆ” ಎಂಬ ಘೋಷವಾಕ್ಯದಡಿ ‘ವಿಶ್ವ ಶ್ರವಣ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

40 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಶಾಸಕಿ ಕನೀಜ್ ಫಾತೀಮಾ ಚಾಲನೆ

ಕಳೆದ ಕೆಲವು ವರ್ಷಗಳಿಂದ ಜಿಮ್ಸ್‍ನಲ್ಲಿ ಶ್ರವಣದೋಷ ಹಾಗೂ ಸ್ಪೀಚ್ ಥೆರಪಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಫಲರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ನೀಡಿ ಸಾರ್ವಜನಿಕರಿಗೆ ಸಹಾಯಕವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಮ್ಸ್‍ನ ಇ.ಎನ್.ಟಿ. ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಮೇಳಕುಂದಿ ಅವರು 2018 ರಿಂದ 2021ರ ವರೆಗೆ ಶ್ರವಣದೋಷ ಗುರುತಿಸುವಿಕೆ, ಸ್ಪೀಚ್ ಥೆರೆಪಿ ಹಾಗೂ ನವಜಾತಾ ಶಿಶು ತಪಾಸಣೆ ಕುರಿತು ಮಾಹಿತಿ ನೀಡಿದರು.

ಬಿಸಿ ನೀರು ಚಲ್ಲಿ ಓರ್ವ ಬಾಲಕಿ ಸಾವು, ನಾಲ್ವರು ಗಂಭೀರ ಗಾಯ

ಆಡಿಯೋಮೆಟ್ರಿ ಮೂಲಕ 2018 ರಲ್ಲಿ 1851 ಹಾಗೂ ಸ್ಪೀಚ್ ಥೆರೆಪಿ ಮೂಲಕ 612 ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, 2019 ರಲ್ಲಿ 2072 ಹಾಗೂ 689 ಜನರಿಗೆ ತಪಾಸಣೆ ಮಾಡಿ ಗುಣಪಡಿಸಲಾಗಿದೆ. 2020 ರಲ್ಲಿ 2780 ಹಾಗೂ 1396 ಮಂದಿಗೆ ಆಡಿಯೋಮೆಟ್ರಿ ಮತ್ತು ಸ್ಪೀಚ್ ಥೆರೆಪಿ ಮೂಲಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ನವಜಾತ ಶಿಶುಗಳಿಗೆ ಸ್ಕ್ರಿನಿಂಗ್ ಮಾಡಲಾಗುತ್ತಿದ್ದು, ಸ್ಕ್ರಿನಿಂಗ್ ಮಾಡಿಸುವುದು ಅವಶ್ಯಕವಾಗಿದೆ. ವ್ಯಾಕ್ಸಿನ್ ತರಹ ಸ್ಕ್ರಿನಿಂಗ್ ಸಹ ದೇಶದಲ್ಲಿ ಜಾಗೃತಿ ಆಗಬೇಕು. ಜನವರಿಯಲ್ಲಿ 57 ಹಾಗೂ ಫೆಬ್ರುವರಿಯಲ್ಲಿ 100 ನವಜಾತ ಶಿಶುಗಳಿಗೆ  ಸ್ಕ್ರಿನಿಂಗ್ ಮಾಡಿದೆ. ಕಳೆದ ತಿಂಗಳು ಸ್ಕ್ರಿನಿಂಗ್ ಮಾಡಿದ 100 ರಲ್ಲಿ 24 ಮಕ್ಕಳಲ್ಲಿ ಹೆಚ್ಚಿನ ಅಪಾಯ ಕಂಡುಬಂದಿದ್ದು, ಅವುಗಳ ಆರೈಕೆ ನಡೆಯುತ್ತಿದೆ  ಎಂದರು.

ಬಾಲಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧ ಕ್ರಮ

ಈ ವೇಳೆಯಲ್ಲಿ ಎನ್.ಪಿ.ಪಿ.ಸಿ.ಡಿ. ನೋಡಲ್ ಅಧಿಕಾರಿ ಡಾ. ಶರಣಬಸಪ್ಪಾ ಕ್ಯಾತನಾಳ ಮತ್ತು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಹಾಗೂ ಅಧೀಕ್ಷಕರು ಡಾ. ಅಂಬರಾಯ .ಎಸ್. ರುದ್ರವಾಡಿ ಅವರು ಮಾತನಾಡಿದರು.

ಆಡಿಯೋಮೆಟ್ರಿ ಹಾಗೂ ಸ್ಪೀಚ್ ಥೆರೆಪಿಯು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಿ.ಹೆಚ್.ಸಿ. ಹಾಗೂ ಪಿ.ಹೆಚ್.ಸಿ.ಗಳಲ್ಲಿ ಪ್ರತಿ ಬುಧವಾರ ಹಾಗೂ ಶುಕ್ರವಾರ ಎನ್.ಪಿ.ಪಿ.ಸಿ.ಡಿ. ಮತ್ತು ಆಯುμï ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ ಎಂದು ಎನ್.ಪಿ.ಪಿ.ಸಿ.ಡಿ.ಯ  ರವಳಿ ಪಾಟೀಲ್ ಹಾಗೂ ಆಯುμï ಕೇಂದ್ರದ ಅನೀನ, ಶೀತಲ್ ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಹ್ಮದ್ ಶಫೀಯುದ್ದಿನ್, ಡಾ. ವಿ.ಎಸ್. ಪಾಟೀಲ್, ಇ.ಎನ್.ಟಿ. ವಿಭಾಗದ ಹೆಚ್.ಓ.ಡಿ. ಗಳು ಹಾಗೂ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಡಾ. ಶ್ರೀಕಾಂತ ಹೂಗಾರ್ ಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420