ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಹಿರಿದು: ಶಿವ ಅಷ್ಠಗಿ

1
34

ಕಲಬುರಗಿ: ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಜೀವನದ ಹಿಂದೆ ಮಹಿಳೆಯ ಪಾತ್ರ ಹಿರಿದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಟಗಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ಸಮತಾ ಸೈನಿಕ ದಳ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಶ್ರೀ ಹೋಮ ನರ್ಸಿಂಗ್ ಸಂಸ್ಥೆ ಜಂಟಯಾಗಿ ಆಯೋಜಿಸಿದ್ದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡುತ್ತಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಶೋಷಣೆಯ ವಿರುದ್ಧ, ಅವರ ಹಕ್ಕುಗಳ ಪರವಾಗಿ ಆರಂಭವಾದ ಹೋರಾಟ ಮುಂದೆ ಮಹಿಳಾ ದಿನವಾಗಿ ರೂಪಗೊಂಡಿತು. ಭಾರತದಲ್ಲಿ ಮಹಿಳೆಯರ ಶೋಷಣೆಯ ವಿರುದ್ಧ ಹೋರಾಟ ಮಾಡಿ ಸಂವಿಧಾನದ ಮುಖಾಂತರ ಅವರಿಗೆ ಪುರುಷರಷ್ಟೇ ಸರಿ- ಸಮಾನವಾದ ಹಕ್ಕುಗಳನ್ನು ಕಲ್ಪಿಸಿ; ಶಿಕ್ಷಣದಿಂದ ಮಾತ್ರ ಮಹಿಳೆಯರಾದಿಯಾಗಿ ಎಲ್ಲರೂ ಪ್ರಗತಿ ಹೊಂದಲು ಸಾಧ್ಯ ಎಂದು ಡಾ.ಬಿ ಆರ್ ಅಂಬೇಡ್ಕರ್ ಪ್ರತಿಪಾದಿಸಿದ್ದರು.

Contact Your\'s Advertisement; 9902492681

ಬಜೆಟ್ ನಲ್ಲಿ ರಾಯಚೂರು ವಿವಿಗೆ ಕಡೆಗಣನರ: SFI  ಆಕ್ರೋಶ

ಉದ್ಘಾಟಕರಾಗಿ ಆಗಮಿಸಿದ್ದ ಪಿಎಸ್ಐ ಯಶೋಧಾ ಕಟಕೆ ಮಾತನಾಡಿ, ಮಹಿಳೆಯರು ತಮಗೆ ಕೊಟ್ಟಿರುವ ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲು ಕರೆ ನೀಡಿದರು. ಇನ್ನೋರ್ವ ಅತಿಥಿ ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುನಿಲ್ ಒಂಟಿ ಮಾತನಾಡಿ ಮಹಿಳೆಯು ತ್ಯಾಗಮಯಾಗಿದ್ದು , ಮಹಾನ್ ಪುರುಷರ ಹಿಂದಿನ ಶಕ್ತಿ ಮಹಿಳೆಯರೆ ಎಂದರು.

ಸಾಹಿತಿ ದಾಕ್ಷಾಯಿಣಿ ಬಳಬಟ್ಟಿಮಠ ಮಾತನಾಡಿ ಮಹಿಳೆಯರನ್ನು ಗೌರವದಿಂದ ಕಾಣುವ ದೇಶ ನಮ್ಮ ದೇಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ ಮಾಲೆ ಮಾತನಾಡಿ ಮಹಿಳಾ ಸಮಾನತೆಗೆ ಒತ್ತು ಕೋಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದದ್ದು ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮವನ್ನು ಮಿಲಿಂದ ಕಣಮಸ್ ನಿರೂಪಿಸಿದರು, ತುಕಾರಾಮ ವರ್ಮಾ ವಂದಿಸಿದರು.

ಬಂಜಾರಾ ಸಮುದಾಯದವರು ಶ್ರಮ ಜೀವಿಗಳು ಸೇವಲಾಲ ಆರಾಧಕರು: ಶಾಸಕ ಎಂ.ವೈ

ಎಮ್. ಎನ್. ಸುಗಂಧಿ ಪ್ರಾರ್ಥನಾ ಗೀತೆ ಹಾಡಿದರು. ಸಮಾರಂಭದಲ್ಲಿ ಪ್ರೇಮಾ ಚವ್ಹಾಣ, ಮಂಜುಳಾ ಪಾಟೀಲ್, ಶೋಭಾ ಮದನಕರ್, ಶಿವಮೂರ್ತಿ ಬಳಿಚಕ್ರ,ಅಮ್ರತರಾವ ನಾಯ್ಕೋಡಿ,ಮಹಾದೇವಿ ಜಾಧವ, ಪವನ ಧನಕರ್,ಮಹಾದೇವಿ ಬಾಪುಸಗರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here