ಸುರಪುರ: ಈಗ ಬಮದಿರುವ ಕೊರೊನಾ ರೋಗ ಏನು ಅಲ್ಲ ಇದಕ್ಕಿಂತ ಭಯಾನಕವಾದ ಮನುಷ್ಯ ರಕ್ತ ಕಾರುವಂತ ಇನ್ನೊಂದು ರೋಗ ಮುಂದೆ ಬರಲಿದೆ ಎಂದು ಗಜೇಂದ್ರಗಡದ ತಳ್ಳಿಹಾಳ ಮಠದ ಕಾಲಜ್ಞಾನ ಬ್ರಹ್ಮ ಶರಣಬಸವ ಸ್ವಾಮೀಜಿ ಭವಿಷ್ಯ ನುಡಿದರು.
ನಗರದ ನಿಷ್ಠಿ ಕಡ್ಲಪ್ಪನವರ ಮಠದಲ್ಲಿ ಜರುಗಿದ ಲಿಂ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ೪೫ನೇ ಪುಣ್ಯಸ್ಮರಣೋತ್ಸವದಲ್ಲಿ ಪ್ರತಿವರ್ಷದಂತೆ ಗದಗ ಜಿಲ್ಲೆಯ ಗಜೇಂದ್ರಗಡದ ತಳ್ಳಿಹಾಳ ಕಾಲಜ್ಞಾನಮಠದ ಶರಣಬಸವ ಮಹಾಸ್ವಾಮಿಗಳು ಕಾಲಜ್ಞಾನ ನುಡಿಯುವ ಮೂಲಕ ದೇಶ-ವಿದೇಶ ಸೇರಿದಂತೆ ಪ್ರಪಂಚದಲ್ಲಿ ನಡೆಯುವ ಘಟನಾವಳಿಗಳ ಕುರಿತು ತಿಳಿಸಿದರು.
ಕಂಪನಿಗಳ ಉತ್ಪನತೆ ಹೆಚ್ಚಿಸುವಲ್ಲಿ ಎರ್ಗಾನಾಮಿಕ್ಸ್ ಪಾತ್ರ ಬಹುಮುಖ್ಯ
ಈ ವರ್ಷ ಕೀಟಕನ ಬಾಧೆ ಹೆಚ್ಚು ಹಿಂಗಾರಿ ಬೆಲೆ ಖಂಡ ಮಂಡಳ ಧಾನ್ಯ ಕಸ ವರ್ಗ ಸಮಧಾತುಗಳು ತುಟ್ಟಿಯಾಗುವುವು, ಪಶುಗಳಿಗೆ ರೋಗ, ಮಾನವ ಕುಲಕ್ಕೆ ಹೊಸ ರೋಗ ಚೋಳ ದೇಶ ಪಾಂಡಿ ದೇಶಕ್ಕೆ ಬರಗಾಲ ಮಳೆ ಬೆಳೆ ಖಂಡ ಮಂಡಲ ಎಂದು ಹೇಳಿದ್ದಾರೆ.
