ಕಲಬುರಗಿ:ಅಫಜಲಪೂರು ತಾಲೂಕಿನ ಗಾಣಾಗಪೂರು ಗ್ರಾಮಪಂಚಾಯತ್‌ನಲ್ಲ್ಲಿ ಜಲ ಜೀವನ ಮಿಷನ ಅಡಿಯಲ್ಲಿ ಕಾರ್ಯಾತ್ಮಕ ಮನೆ ನಳ ಸಂಪರ್ಕ ನೀಡುವುದಕ್ಕೆ ಸಮುದಾಯ ಮಾಲಿಕತ್ವ ವಹಿಸುವ ಹಾಗೂ ಕಾರ್ಯಕ್ರಮದಲ್ಲಿ ಭಾಗೀದಾರರಾಗಲು ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಾಣಗಾಪೂರು ಗ್ರಾಮವು ಜಲ ಜೀವನ ಮಿಷನ ಅಡಿಯಲ್ಲಿ ಆಯ್ಕೆಗೊಂಡು, ಯೋಜನೆಯ ವರದಿ ತಯಾರಿ ಆಗಿದ್ದು ಟೆಂಡರ್ ಕರೆಯುವ ಹಂತದಲ್ಲಿದ್ದು, ಇದಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ವಭಾವಿಯಾಗಿ ಯೋಜನೆಗೆ ಸರಕಾರದಿಂದ ೯೦% ಅನುದಾನದ ನೀಡುತ್ತಿದ್ದು,ಬಾಕಿ ಉಳಿದ ೧೦% ಪ್ರತಿ ಶತ ಅನುದಾನವನ್ನು ಸಮುದಾಯ ವಂತಿಕೆ ನೀಡಿ ಗ್ರಾಮಸ್ಥರು ಯೋಜನೆಯಲ್ಲಿ ಭಾಗೀದಾರರಾಗಲು & ಮಾಲಿಕತ್ವ ವಹಿಸುವ ನಿಟ್ಟಿನಲ್ಲಿ ಆಯೋಜಿಸದ ಕಾರ್ಯಕ್ರಮದಲ್ಲಿ ಅಫಜಲಪೂರು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಭಿ ಸಭೆಯ ಮೂಲಕ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಕೃಷಿಗೆ ಕಾಯುಕಲ್ಪ ನಿಡುವ ಆಗ್ರೋ-ರೋಬೋಟ್ಸಗಳು
ಕಾರ್ಯಕ್ರಮದಲ್ಲಿ ಜಲ ಜೀವನ ಮಿಷನ ಯೋಜನೆಯ ಡಿಪಿಎಂ. ಡಾ.ರಾಜು ಕಂಬಾಳಿಮಠ ರವರು ಮಾತನಾಡಿ ಜಲ ಜೀವನ ಮಿಷನ್ ಯೋಜನೆ ಯಶಸ್ವಿಯಾಗಬೇಕಾದರೆ ಸಮುದಾಯದ ಪಾತ್ರ ಅವಶ್ಯಕವಾಗಿದೆ, ಜಲ ಜೀವನ ಮಿಷನ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯ, ಬಚ್ಚಲು ಗುಂಡಿ, ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು.
ಯೋಜನೆಯ ತಾಂತ್ರಿಕ ವಿಚಾರಗಳನ್ನು ಸದರಿ ಗ್ರಾಮದ ಸಹಾಯಕ ಅಭಿಯಂತರಾದ ಸರ್ವಜ್ಞ ಪೂಜಾರಿ ತಿಳಿಸಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ ಜಮಾದಾರ್ ಮಾತನಾಡಿ ಗ್ರಾಮಸ್ಥರು ಜಲ ಜೀವನ ಮಿಷನ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು. ವೇದಿಕೆ ಮೇಲೆ ಅಫಜಲಪೂರು ಸಹಾಯಕ ಕಾರ್ಯಪಾಲಕ ಅಭಿಯಂತರಾದ ರಮೇಶ ಮಂಠಾಳೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಸರ್ವಮಂಗಳಾ ದತ್ತಪ್ಪಗೌಡ ಪಾಟೀಲ್, ಉಪಾಧ್ಯಕ್ಷರಾದ ಕರುಣಾಕರ ನಾರಾಯಣಭಟ್ಟ ಪೂಜಾರಿ ಉಪಸ್ಥಿತರಿದ್ದು, ತಮ್ಮ ಪಾಲಿನ ಸಮುದಾಯ ವಂತಿಕೆ ನೀಡಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 40ನೇ ವಾರ್ಷಿಕೋತ್ಸವ
ಸಭೆಯಲ್ಲಿ ಗುರುಬಸಪ್ಪ ಡಿ ಪಾಟೀಲ್, ವಿಯಲಕ್ಷ್ಮಿ ನಾಗೇಶ ಹೊಸ್ಮನಿ, ಶೇಖ ಅಲಿ ನಬಿಸಾಬ ತಾಂಬೋಳಿ, ಶಾಂತಪ್ಪ ಸಿದ್ದಪ್ಪ ಹೊಸಮನಿ, ಶೈನಜಬಿ ಅನ್ವರ ತಾಂಬೋಳೀ, ಸರ್ವಜ್ಞ ಪೂಜಾರಿ ರವರು ಒಟ್ಟು ರೂ.೨೨೫೦೦/-ಸಮುದಾಯವ ವಂತಿಕೆ ರೂ.ಗಳನ್ನು ನೀಡಿದರು., ರೂಡಾ ಸಂಸ್ಥೆಯ ತಂಡದ ನಾಯಕರಾದ ಸಂತೋಷ ಮೂಲಗೆ, ತಾಲೂಕು ನೋಡ್‌ಲ್ ಅಧಿಕಾರಿ ಸುರೇಶ ಪಟ್ನಾಯಕ್ ,ಶ್ರವಣಕುಮಾರ ಅಕ್ಕಿಮನಿ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…