ಬಿಸಿ ಬಿಸಿ ಸುದ್ದಿ

ಗ್ರಾಪಂ ಅವ್ಯವಹಾರ ಕ್ರಮಕ್ಕೆ

ಆಳಂದ: ತಾಲೂಕಿನ ಸುಂಟನೂರ ಗ್ರಾಪಂ ಕಚೇರಿಯಲ್ಲಿ ಸುಮಾರು ೪೦ಲಕ್ಷ ರೂಪಾಯಿ ಅವ್ಯವಾಹ ತನಿಖೆ ಹಾಗೂ ತಪ್ಪಿರಸ್ಥರ ಮೇಲೆ ಕ್ರಮ ಜರುಗಿಸಿ ಲೂಟಿಯಾದ ಹಣ ಭರಿಸುವುದು ಸೇರಿ ಇನ್ನಿತರ ಬೇಡಿಕೆಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಅಧಿಕಾರಿಗಳು ನೀಡಿದ ಲಿಖಿತ ಭರವಸೆ ಮೆರೆಗೆ ತಾತ್ಕಾಲಿಕವಾಗಿ ವಾಪಸ್ ಪಡೆಯಲಾಯಿತು.

ಗ್ರಾಪಂ ಕಚೇರಿಯ ಮುಂದೆ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ಮತ್ತವರ ಕಾರ್ಯಕರ್ತರು, ಬೆಂಬಲಿತ ಗ್ರಾಮಸ್ಥರು ಸೇರಿ ಉಪವಾಸ, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದರು.

ಗ್ರಾಮ ಪಂಚಾಯತನಲ್ಲಿ ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ

ಸತ್ಯಾಗ್ರಹದ ನಾಲ್ಕನೇ ದಿನವಾದ ಶುಕ್ರವಾರ ಕೊನೆಗೂ ಸತ್ಯಾಗ್ರಹ ಸ್ಥಳಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಶೀಲವಂತ ಅವರು ಭೇಟಿ ನೀಡಿ ದಿನವೀಡಿ ಸತ್ಯಾಗ್ರಹಿಗಳೊಂದಿಗೆ ಮಾತುಕತೆ ನಡೆಸಿ ಸತ್ಯಾಗ್ರಹ ವಾಪಸ್ ಪಡೆಯುಂತೆ ಮಾಡಿದರು. ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟುಹಿಡಿದುಕೊಂಡಿದ್ದ ಸತ್ಯಾಗ್ರಹಿಗಳಿಗೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮೊಬೈಲ್ ಮಾತನಾಡಿ, ತನಿಖಾ ಅಧಿಕಾರಿಗಳನ್ನು ನೇಮಿಸಿ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಇದೊಂದು ಕಾಲಾವಕಾಶ ನೀಡಿ ಸತ್ಯಾಗ್ರಹ ವಾಪಸ್ ಪಡೆಯಬೇಕು ಎಂಬ ಮಾತಿಗೆ ಒಪ್ಪಿದ ಸತ್ಯಾಗ್ರಹಿಗಳು ಹಾಜರಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಲಿಖಿತ ಭರವಸೆ ಪಡೆದು ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಅವ್ಯವಹಾರ ಕುರಿತು ಇತರ ಬೇಡಿಕೆಗೆ ಈ ಹಿಂದೆಯು ಸತ್ಯಾಗ್ರಹ ಕೈಗೊಂಡ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಅವರು ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಈಗ ಮತ್ತೊಮ್ಮೆ ಇವರ ಮಾತಿಗೆ ಹೇಗೆ ನಂಬಬೇಕು ಎಂದು ಸತ್ಯಾಗ್ರಹಿಗಳು ಪ್ರಶ್ನಿಸಿದರು.

ಕೃಷಿಗೆ ಕಾಯುಕಲ್ಪ ನಿಡುವ ಆಗ್ರೋ-ರೋಬೋಟ್ಸಗಳು

ಮನವಿ ಸ್ವೀಕರಿಸಿದ ಇಒ ನಾಗಮೂರ್ತಿ ಶೀಲವಂತ ಅವರು, ಈ ಹಿಂದೆ ನೀಡಿದ ಬೇಡಿಕೆಗಳ ಕುರಿತು ಮೇಲಾಧಿಕಾರಿಗಳಿಗೆ ಸಲ್ಲಿಸಲು ವರದಿ ಸಿದ್ದಪಡಿಸಲಾಗಿದೆ. ಆದರೆ ಈಗ ಸಮಗ್ರವಾಗಿ ಮತ್ತೊಮ್ಮೆ ವರದಿ ಸಿದ್ಧಪಡಿಸಲಾಗುವುದು. ಫೆ.೧೫ಕ್ಕೆ ಗ್ರಾಪಂ ಕಚೇರಿಯಲ್ಲೇ ಖುದ್ದಾಗಿ ಕುಳಿತು ಕಡಿತಗಳನ್ನು ಪರಿಶೀಲಿಸಿ ಕ್ರಮಕ್ಕೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಧರಣಿ ವಾಪಸ್ ಪಡೆಯಬೇಕು ಎಂದು ಭರವಸೆ ನೀಡಿದ ಮೇಲೆ ಸತ್ಯಾಗ್ರಹ ವಾಪಸ್ ಪಡೆಯಲಾಯಿತು.

ಇದೇ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮದಲ್ಲಿ ಮೂಲಸೌಲಭ್ಯಗಳ ಕೊರತೆ ಇರುವ ಕುರಿತು ಸತ್ಯಾಗ್ರಹಿಗಳು ಪ್ರಮುಖ ಸ್ಥಳಗಳಿಗೆ ಕರೆದ್ಯೊಯಿದು ಸಮಸ್ಯೆ ಕುರಿತು ತೋರಿಸಿದರು. ಗ್ರಾಪಂ ಅಧಿಕಾರಿ ವಿದ್ಯಾರಾಣಿ ಹಾಗೂ ನಿಂಬರಗಾ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಗ್ರಾಮ ಶಾಖೆಯ ಗೌರವ ಅಧ್ಯಕ್ಷ ಜನಾರ್ಧನ ದೇಶಪಾಂಡೆ, ಶರಣು ಕುಲಕರ್ಣಿ, ನಾಗರಾಜ ಘೋಡಕೆ, ಗ್ರಾಮ ಘಟಕದ ಅಧ್ಯಕ್ಷ ಅಮರೇಶ ಕುಂಬಾರ, ರಾಮ ಪಾಟೀಲ ಆಲೂರ, ಸಂಬಾಜಿ ಪಿಸೆ, ಮಲ್ಲಿಕಾರ್ಜುನ ಕೊರಳ್ಳಿ ಮತ್ತಿತರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago