ಶಹಾಬಾದ: ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಕಾರ್ಲ ಮಾರ್ಕ್ಸ ರವರ ವಿಚಾರಧಾರೆಯಲ್ಲಿ ಉತ್ತರವಿದೆ ಎಂದು ಎಸ್.ಯು.ಸಿ.ಐ ಕಾರ್ಯದರ್ಶಿ ಗಣಪತರಾವ ಮಾನೆ ಹೇಳಿದರು.
ಅವರು ನಗರದ ಎಸ್.ಯು.ಸಿ.ಐ. (ಸಿ) ಕಮ್ಯೂನಿಷ್ಟ್ ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಲ ಮಾರ್ಕ್ಸ ರವರ ೧೩೮ನೇ ಸ್ಮಾರಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಎಲ್ಲಾ ತಾರತಮ್ಯಗಳಿಗೆ, ಬ್ರಷ್ಟಾಚಾರಗಳಿಗೆ, ನಿರುದ್ಯೋಗ ಸಮಸ್ಯೆಗಳಿಗೆ, ಬಡತನ, ಬೆಲೆ ಏರಿಕೆ, ಸ್ತ್ರಿಯರ ಮೇಲಿನ ಅತ್ಯಾಚಾರ, ಅಶ್ಲೀಲ, ಕ್ರೌರ್ಯ, ಸ್ವಜನ ಪಕ್ಷಪಾತತನ, ಜಾತಿ, ಧರ್ಮ, ಭಾಷೆ, ದೇಶ, ಈ ಎಲ್ಲಾದಕ್ಕೂ ಮಾರ್ಕ್ಸವಾದ ಸಿದ್ದಾಂತದಲ್ಲಿ ಉತ್ತರ ಇದೆ.
ಕ್ಷಯ ಮುಕ್ತ ಮಾಡಲು ವಿದ್ಯಾರ್ಥಿಗಳಿಗೆ ಸಲಹೆ
ಮಾರ್ಕ್ಸ ರವರು ತಮ್ಮ ಇಡೀ ಜೀವಮಾನದಲ್ಲಿ ಹೊಸ ವೈಚಾರಿಕತೆಗೆ ಜನ್ಮ ನೀಡಿದರು. ಪ್ರಕೃತಿಯಲ್ಲಿ ಆಗುಹೋಗುವ ವಿದ್ಯಾಮಾನಗಳನ್ನು ಅಭ್ಯಾಸ ಮಾಡಿ, ಮಾನವ ಸಮಾಜದಲ್ಲಿಯೂ ಕೂಡಾ ಒಂದು ನಿಯಮ ಇದೆ ಎಂದು ಪ್ರಪಂಚಕ್ಕೆ ಮೊಟ್ಟಮೊದಲ ಬಾರಿಗೆ ತೋರಿಸಿಕೊಟ್ಟರು. ಮಾನವ ಸಮಾಜದ ಎಲ್ಲಾ ಸಂಭಂದಗಳು ಆರ್ಥಿಕ ಸಂಭಂದದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಕಾರ್ಮಿಕರು ತಮ್ಮ ಸಂಕೋಲೆಗಳನ್ನು ಕಡಿದು ಹಾಕಿ ವಿಶ್ವದ ಕಾರ್ಮಿಕರು ಒಂದಾಗಿ ಹೊಸ ಸಮಾಜ ಕಟ್ಟಬೇಕಾಗಿದೆ ಎಂದು ಹೇಳಿದರು.
ಸ್ಥಳೀಯ ಸಮಿತಿ ಸದಸ್ಯ ಕಾ. ರಾಘವೇಂದ್ರ.ಎಂ.ಜಿ. ಮಾತನಾಡಿ, ಕಾರ್ಲ್ ಮಾರ್ಕ್ಸರವರ ಶ್ರಮ ಬಹಳ ಅಗಾಧವಾದದ್ದು, ಕಾರ್ಲ ಮಾರ್ಕ್ಸ ಹಾಗೂ ಫೇಡ್ರಿಕ್ಸ ಏಂಗಲ್ಸ್ ರವರು ಜೀವದ ಗೆಳೆಯರಾಗಿದ್ದರು. ಅವರಿಬ್ಬರ ವಿಚಾರಧಾರೆ ಹಾಗೂ ಚಿಂತನ ಕ್ರಮ ಒಂದೇ ಆಗಿತ್ತು. ಅವರಿಬ್ಬರು ಕಾರ್ಮಿಕರ ಒಳಿತಿಗಾಗಿ ಇಡೀ ಜೀವಮಾನವೆಲ್ಲಾ ದುಡಿದರು ಎಂದು ಹೇಳಿದರು.
ತಹಶೀಲ್ದಾರ್ ಪ್ರಕಾಶ ಕುದರಿಗೆ ಸನ್ಮಾನ
ಪಕ್ಷದ ಸ್ಥಳೀಯ ಸಮಿತಿಯ ಸದಸ್ಯ ಕಾ. ರಾಜೇಂದ್ರ ಅತನೂರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಜಗನ್ನಾಥ ಎಸ್.ಎಚ್,ಸಿದ್ದು ಚೌಧರಿ, ಮಹಾದೇವಿ ಮಾನೆ, ಗುಂಡಮ್ಮ ಮಡಿವಾಳ, ತುಳಜರಾಮ, ರಮೇಶ, ನೀಲಕಂಠ ಹುಲಿ, ಮಹಾದೇವಿ ಅತನೂರ, ಸವಿತಾ, ರಘು ಪವಾರ, ಶ್ರೀನಿವಾಸ, ಅಜಯ ಸೇರಿದಂತೆ, ಪಕ್ಷದ ಕಾರ್ಯಕರ್ತರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…