ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 55ರ ರಾಘವೇಂದ್ರ ಲೇಔಟ್ ನಲ್ಲಿನ ಸಾಯಿ ಮಂದಿರ ಹತ್ತಿರದ ಉದ್ಯಾನವನದ ಅತಿಕ್ರಮಣವನ್ನು ತಡೆಗಟ್ಟಿ, ಸಾರ್ವಜನಿಕ ಉಪಯೋಗವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ಹಾಗೂ ಎಸ್.ಯು.ಸಿ.ಐ.(ಸಿ) ಪಾಲಿಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಹಲವಾರು ಬಾರಿ ಉದ್ಯಾನವನದ ಭೂಮಿ ಅತಿಕ್ರಮಣದ ವಿಷಯ ಇಲಾಖೆಯ ಗಮನಕ್ಕೆ ತಂದರು ತಡೆಗಟ್ಟಲಾಗುತ್ತಿಲ್ಲ. ಕೆಲವರು ಅತಿಕ್ರಮಣಮಾಡಿ ಮನೆಕಟ್ಟಲು ಪ್ರಾರಂಭಿಸಿದ್ದು ಕೂಡಲೇ ಇದನ್ನು ತಡೆಗಟ್ಟಬೇಕೆಂದು ಮಹೇಶ್ ಎಸ್. ಬಿ. ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕೇಂದ್ರ ಹುಬ್ಬಳ್ಳಿಗೆ ರೈಲ್ವೆ ಡಿವಿಜನಿಗೆ ಕೋಕ್, ಏಮ್ಸ್ ನೀಡಲು ಒಲವು ಸಮಿತಿ ಆಕ್ರೋಶ
ಕಳೆದ ಹನ್ನೆರಡು ವರ್ಷಗಳಿಂದಲೂ ಬಡಾವಣೆಯ ಎಲ್ಲಾ ಜನತೆಯು ಸತತ ಪ್ರಯತ್ನ ಮಾಡಿದಾಗ್ಯೂ ಸಾರ್ವಜನಿಕ ಉದ್ಯಾನವನ ಇನ್ನೂ ಜನಬಳಕೆಗೆ ಯೋಗ್ಯವಾಗಿಲ್ಲ. ಲೇಔಟ್ ನ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳೂ, ಸಾರ್ವಜನಿಕ ಉದ್ಯಾನವನವನ್ನು ದುರುಪಯೋಗಪಡಿಸಿಕೊಳ್ಳುವುದು ಇದಕ್ಕೆ ಮೂಲ ಕಾರಣ ಒಂದುಕಡೆಯಾದರೆ ಇನ್ನೊಂದೆಡೆ, ಸಂಬಂಧಿಸಿದ ಅಧಿಕಾಗಳ ನಿರ್ಲಕ್ಷ್ಯವೂ ಇನ್ನೊಂದು ಗಂಭೀರವಾದ ಪ್ರಮುಖ ಕಾರಣವಾಗಿದೆ.
ಮಹಾನಗರ ಪಾಲಿಕೆ ತಕ್ಷಣವೇ ಕಾನೂನಾತ್ಮಕ ಕ್ರಮ ಕೈಗೊಂಡು ಉದ್ಯಾನವನದ ಜಮೀನನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಪ್ರತಿಭಟನಾ ನಿರತ ಹೋರಾಟಗಾರರು ಒತ್ತಾಯಿಸಿದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…