ಬಿಸಿ ಬಿಸಿ ಸುದ್ದಿ

ಎನ್.ಎಸ್. ಹಿರೇಮಠಗೆ ಸನ್ಮಾನ

ಕಲಬುರಗಿ: ಸಾಗೋ ಜೀವನದಲ್ಲಿ ನಮ್ಮ ಜೊತೆ ಯಾರು ಇರುತ್ತಾರೆ ಅನ್ನೋದಕ್ಕಿಂತ ಕಷ್ಟದಲ್ಲಿ ಯಾರು ಕೈ ಹಿಡಿಯುತ್ತಾರೆ ಅನ್ನೋದು ಮುಖ್ಯ. ಏಕೆಂದರೆ ಒಬ್ಬರನ್ನೊಬ್ಬರು ಅರಿತಾಗ ಮಾತ್ರ ಪರರ ನೋವು ಅರ್ಥವಾಗುತ್ತದೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯPರು ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅಭಿಪ್ರಾಯಪಟ್ಟರು.

ಮೊನ್ನೆ ನಗರದ ಕಲಾ ಮಂಡಳದಲ್ಲಿ ಶ್ರೀನಿವಾಸ ಸರಡಗಿ ಚಿನ್ನದಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠ ಹಾಗೂ ವೀರಶೈವ ಲಿಂಗಾಯತ ಜಂಗಮ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ನೂತನವಾಗಿ ಅಕಾಡೆಮಿಕ ಕೌನ್ಸಿಲ ಸದಸ್ಯರಾಗಿ ನಾಮನಿರ್ದೇಶನಗೊಂಡ ಎನ್.ಎಸ್. ಹಿರೇಮಠ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಸನ್ಮಾನಗಳು ಜವಾಬ್ದಾರಿ ಹೆಚ್ಚಿಸುವುದರೊಂದಿಗೆ ನಿಸ್ವಾರ್ಥ ಭಾವ ಇಮ್ಮಡಿಗೊಳಿಸುತ್ತವೆ. ಹಲವಾರು ವರ್ಷಗಳಿಂದ ಹಿರೇಮಠರು ಈ ಭಾಗದಲ್ಲಿ ಅPರದೊಂದಿಗೆ eನದ ಜ್ಯೋತಿ ಹಚ್ಚಿ ಈ ಭಾಗದ ಸೇವೆ ಮಾಡುತ್ತಿರುವುದನ್ನು ವಿಶ್ವವಿದ್ಯಾಲಯ ಗುರುತಿಸಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಕೆ.ಕೆ.ಆರ್.ಡಿ.ಬಿ 2 ಸಾವಿರ ಕೋಟಿ ಅನುದಾನದ ನಿರೀಕ್ಷೆಗೆ ಅಪ್ಪುಗೌಡರು ಪ್ರಯತ್ನಿಸಿಲ್ಲ: ನಾಲವಾರಕರ್ ಆಕ್ರೋಶ

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀನಿವಾಸ ಸರಡಗಿ ಪೂಜ್ಯರಾದ ಶ್ರೀ ಷ.ಬ್ರ.ಡಾ. ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡುತ್ತ ಅಧಿಕಾರ, ಅಂತಸ್ತು ಪದವಿ, eನ, ಸೋಮಾರಿಗಳ ಸ್ವತ್ತಲ್ಲ ಯಾರು ನಿಸ್ವಾರ್ಥದಿಂದ ಪರಿಶ್ರಮ ಪಡುತ್ತಾರೋ ಅಂತಹ ಸಾಧಕರ ಸೊತ್ತಾಗುತ್ತದೆ ಎಂದು ನುಡಿದರು. ಮಹಾಗಾಂವ ಕಳ್ಳಿಮಠದ ಪೂಜ್ಯರಾದ ಶ್ರೀ ಗುರುಲಿಂಗ ಶಿವಾಚಾರ್ಯರು ಹಾಗೂ ಅವರಾದ ಪೂಜ್ಯರಾದ ಮರುಳಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿದರು.

ವೇದಿಕೆಯ ಮೇಲೆ ಎ.ಪಿ.ಎಂ.ಸಿ. ಅಧ್ಯPರಾದ ಅಪ್ಪು ಕಣಕಿ, ಶಿವಾನಂದ ಹಿರೇಮಠ, ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಭು ಹಾದಿಮನಿ ಉಪಸ್ಥಿತರಿದ್ದರು. ಮಹಾನಗರ ಪಾಲಿಕೆಯ ಸದಸ್ಯರಾದ ಶಿವುಸ್ವಾಮಿ ಅಧ್ಯPತೆ ವಹಿಸಿದ್ದರು.

ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಹಿರಿದು: ಶಿವ ಅಷ್ಠಗಿ

ಮಲ್ಲಮ್ಮ ತಳವಾರ ಪ್ರಾರ್ಥಿಸಿದರು, ಸುರೇಶ ಬಡಿಗೇರ ಸ್ವಾಗತಿಸಿದರು, ರವಿಕುಮಾರ ಶಹಾಪೂರಕರ ನಿರೂಪಿಸಿದರು, ನ್ಯಾಯವಾದಿ ಈರಣ್ಣಗೌಡ ಪೊಲೀಸ ಪಾಟೀಲ ವಂದಿಸಿದರು. ಇದೇ ಸಂದರ್ಭದಲ್ಲಿ ಎನ್.ಎಸ್. ಹಿರೇಮಠ ಹಾಗೂ ಅವರ ಧರ್ಮಪತ್ನಿಯಾದ ಪೂರ್ಣಿಮಾ ಹಿರೇಮಠ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪುರಾಣಿಕ, ನಾಗಲಿಂಗಯ್ಯ ಮಠಪತಿ, ರುದ್ರಯ್ಯ ಹಿರೇಮಠ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago