ಬಿಸಿ ಬಿಸಿ ಸುದ್ದಿ

ಸಮಾನತೆ ಸಮಾಜ ನಿರ್ಮಾಣಕ್ಕೆ ಜಾತಿ ನಾಶಕ್ಕೆ ಕರೆ

ಸೇಡಂ: ಬಸವಾದಿ ಶರಣರು, ಸೂಫಿ ಸಂತರು ಹಾಗೂ ದೇಶದ ಮಹಾ ಪುರುಷರು ಕನಸು ಕಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ಜಾತಿ ಪದ್ಧತಿಯನ್ನು ನಾಶ ಪಡಿಸಬೇಕಾಗಿದೆ ಎಂದು ಸಾಹಿತಿ, ಪತ್ರಕರ್ತ ಧರ್ಮಣ್ಣ ಎಚ್ ಧನ್ನಿ ಅವರು ಕರೆ ನೀಡಿದರು.

ತಾಲೂಕಿನ ಹೊಡಾ ಗ್ರಾಮದ ಜವಾಹರ ನಗರದಲ್ಲಿ ಮಾಯಾ ವೆಲಫರ್ ಸೂಸೈಟಿ ಹಾಗೂ ತಾಲೂಕಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅಸ್ಪೃಶ್ಯತೆ ನಿರ್ಮೂಲನೆಯ ವಿಚಾರ ಸಂಕಿರಣ ಕಾರ್ಯಕ್ರಮ ಉಪನ್ಯಾಸ ಭಾಷಣ ಮಂಡಿಸಿ ಮಾತನಾಡಿದರು.

ಗ್ರಾಪಂ ಅವ್ಯವಹಾರ ಕ್ರಮಕ್ಕೆ

ಆಧುನಿಕ ಕಾಲ ಘಟ್ಟದಲ್ಲೂ ಗ್ರಾಮೀಣ ಇನ್ನು ಜಾತಿ ಪದ್ಧತಿ ಆಚರಣೆಯಲ್ಲಿದೆ. ದೈಹಿಕ ಅಸ್ಪೃಶ್ಯತೆ ಇಲ್ಲದಿದ್ದರೂ ಮಾನಸಿಕ ಅಸ್ಪೃಶ್ಯತೆ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತ ಪಡಿಸಿದ ಅವರು, ಜಾತಿ ವಿನಾಶದ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಕಾರ್ಯಗಳಲ್ಲಿ ಚುರುಕುಗೊಳಿಸಬೇಕಾಗಿದೆ. ನಾವೇಲ್ಲ ಒಂದೆಂಬ ಮನೋಭಾವ ಬೆಳೆದಾಗಲೇ ಅಸ್ಪೃಶ್ಯತೆ ಅಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ ಚಿಕಣಿ ಮಾತನಾಡಿ, ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು. ಆ ಮೂಲಕ ಸಮಾಜದ ಅನಿಷ್ಠ ಪದ್ಧತಿಗಳಿಗೆ ಕಡಿವಾಣ ಹಾಕಬಹುದು. ಸರ್ಕಾರದ ಈ ಕಾರ್ಯಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದರು.

ಮಾಯಾ ವೆಲಫರ್ ಸೂಸೈಟಿಯ ಅಧ್ಯಕ್ಷ ವೀರಣ್ಣ ಬೆಣ್ಣೆಶಿರೂರ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ಕೆಟ್ಟ ಆಚರಣೆಗಳ ವಿರುದ್ಧ ಜನ ಜಾಗೃತಿ ಮುಖ್ಯ. ಅಸ್ಪೃಶ್ಯತೆ ಅಳಿಸಿ ಸಮಾನತೆಡ ಬೆಳಿಸುವಂತೆ ತಿಳಿಸಿದರು. ಶಿಕ್ಷಕ ಭೀಮಾಶಂಕರ ಗುತ್ತೇದಾರ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು.

ಗ್ರಾಮ ಪಂಚಾಯತನಲ್ಲಿ ಸಮುದಾಯ ವಂತಿಕೆ ಸಂಗ್ರಹಣಾ ಅಭಿಯಾನ

ಗ್ರಾಪಂ ಸದಸ್ಯೆ ಅಪ್ಸನಾ ಬೇಗಂ ಶಿರಾಜೋದ್ದೀನ್, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಚಿತ್ತಾಪೂರ, ಮಾಜಿ ಅಧ್ಯಕ್ಷ ಬಾಬು ಸ್ವಾಮಿ, ಮುಖಂಡರಾದ ಮಲ್ಲೇಶಿ ಮಿಸ್ತ್ರೀ, ರಮೇಶ ಕಡಗಂಚಿ, ನಾಮದೇವ ಗುತ್ತೇದಾರ ಅಂಗನವಾಡಿ ಕಾರ್ಯಕರ್ತೆ ಶಾಂತಾ ಶಿವಶರಣಪ್ಪ, ಆಶಾ ಕಾರ್ಯಕರ್ತೆ ಸುನೀತಾ ಯಲ್ಲಪ್ಪ, ಮಹಿಳಾ ಸಂಘದ ಉಪಾಧ್ಯಕ್ಷೆ ಯಲ್ಲಮ್ಮ, ಪೀರಪ್ಪ ಹಾದಿಮನಿ ಸೇರಿದಂತೆ ಬಡಾವಣೆಯ ಮುಖಂಡರು ಪಾಲ್ಗೊಂಡಿದರು. ನಂತರ ಶರಣರ ವಚನ ಗಾಯನ ನಡೆಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago