ಅಫಜಲಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬೂರು ವ್ಯಾಪ್ತಿಯಲ್ಲಿ ಬರುವ ಗೊಬ್ಬೂರ ವಾಡಿ ಗ್ರಾಮದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ರಾಕೇಶ್ ರಾಥೋಡ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ನಂತರ ಕಾರ್ಯಕ್ರಮವನ್ನು ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಮಾತನಾಡಿ ಸರಕಾರದ ಸೌಲತ್ತುಗಳು ಬಗ್ಗೆ ವಿವರಿಸುತ್ತಾ ತಾಯಂದಿರು ಯಾವುದೇ ಮಗುವಿಗೆ ಲಸಿಕೆಯಿಂದ ವಂಚಿತವಾಗದಂತೆ ಹಾಗೂ ಗರ್ಭಿಣಿ ತಾಯಂದಿರು ಲಸಿಕೆಯಿಂದ ವಂಚಿತವಾಗದಂತೆ ತಾವೆಲ್ಲರೂ ಕೇಳಿ ಪಡೆಯಬೇಕು ಎಂದು ತಾಯಂದಿರಿಗೆ ಕರೆ ನೀಡಿದರು.
ಕೇಂದ್ರ ಹುಬ್ಬಳ್ಳಿಗೆ ರೈಲ್ವೆ ಡಿವಿಜನಿಗೆ ಕೋಕ್, ಏಮ್ಸ್ ನೀಡಲು ಒಲವು ಸಮಿತಿ ಆಕ್ರೋಶ
ತದನಂತರ ತಾಯಿ ಕಾಡು ಮಹತ್ವ ಹಾಗೂ ಅನಿಮಿಯ ಮುಕ್ತ ವಾಗಲು ಪ್ರತಿ ತಿಂಗಳು 9ನೇ ತಾರೀಕು ಗರ್ಭಿಣಿಯರು ಅಪಾಯದಿಂದ ಪಾರಾಗಲು ತಮಗಾಗಿ ಮಾತೃ ಸಂರಕ್ಷಣಾ ಯೋಜನೆಯಡಿ ಉಚಿತವಾಗಿ ಪ್ರಯೋಗಾಲಯ ಚಿಕಿತ್ಸೆ ಹಾಗೂ ಸ್ಕ್ಯಾನಿಂಗ್ ಪರೀಕ್ಷೆ ಉಚಿತವಾಗಿ ದೊರೆಯದು, ಅಲ್ಲದೆ ಅನಿಮೆ ಯದಿಂದ ಪಾರಾಗಲು ತಮಗಾಗಿ ಏಳು ಗ್ರಾಂಗಿಂತ ಕಡಿಮೆ ಇದ್ದರೆ ಅವರಿಗೆ ವಿಶೇಷವಾಗಿ ರಕ್ತದ ಸೌಲಭ್ಯ ಚಿಕಿತ್ಸೆಯನ್ನು ಕೂಡ ನೀಡಲಾಗುವುದು ಒಟ್ಟಿನಲ್ಲಿ ತಾಯಿ ಮಕ್ಕಳ ಆರೋಗ್ಯ ಕಾಪಾಡುವುದು, ಅಲ್ಲದೆ ಸದೃಡವಾದ ಮಗು ಸದೃಢವಾದ ತಾಯಿ ಆಗಲು ಸರಕಾರದ ಯೋಜನೆಗಳಲ್ಲಿ ತಾವೆಲ್ಲರೂ ಪಡೆದು ತಾಯಿ ಮತ್ತು ಶಿಶು ಮರಣಗಳ ಪ್ರಮಾಣ ಕಡಿಮೆ ಮಾಡುವಂತೆ ತಿಳಿಸಿದರು.
ಅಲ್ಲದೆ ಮಿಷನ್ ಇಂದ್ರಧನುಷ್ ಕೂಡ ತಮಗಾಗಿ ಇದೆ, ಕೋವಿಡ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ, ಬುಧವಾರ ಶುಕ್ರವಾರದಂದು ಉಚಿತವಾಗಿ ನೀಡಲಾಗುತ್ತದೆ ತಾವೆಲ್ಲರೂ ಅದರ ಪ್ರಯೋಜನ ಪಡೆದು ಕೊರೊನಾದಿಂದ ಕೂಡ ಪಾರಾಗಲು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾಹಿತಿ ನೀಡಿದರು, ತದನಂತರ ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಮಹಿಳೆ ಪ್ರಿಯಾ ಅವರು ಎದೆಹಾಲಿನ ಮಹತ್ವ ಹಾಗೂ ಕುಟುಂಬ ಕಲ್ಯಾಣ ಗಳ ನೂತನ ವಿಧಾನಗಳ ಬಗ್ಗೆ ತಾಯಂದಿರಿಗೆ ತಿಳಿಸಿದರು, ನಂತರ ವಿಜೇತ ಮಕ್ಕಳಿಗೆ ಗ್ರಾಮ್ ಪಂಚಾಯತ್ ಸದಸ್ಯರಿಂದ ಬಹುಮಾನವನ್ನು ವಿತರಿಸಲಾಯಿತು.
ವಕೀಲರ ಕಲ್ಯಾಣ ಅಭೀವೃಧ್ಧಿ ಸಂಘ ಸುರಪುರ ಅಸ್ತಿತ್ವಕ್ಕೆ
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸೀತಾಬಾಯಿ ಪವಾರ್ ಆಶಾ ಕಾರ್ಯಕರ್ತೆ ಕವಿತಾ ಹಾಗೂ ದೇವೇಂದ್ರ ಗಣಪತಿ ರಾಥೋಡ್ ಹಾಗೂ ಗರ್ಭಿಣಿಯರು ತಾಯಂದಿರು ಪಾಲ್ಗೊಂಡಿದ್ದರು.
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…
ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…