ಕೃಷಿಗೆ ಕಾಯುಕಲ್ಪ ನಿಡುವ ಆಗ್ರೋ-ರೋಬೋಟ್ಸಗಳು

0
25

ಕಲಬುರಗಿ: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಡವಳಿಕೆ ಅಗತ್ಯವಾಗಿದ್ದು ಪ್ರಸ್ತುತ ಐಓಟಿ ಮತ್ತು ಮಾಹಿತಿ ವಿಜ್ಞಾನವನ್ನು ಬಳಸಿಕೊಂಡು ರೂಪಿಸಿದಂತಹ ಸಾಧನಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಕಳೆದ ೨೦ ವರ್ಷಗಳಿಂದ ಕೃಷಿಯಲ್ಲಿ ರೋಬೋಟಿಕ್ಸ್‌ನ್ನು ಅಳವಡಿಸಲು ಸಂಶೋಧನೆಗಳನ್ನು ನಡೆದಿದ್ದು ಸಧ್ಯ “ಆಗ್ರೋಬೋಟ್ಸ್” ಎಂಬ ಕೃಷಿ ರೋಬೋಟಗಳನ್ನು ಪರಿಚಯಿಸಿದ್ದು ಅವುಗಳು ದಿನದ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮಧ್ಯವುಳ್ಳವುದಾಗಿದ್ದು ಕೃಷಿಗೆ ಸಂಬಂಧಪಟ್ಟ ಎಲ್ಲ ಕಾರ್ಯಗಳನ್ನು ಮಾಡುವ ಗುಣವನ್ನು ಹೊಂದಿವೆ.

ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಕೃಷಿ ಕ್ಷೇತ್ರವೇ ಪ್ರಮುಖವಾಗಿದ್ದು ಈ ಕ್ಷೇತ್ರಕ್ಕೆ ಹೆಚ್ಚಿನ ತಂತ್ರಜ್ಞಾನದ ಹಾಗೂ ಸಂಶೋಧನಾ ಕಾರ್ಯಗಳ ಅಗತ್ಯವಿದೆ ಎಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಅಶೋಕ ಪಾಟೀಲ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅವರು ಇಂದು ಇಲ್ಲಿನ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸ, ಕಲಬುರಗಿ ಸ್ಥಾನಿಕ ಕೇಂದ್ರ, ಕಲಬುರಗಿ ಅವರು ಎರ್ಪಡಿಸಿದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

Contact Your\'s Advertisement; 9902492681

ಕರಲಗಿಕರ್‍ಗೆ ಭಾರತ ವಿಕಾಸರತ್ನ ಪ್ರಶಸ್ತಿ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಖ್ಯಾತ ವಾಸ್ತುಶಿಲ್ಪಿ ಮತ್ತು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಚುನಾಯಿತರಾದ ಬಸವರಾಜ ಖಂಡೆರಾವ ಅವರು ಮಾತನಾಡುತ್ತ ಮುಂಬರುವ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಬೇಕು ಆ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯಗಳು ನಡೆಯಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸನ ಚೇರಮನರಾದ ಪ್ರೋ. ಬಿ.ಎಸ್. ಮೋರೆ ಅವರು ವಹಿಸಿದ್ದರು. ಗೌರವ ಕಾರ್ಯದಶಿಗಳಾದ ಡಾ. ಬಾಬುರಾವ ಶೇರಿಕಾರ ಅವರು ಸ್ವಾಗತಿಸಿದರು. ಡಾ. ಪ್ರಭುದೇವ ಮಹಾದೇವಪ್ಪ ಅವರು ವಂದಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 40ನೇ ವಾರ್ಷಿಕೋತ್ಸವ

ಕಾರ್ಯಕ್ರಮದಲ್ಲಿ ಜಿ. ಆರ್. ಮುತ್ತಗಿ, ಕಾಶೆಪ್ಪಾ ವಾಂಜರಖೇಡ, ಡಾ. ಭಾರತಿ ಹರಸೂರ, ಡಾ. ವೀರೇಶ ಮಲ್ಲಾಪೂರ, ಡಾ. ಎಸ್. ಬಿ. ಪಾಟೀಲ, ಡಾ. ರವೀಂದ್ರ ಮಾಲಿಪಾಟೀಲ, ಪವನರಂಗದಾಳ, ಶ್ರೀನಿವಾಸ ಬೊರಾಳಕರ, ಡಾ. ಬಸವಂತರಾವ ಪಾಟೀಲ, ಕೇದಾರ ಪೂಜಾರಿ, ಅಶೋಕ ದೇಗಾಂವ್, ಹಂಸರಾಜ ಸಾಹು ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here