ಸುರಪುರ: ಕೂಲಿ ಹಣವನ್ನು ನೀಡಿಲ್ಲ ಸರಿಯಾಗಿ ಕೆಲಸವನ್ನು ನೀಡುತ್ತಿಲ್ಲ ಹಿಂಗಾದರೆ ನಾವೆಲ್ಲರು ಜೀವನ ಹೇಗೆ ನಡೆಸೋಣ ಎಂದು ನಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಲಿಕಾರರು ತಾಲೂಕು ಪಂಚಾಯತಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ನಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಸಂಖ್ಯೆಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರು ಏಕಾಎಕಿ ನಗರದ ತಾಲೂಕು ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಮೂಲಕ ದಿಗ್ಭ್ರಮೆ ಮೂಡಿಸಿದರು.ಈ ಸಂದರ್ಭದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ ಕಾರ್ಮಿಕರು ಪಂಚಾಯತಿ ಅಭೀವೃಧ್ಧಿ ಅಧಿಕಾರಿಗಳು ನಮಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ,ಕೆಲಸ ಮಾಡಿದವರಿಗೆ ಕೂಲಿ ಹಣ ನೀಡಿಲ್ಲ.ಕೆಲಸ ಮಾಡಿ ನಾವು ಕೂಲಿ ಇಲ್ಲದಿದ್ದರೆ ಜೀವನ ಹೇಗೆ ನಡೆಸೋದು ಎಂದು ಪ್ರಶ್ನಿಸಿದರು.ಇನ್ನೂ ಅನೇಕರು ಕೂಲಿ ಕೇಳಿದರೆ ಕೆಲಸವಿಲ್ಲ,ದುಡಿದವರಿಗೆ ಕೂಲಿ ಇಲ್ಲ,ಇದರಿಂದ ಬೇಸತ್ತು ಇಂದು ತಾಲೂಕು ಪಂಚಾಯತಿಗೆ ಬಂದಿರುವುದಾಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಬೇಸರ ತೋಡಿಕೊಂಡರು.
ಕೆ.ಕೆ.ಆರ್.ಡಿ.ಬಿ 2 ಸಾವಿರ ಕೋಟಿ ಅನುದಾನದ ನಿರೀಕ್ಷೆಗೆ ಅಪ್ಪುಗೌಡರು ಪ್ರಯತ್ನಿಸಿಲ್ಲ: ನಾಲವಾರಕರ್ ಆಕ್ರೋಶ
ಕಾರ್ಮಿಕರ ಬೇಡಿಕೆಗಳನ್ನು ಶಾಂತವಾಗಿ ಆಲಿಸಿದ ಇಒ ಅಂಬ್ರೇಶ ಮಾತನಾಡಿ,ನಿಮ್ಮ ಆಕ್ರೋಶ ಅರ್ಥವಾಗುತ್ತದೆ.ಆದರೆ ತಾವೆಲ್ಲರು ಹೀಗೆ ಬಂದು ಧರಣಿ ನಡೆಸುವುದರಿಂದ ಇಲ್ಲಿಯ ಎಲ್ಲಾ ಸಿಬ್ಬಂದಿಗಳಿಗೆ ಕೆಲಸ ಮಾಡಲು ತೊಂದರೆಯಾಗಲಿದೆ.ಆದ್ದರಿಂದ ತಾವು ತಿಳಿಸಿದರೆ ನಾನೇ ಸ್ವತಃ ನಿಮ್ಮ ಸ್ಥಳಕ್ಕೆ ಬಂದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವೆನು,ಈಗ ನಿಮ್ಮ ಸಮಸ್ಯೆಗಳು ನಮ್ಮ ಗಮನಕ್ಕೆ ತಂದಿರುವಿರಿ ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ ನಂತರ ಧರಣಿಯನ್ನು ನಲ್ಲಿಸಿದರು.
ಈ ಸಂದರ್ಭದಲ್ಲಿ ಆರಕ್ಷಕ ಉಪ ನಿರೀಕ್ಷಕ ಚಂದ್ರಶೇಖರ ನಾರಾಯಣಪುರ ಸೇರಿದಂತೆ ನೂರಾರು ಸಂಖ್ಯೆಯ ಕೂಲಿಕಾರ್ಮಿಕರಿದ್ದರು.