ಸುರಪುರ: ಕಳೆದ ಕೆಲ ತಿಂಗಳುಗಳ ಹಿಂದೆ ಲಿಂಗೈಕ್ಯರಾಗಿರುವ ಖ್ಯಾತ ಸಾಹಿತಿಗಳು ಹಾಗು ಚಿಂತಕರಾದ ಡಾ:ಈಶ್ವರಯ್ಯ ಮಠದ ಜೀವನ ಮತ್ತು ಸಾಹಿತ್ಯದ ಕುರಿತು ಹಾಗು ನೆನಪೇ ನಂದಾದೀಪ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸುವ ಕುರಿತು ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಮಾತನಾಡಿ,ಡಾ: ಈಶ್ವರಯ್ಯ ಮಠ ಅವರು ನಾಡು ಕಂಡ ಮಹಾನ್ ಮೇಧಾವಿ ಚಿಂತಕರಲ್ಲಿ ಒಬ್ಬರಾಗಿದ್ದರು,ಆದ್ದರಿಂದ ಅವರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿ ನಡೆಸೋಣ ಎಂದರು.
ನೂರಾರು ಕೂಲಿಕಾರರಿಂದ ತಾಲೂಕು ಪಂಚಾಯತಿಗೆ ಮುತ್ತಿಗೆ
ಅಲ್ಲದೆ ಅವರ ಒಡನಾಡಿಗಳು ಸಹೋದ್ಯೋಗಿಗಳು ಅವರ ಆಪ್ತರು ಮತ್ತು ಅವರ ಕುಟುಂಬ ಸದಸ್ಯರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸೋಣ.ಅವರ ಸಮಾಧಿ ಸ್ಥಳವಿರುವ ದೇವರಗೋನಾಲದ ಈಶ್ವರ ವಿಹಾರದಲ್ಲಿಯೇ ಕಾರ್ಯಕ್ರಮವನ್ನು ನಡೆಸುವ ಕುರಿತು ಹಾಗು ನಾಡಿನ ಖ್ಯಾತ ಚಿಂತಕರನ್ನು ಕರೆಯಿಸುವ ಮತ್ತು ಕಾರ್ಯಕ್ರಮದ ಉದ್ಘಾಕರನ್ನಾಗಿ ಮಾಜಿ ಕೆಪಿಎಸ್ಸಿ ಮುಖ್ಯಸ್ಥರಾಗಿದ್ದ ಹಾಗು ಈಶ್ವರ ಮಠರ ಮಾರ್ಗದರ್ಶಕರಂತಿದ್ದ ಭೀಮಪ್ಪ ಗೋನಾಲರನ್ನು ಆಹ್ವಾನಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.ಅಲ್ಲದೆ ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀನಿವಾಸ ಜಾಲವಾದಿ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ ಹಿರಿಯ ಸಾಹಿತಿಗಳಾದ ಶಾಂತಪ್ಪ ಬೂದಿಹಾಳ ನಬಿಲಾಲ ಮಕಾಂದಾರ ಶರಣಗೌಡ ಪಾಟೀಲ್ ಶರಣಬಸಪ್ಪ ಯಾಳವಾರ ಎಮ್.ಎಸ್.ಹಿರೇಮಠ ಶಿವಕುಮಾರ ಅಮ್ಮಾಪುರ ಬಲಭೀಮ ದೇಸಾಯಿ ದೇವರಗೋನಾಲ ಮಹಾಂತೇಶ ಗೋನಾಲ ಕುತಬುದ್ದಿನ್ ಅಮ್ಮಾಪುರ ಗೋಪಣ್ಣ ಯಾದವ್ ಮಾನಯ್ಯ ಗೋನಾಲ ಸಿದ್ದಯ್ಯಸ್ವಾಮಿ ಸ್ಥಾವರಮಠ ಸೇರಿದಂತೆ ಅನೇಕ ಜನರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…