ಪ್ರಜೆಗಳಿಗೆ ರಾಯರಿಗೆ ಅಂಗಾಗಂಗಳು ಬಿಸಿಯಾದವು ದುಡ್ಡು ದಡ್ಡಿಗೆ ಬಿದ್ದಿತು ಸತ್ಯ ತಿಪ್ಪಿ ಸೇರಿತು ಯುಗ ಚಾತುರ್ಯ ಬೆಳೆದೀತು ಅಗ್ನಿ ಅನಾಹುತಗಳ ಭಯ ಜಗದಿ ಧರ್ಮದ ಕತ್ತಲೆ ಕವಿದೀತು ಸಂಗಾತಿಗಳೆಲ್ಲ ಹಂಗು ತೊರೆದು ನುಂಗಿಬಿಟ್ಟರು ಎಂದು ಹೇಳಿರುವ ಅವರು ಗಗನ ಚಲಿಸಿತು ಭೂಮಿ ನಡುಗಿತು ಮೃಗ ಬಾಧೆ ಹೆಚ್ಚು ಆಹಾರ ಧಾನ್ಯಗಳು ಎಣ್ಣೆ ಕಾಳುಗಳು,ಸಕ್ಕರೆ,ಎಣ್ಣೆ,ರಸ ವಸ್ತುಗಳು ಸಮಧಾರಣೆಯಲ್ಲಿ ಮಾರಾಟ ಪಶುಗಳು ಹಾಲು ಹೈನು ಸಾಕಷ್ಟು ಹಿಂಡುವುವು ಜಗತ್ತಿನಲ್ಲೆ ಸತ್ಯ ಧರ್ಮಕ್ಕೆ ಅಳಿಗಾಲ ಆಕಾಶ ಮಾರ್ಗ ಸಂಚಾರ ಹೆಚ್ಚು ಭೂ ಕಂಪನ ಆದೀತು ಹುಲಿ,ಸಿಂಹ ಕ್ರೂರ ಪ್ರಾಣಿ ಭಯ ಮುಂಬರುವ ಚೈತ್ರ ವೈಶಾಖದಲ್ಲಿ ಮಳೆ ಬೆಳೆ ಖಂಡ ಮಂಡಳ ಜೇಷ್ಠ ಆಷಾಢದಲ್ಲಿ ಗಾಳಿ ಬೀಸುವುದು ಮಳೆಯ ಪ್ರವೇಶ ಹೆಚ್ಚು ಆಹಾರ ಧಾನ್ಯಗಳು ತುಟ್ಟಿಯಾಗುವುವು ಬೆಲ್ಲ,ಶೇಂಗಾ,ಕುಸಬಿ,ಎಳ್ಳು,ಎಣ್ಣೆ ಕಾಳಿನ ದವಸ ಧಾನ್ಯ ತುಟ್ಟಿಯಾಗಿ ಮಾರುವುವು. ಶ್ರಾವಣ ಭಾದ್ರಪದ ಆಶ್ವೀಜದಲ್ಲಿ ಮಳೆ ಕಡಿಮೆ ಪೂಜೆಗಳಿಗೆ ಸುಖ ದು:ಖ ಮಿಶ್ರಫಲ ಬೆಳೆಗಳಿಗೆ ಕ್ರೀಮಿ ಕೀಟಗಳ ಬಾಧೆ ಹೆಚ್ಚು ಕಾರ್ತಿಕ-ಮಾರ್ಗಶೀರ-ಪುಷ್ಯ ಮಾಸಗಳಲ್ಲಿ ರಾಜಕೀಯ ಗೊಂದಲ ಮಂತ್ರಿ ಮಂಡಲಗಳಲ್ಲಿ ಅನೈಕ್ಯ ಎಂದು ಹೇಳಿದರು.
ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾರಕ: ದಸ್ತಿ
ಈ ವರ್ಷ ಮಾಘ-ಫಾಲ್ಗುಣಗಲ್ಲಿ ಬಿಸಿಲಿನ ತಾಪ ಪ್ರಜೆಗಳಿಗೆ ಚಿಂತೆ ಅನೇಕ ವಿಚಾರಗಳ ಗೊಂದಲ ಉಂಟಾಗಲಿದೆ ಎಂದು ಹೇಳಿರುವ ಅವರು ಈ ವರ್ಷ ಕೊರೋನಾಗಿಂತ ಭಯಂಕರವಾದ ರೋಗ ಜಗತ್ತನ್ನು ಕಾಡಲಿದೆ ಕೊರೋನಾಗಿಂತ ಭಯಂಕರವಾದ ಕೆಟ್ಟ ರೋಗ ಬರುತ್ತದೆ ಒಂದೂವರೆ ತಾಸು ಒಳಗೆ ವ್ಯಕ್ತಿ ರಕ್ತ ಕಾರಿ ಸಾಯುತ್ತಾನೆ ಅವನ ರಕ್ತ ವಾಸನೆ ಯಾರು ನೋಡುತ್ತಾರೋ ಅವರು ರಕ್ತ ಕಾರುತ್ತಾರೆ ಎಂದು ಹೇಳಿದ ಅವರು ಈ ರೋಗಗಳ ಭಾಧೆ ಮಹಾನವಮಿ ತನಕ ಮುಂದುವರೆಯಲಿದ್ದು ಮಹಾ ನವಮಿಯಲ್ಲಿ ದೇವಿ ಅವತಾರ ಆದಾಗ ಮಗ್ಗುಲ ಮುರಿಯತ್ತಾಳೆ ಎಂದು ನುಡಿದರು ನಮ್ಮ ದೇಶಕ್ಕೆ ರೋಗಗಳು ಬಾರದಂತೆ ಈಗಾಗಲೇ ಋಷಿ ಮುನಿಗಳು ಅಘೋರಿ ಸಾಧು ಸಂತರು ಯಜ್ಞ ಯಾಗಾದಿ ಮಾಡಿದ್ದಾರೆ ಹೀಗಾಗಿ ನಮ್ಮ ದೇಶಕ್ಕೆ ಯಾವುದೇ ರೋಗ ಬರುವದಿಲ್ಲ ಎಂದು ಹೇಳಿದರು, ಆದರೂ ಹೊರಗಡೆ ತಿರುಗಾಡುವಾಗ ಮಾಸ್ಕ ಹಾಕಿಕೊಳ್ಳಿ ಈ ವರ್ಷ ತುಂಬಾ ಕಠಿಣವಾಗಿದೆ ತುಂಬಾ ಎಚ್ಚರದಿಂದ ಇರಿ ಭಗವಂತನ ಧ್ಯಾನ ಮಾಡಿರಿ ಎಂದು ನುಡಿದರು.
ಈ ವರ್ಷದ ಮಳೆ ಬೆಳೆ ಕುರಿತು ಕಾಲಜ್ಞಾನ ನುಡಿದ ಅವರು ಮಳೆ ೮ ಪಟ್ಟು, ಗಾಳಿ ೯ಪಟ್ಟು ಮುಂಗಾರು ಬೆಳೆ ೧೨ ಹಿಂಗಾರಿ ಬೆಳೆ ೧೫ ಪಟ್ಟು ಬಂಡೀಲಿ ರಾಶಿ ಗಿಂಡಿಲಿ ನೀರು ಎಂದು ಮುಂಬರುವ ಪರಿಸ್ಥಿತಿ ಕುರಿತು ನುಡಿದರು.
೧೬-೧೮ವರ್ಷದ ಹುಡುಗಿ ಹುಬ್ಬಳ್ಳಿ-ಗದುಗಿನಲ್ಲಿ ಮುಂಬರುವ ೪-೫ ತಿಂಗಳಲ್ಲಿ ಐದು ಮುಖದ ಗಂಡು ಮಗುವಿಗೆ ಜನ್ಮ ನೀಡಲಿದ್ದಾಳೆ ಎಂದು ನುಡಿದ ಅವರು ದೇಶ ವಿದೇಶಗಳಲ್ಲಿ ಉತ್ಸವದಲ್ಲಿ ಈ ಬಾರಿಯ ಓಲಿಂಪಿಕ್ಸನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಭಾರತದ ಸಂಗೀತ ದಿಗ್ಗಜ ಹಾಡಲಿದ್ದಾರೆ ಅಲ್ಲದೆ ೩ತಿಂಗಳು ಒಳಗಾಗಿ ವಿಶ್ವಸಂಸ್ಥೆ ಕಚೇರಿಯಲ್ಲಿ ಗವಾಯಿಗಳ ಶಿಷ್ಯನೊಬ್ಬ ಹಾಡು ಹಾಡುತ್ತಾನೆ ಎಂದು ಹೇಳಿದ ಅವರು ವಾಜಪೇಯಿರವರ ಕನಸಾಗಿದ್ದ ನದಿಗಳ ಜೋಡಣೆ ಈ ವರ್ಷ ನೆರವೇರಲಿದೆ ಎಂದು ಹೇಳಿದರು.
