ಭಾಲ್ಕಿ: ಶರಣರ ವಿಚಾರಧಾರೆಗಳಿಂದ ಮಾನವ ಒತ್ತಡದ ಬದುಕುನೀಗಿ ನಿಶ್ಚಿಂತ ನೆಲೆಯಡೆಗೆ ಸಾಗಬಹುದಾಗಿದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಸತತ ಅಧ್ಯಯನ ಮತ್ತು ಆಚರಣೆ ನಿತ್ಯ ಬದುಕಿನಲ್ಲಿ ಇರಬೇಕು ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಆಯೋಜಿಸಲಾದ ೨೬೩ನೆಯ ಮಾಸಿಕ ಶರಣ ಸಂಗಮ ಮತ್ತು ಮಾಯಾದೇವಿ ಗೋಖಲೆ ವಿರಚಿತ ಅಂತರಂಗದ ಅಲೆಗಳು ಹಾಗೂ ಶ್ರಮದ ಫಲ ಇತರ ಕತೆಗಳು ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯಸನ್ನಿಧಾನವಹಿಸಿ ಆನ್‌ಲೈನ್ ಮೂಲಕ ಆರ್ಶೀವಚನಗೈದರು. ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವವಹಿಸಿ, ಸಾಹಿತ್ಯ ಲೋಕಕ್ಕೆ ಎರಡು ಉಪಯುಕ್ತ ಕೃತಿಗಳು ಮಾಯಾದೇವಿ ಅವರಿಂದ ಸಲ್ಲಿಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ: ಜಯಂತ್ಯೋತ್ಸವ, ರಥೋತ್ಸವ ರದ್ದು
ಶರಣ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಅಧ್ಯಕ್ಷ ಪ್ರೊ.ಶಂಭುಲಿಂಗ ವಿ.ಕಾಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿದ್ದು, ಎಲ್ಲವೂ ಮನುಷ್ಯನ ನೆಮ್ಮದಿಯ ಬದುಕಿಗೆ ಮೆಟ್ಟಲುಗಳಂತೆ ಕಾರ್ಯನಿರ್ವಹಿಸುತ್ತದೆ ಎಂದರು. ಎರಡು ಕೃತಿಗಳ ಲೋಕಾರ್ಪಣೆ ಮಾಡಿದ ಡಾ.ಕಾಶಿನಾಥ ಚಲುವಾ ಸಾಂದರ್ಭಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀದೇವಿ ಹೂಗಾರ ಕೃತಿ ಪರಿಚಯ ಮಾಡಿಸಿದರು.
ಟಿಕೆಟ್ ರಹಿತ ಪ್ರಯಾಣ: 1,33,786 ರೂ.ಗಳ ದಂಡ ವಸೂಲಿ
ಇತ್ತೀಚೆಗೆ ಕರುನಾಡ ವಿಜ್ಞಾನ ಅಕಾಡೆಮಿ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಿಯುಕ್ತರಾದ ಮಂಜುನಾಥ ಪ್ರಭಾಕರ ಬೆಳಕೇರೆ ಅವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು. ರಾಜು ಜುಬರೆ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯಮಾನ್ಯರಿಗೆ ಗೋಖಲೆ ಪರಿವಾರದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ವೀರಣ್ಣ ಕುಂಬಾರ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.