ಸೇಡಂ: ಕ್ಷಯರೋಗವು ವಿದ್ಯಾರ್ಥಿಗಳಲ್ಲಿಹೆಚ್ಚು ಹರಡತ್ತದೆ ಏಕೆಂದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸರಿಯಾಗಿ ತಿಂಡಿ/ ಊಟ ಮಾಡದೆ ಕಾಲಿ ಹೊಟ್ಟೆಯಲ್ಲಿ ಶಾಲಾ / ಕಾಲೇಜಿಗೆ ಬರುವುದು ಕಂಡು ಬರುತ್ತದೆ ಹಾಗೆ ವಿದ್ಯಾರ್ಥಿಗಳು ಈ ಕ್ಷಯರೋಗ ಮಾಹಿತಿ ಪಡೆದು ಬೇರೆಯವರಿಗೆ ತಿಳುವಳಿಕೆ ನೀಡಲು ಮಾದರಿ ಯಾಗಬೇಕು,ಕೆಲ ಕ್ಷಯರೋಗಿಗಳು ಕಾಳಂಕ ತಾರತಮ್ಯ ಇಲ್ಲದೆ ಸಮಾಜದಲ್ಲಿ ಬದುಕ ಬಹುದು ಮುಖ್ಯವಾದದ್ದು ಆರೋಗ್ಯ. ಕ್ಷಯರೋಗ ಪರೀಕ್ಷೆ ಮಾಡಿಸಿಪತ್ತೆ ಹಚ್ಚುವ ಬಹುದು ಹಾಗೆ ಸೂಕ್ತ ಚಿಕಿತ್ಸೆಯಿಂದ ಬೇಗಗುಣ ಮುಖರಾಗ ಬಹುದು ಹಾಗೆ ಕ್ಷಯ ಮುಕ್ತ ಮಾಡಲು ವಿದ್ಯಾರ್ಥಿಗಳು ಪಣ ತೋಡೊಣ ಎಂದು,ಜಿಲ್ಲಾ ಟಿ ಬಿ ಮೇಲ್ವಿಚಾರಕ ಸಂತೋಷ ಕಾಳಗಿ ಸಲಹೆ ನಿಡಿದರು.
ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರು ಸಮುದಾಯದ ಜೊತೆಗೆ ಕೈ ಜೋಡಿಸಿ ಅವರು ನಮ್ಮಂತೆ ಸೂಕ್ತ ಚಿಕಿತ್ಸೆ ಪಡೆದು ಬೇರೆಯ ಕ್ಷಯ ರೋಗಿಗಳಿಗೆ ಮಾದರಿ ಅಗಬೇಕು.ಟಿ ಬಿ.ಶಾಲಾ , ಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮದಿಂದ ತಮ್ಮ ಆರೋಗ್ಯದ ಕಡೆ ಲಕ್ಷವಹಿಸಬುದು ಹಾಗೆ ಕಾರ್ಯಕ್ರಮದ ಉದ್ದೇಶ ನಿಮ್ಮ ಕುಟುಂಬದ ಸದಸ್ಯರಿಗೆಇಂತಹುದೇ ಕ್ಷಯ ರೋಗದ ಲಕ್ಷಣ ಕಂಡು ಬಂದರೆ. ಸೂಕ್ತ ಚಿಕಿತ್ಸೆನೀಡಿ ಟಿ ಬಿ ಸದ್ಯ ಚಿಕಿತ್ಸೆ ಪಡೆದು ಕೊಳ್ಳುವಂತ ಕ್ಷಯರೋಗಿಳು ಯಾರೆ ಇರಲಿ ಮಾನವೀಯತೆ ತೋರಿಸಬೇಕು.ಟಿಬಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ ಎಲ್ಲಾ ಸರ್ಕಾರಿ ಆಸ್ಪತ್ರೆ ಕಫ ಪರೀಕ್ಷೆ ಮತ್ತು ಮಾತ್ರೆ ಉಚಿತವಾಗಿ ನೀಡಲಾಗುತ್ತದೆ, ಎಂದು ಹೇಳಿದರು.
ತಹಶೀಲ್ದಾರ್ ಪ್ರಕಾಶ ಕುದರಿಗೆ ಸನ್ಮಾನ
ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತಮಾತೃ ಛಾಯಾ ಪಿ ಯು ಕಾಲೇಜು ಸಭಾಂಗಣದಲ್ಲಿ. ಜಿಲ್ಲಾ ಪಂಚಾಯತ್ ಕಲಬುರಗಿ , ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಇಲಾಖೆ,ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕಲಬುರಗಿ. ಹಾಗೂ ಮಾತೃ ಛಾಯಾ ಪಿಯು ಕಾಲೇಜು ಸೇಡಂ ಇವರ ಸಂಯುಕ್ತಶ್ರಾಯದಲ್ಲಿ. ಕಾಲೇಜು ವಿದ್ಯಾರ್ಥಿಗಳಿಗೆ ವಿಶ್ವ ಕ್ಷಯ ರೋಗ ದಿನ ಅಂಗವಾಗಿ ಗಿಡಕ್ಕೆ ನೀರು ಊಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತೃ ಛಾಯಾ ಪ್ರಾಂಶುಪಾಲರಾದ ಸೂರ್ಯಕಾಂತ ಪಾಲವೆ, ಮಾತನಾಡಿದರು.ವೇದಿಕೆ ಮೇಲೆ ಜಿಲ್ಲಾ ಡಿ ಆರ್ ಟಿ ಬಿ ಸಕ್ಷಮ್ ಟೀಸ್ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಪ್ರಸ್ಥಾವಿಕ ನುಡಿ ಮಾತ ನಾಡುತ್ತ ಕ್ಷಯ ರೋಗ ಮುಕ್ತವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯ ರೋಗಿ ತಪ್ಪದೆ ಡಾಟ್ಸ್ಸೆಂಟರ್‌ಗೆ ಬಂದು ಉಚಿತ ಚಿಕಿತ್ಸೆ ಇದೆ. ಹಾಗೆ ಇದೆ ತಿಂಗಳು 24ರಂದು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಅದರ ಅಂಗವಾಗಿ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ರಸ ಪ್ರಶ್ನೆ ಕ್ವಿಜ್ ಕಾಂಪಟೇಶನ್ ಇಡಲಾಗಿದೆ.ಅದರಲ್ಲಿ ಭಾಗವಹಿಸಿದವರಿಗೆ ಸೂಕ್ತ ನಗದು ರೂಪದಲ್ಲಿ ಕೊಡಲಾಗುತ್ತಿದೆ ಎಂದು ಹೇಳಿದರು ಹಾಗೆ ಪ್ರತಿ ಒಬ್ಬರು ಎರಡೂ ವಾರಕಿಂತ ಹೆಚ್ಚು ಕೆಮ್ಮು ರಾತ್ರಿ ವೇಳೆ, ಜ್ವರ, ತೂಕ ಕಡಿಮೆ ಅಗುವ ಲಕ್ಷಣ ಕಂಡು ಬಂದಲ್ಲಿ ತಪ್ಪದೆ ಹತ್ತಿರದಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದು.ಕ್ಷಯ ರೋಗ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಹೇಳಿದರು.
ಉದ್ಭವ್ ಠಾಕ್ರೆ ಉದ್ಧಟತನ ಬಿಟ್ಟು ರಾಷ್ಟ್ರಪ್ರೇಮ ಬೆಳೆಸಲಿ: ಪ್ಯಾಟಿ ಆಗ್ರಹ
ವೇದಿಕೆ ಮೇಲೆ ಪ್ರಮುಖರಾದ ಎಸ್ ಟಿ ಎಸ್ ಮಹಾಂತೇಶ ಹಾವನೂರ, ಎಸ್ ಟಿ ಎಲ್ ಎಸ್, ಶಿವಪುತ್ರ ಜನಕಟ್ಟಿ, ಬೆನ್ನಂಜುಮೇನ್, ಪ್ರೋ ಚನ್ನಬಸಪ್ಪ ಗವಿ. ಪ್ರೊ ಪಿ ಬಿ ಭಜಂತ್ರಿ, ಪ್ರೋ ಇರ್ಫಾನ್, ಉಪಸ್ಥಿತರಿದ್ದರು.ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಕ್ಷಯರೋಗ ಕುರಿತು ರಸ ಪ್ರಶ್ನೆ ಏರ್ಪಡಿಸಲಾಗಿತ್ತು ಇದರಲ್ಲಿ ಪ್ರಥಮ , ದೃತೀಯ, ತೃತೀಯ ಬಹುಮಾನ ನಗದು ರೂಪದಲ್ಲಿ ನೀಡಲಾಯಿತು.
ಇದೆ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದು ಕೊಂಡರು,ಬೆಂಜುಮೆನ್ನ್ಸ್ವಾಗತಿಸಿದರು, ಪ್ರೋ ರಾಜಕುಮಾರ ಚೆನ್ನರ ನಿರೂಪಿಸಿದರು. ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…