ಶಹಾಪುರದಲ್ಲಿ ಬಸವ ಬೆಳಕು ಕಾರ್ಯಕ್ರಮ ನಾಳೆ
ಈ ವರ್ಷ ಕಠಿಣ ಕಾಲ ಬರುವುದು ಇದಕ್ಕೆ ಪರಿಹಾರವಾಗಿ ಶ್ರಾವಣದ ಎರಡನೇ ಸೋಮವಾರ ಸೊಸೆಯಂದಿರು ಅತ್ತೆಯರ ಪಾದ ಪೂಜೆ ಮಾಡಿ ಮಹಾ ನವಮಿ ಹಬ್ಬದಲ್ಲಿ ಎಳ್ಳು ಹೋಳಿಗೆ ದಾನ ಮಾಡಿರಿ ಗೋವುಗಳಿಗೆ ಮಂಡಾಳ ತಿನ್ನಿಸಿ ಕಾಗೆಗಳಿಗೆ ಮಂಡಾಳ ಹಾಕಿರಿ ಮುಂಬರುವ ದವನದ ಹುಣ್ಣಿಮೆಯಿಂದ ಒಂದು ವರ್ಷ ಮನೆಯ ಮುಂದೆ ಎಲ್ಲರೂ ಕೆಂಪು ರಂಗೋಲಿಯಿಂದ ನಾಗರ ಚಿತ್ರ ಹಾಕಿರಿ ಎಂದು ಹೇಳಿದರು.
ಪ್ರತಿನಿತ್ಯ ರಾತ್ರಿ ಮಲಗುವಾಗ ಓಂ ಪರಬ್ರಹಮ್ ಪರಮಾತ್ಮನೇ ಮಮ ಶರೀರೆ ಪಹಿ: ಪಾಹಿ: ಕುರು:ಕುರು: ಸ್ವಾಹಾ ಎಂದು ಪಠಿಸಬೇಕು ಎಂದು ನುಡಿದ ಅವರು ಈ ವರ್ಷದಲ್ಲಿ ಒಬ್ಬ ಮಗ ಇದ್ದವರು ಪ್ರತಿ ಅಮಾವಾಸ್ಯೆಯಂದು ಮನೆ ಬಿಟ್ಟು ಕಳುಹಿಸಬೇಡಿ ಆ ಮಗ ಎಲ್ಲಿ ಪ್ರಯಾಣ ಮಾಡುವಲೆಲ್ಲ ಸಾವು ನೋವುಗಳು ಜಾಸ್ತಿ ನುಗ್ಗೆಕಾಯಿ ದಾನ ಮಾಡಿರಿ ಎಂದು ತಿಳಿಸಿದ ಅವರು ಒಬ್ಬ ಹೆಣ್ಣು ಮಗಳು ಇದ್ದವರು ಅವರ ಹೆಣ್ಣು ಅಮ್ಮಂದಿರಿಗೆ ಸೀರೆ ದಾನ ಮಾಡಿ ವೃದ್ಧರು ಚಿಕ್ಕಮಕ್ಕಳು ೫ಸೋಮವಾರದಂದು ಅಕ್ಕಿ ಬೆಲ್ಲ ದಾನ ಮಾಡಿರಿ ಹೊಸ ರೋಗಕ್ಕೆ ಔಷಧಿಯಾಗಿ ತುಳಸಿ ಹೆಗ್ಗುಳ್ಳ ನೆಲಗುಳ್ಳ ಕಷಾಯ ಕುಡಿಯಿರಿ ಕಲ್ಲು ಸಕ್ಕರೆ ಲಿಂಬೆ ಹುಳಿ,ಜೇಷ್ಠ ಮಧು,ಮೃಗ ಶೃಂಗ ಭಸ್ಮ ಕೂಡಿಸಿ ಸೇವಿಸಬೇಕು ಎಂದು ಪರಿಹಾರ ತಿಳಿಸಿಕೊಟ್ಟರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…