ಕಲಬುರಗಿ: ಎರ್ಗಾನಾಮಿಕ್ಸ್ (ಧಕ್ಷತಾ ಶಾಸ್ತ್ರ) ವು ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಭಾಗದ ಜನರ ಕಾರ್ಯ ಕ್ಷಮತೆ, ದಕ್ಷತೆಯನ್ನು ಹೆಚ್ಚಿಸುವ ಕುರಿತು ಶಾಸ್ತ್ರ ಇದು ಕಂಪನಿಯ ಉತ್ಪನ್ನ ಹೆಚ್ಚಿಸುವಲ್ಲಿ ಮತ್ತು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಜನರ ದೈಹಿಕ ಮತ್ತು ಮಾನಸಿಕ ಆಘಾತವನ್ನು ನಿವಾರಿಸುವ ಕುರಿತು ವಿಧಾನಗಳ ತಿಳಿಸುವ ಶಾಸ್ತ್ರ ಇಂದಿನ ಆಧುನಿಕ ಜಗತ್ತಿನ ಕೈಗಾರಿಕಾ ಕಂಪನಿಗಳಿಗೆ ಅದರಲ್ಲಿ ಕಾರ್ಯನಿರ್ವಹಿಸುವ ಜನರಿಗೆ ಇದರ ಪ್ರಾಮುಖ್ಯತೆ ಬಾಹಳವಾಗಿದೆ ಎಂದು ಪಿ.ಡಿ.ಎ. ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೆಬ್ಬಾಳ ಹೇಳಿದರು.
ಅವರು ಕಾಲೇಜಿನ ಇಂಡಸ್ಟ್ರೀಯಲ್ & ಪ್ರೊಡೆಕ್ಷನ್ ಇಂಜನಿಯರಿಂಗ ವಿಭಾಗವು ಟೆಕ್ವಿಪ್ – ೩ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ೨೪-೨೬ ಮಾರ್ಚ ೨೦೨೧ ರವರೆಗಿನ ಎರ್ಗಾನಾಮಿಕ್ಸ್ ಅಪ್ಲಿಕೇಷನ್ಸ ಫಾರ್ ಹೈಯರ್ ಪ್ರೊಡೆಕ್ಟಿವಿಟಿ ವಿಷಯ ಕುರಿತ ೦೩ ದಿನದ ವೆಬಿನಾರಿನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕರ ಆಸ್ತಿ ಪುಣ್ಯಕ್ಷೇತ್ರ ಕೃಷ್ಣ ನದಿಯಲ್ಲಿ ವಿಸರ್ಜನೆ
ಉಪ ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ ರವರು ಸ್ವಾಗತಿಸಿದರು. ಟೆಕ್ವಿಪ್ ಸಂಯೋಜಕರಾದ ಪ್ರೊ. ಶರಣ ಪಡಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಅವಿನಾಶ ಸಾಂಬ್ರಾಣಿ ವೆಬಿನಾರ ಕುರಿತ ಪ್ರಾಸ್ತಾವಿಕ ಪಕ್ಷಿ ನೋಟವನ್ನು ನೀಡಿದರು. ಸಂಯೋಜಕರಾದ ಡಾ. ಖುತಬುದ್ದೀನ ಎಸ್.ಎನ್. ವಂದಿಸಿದರು. ಡಾ. ಸಚ್ಚಿದಾನಂದ ರೇವೂರ ನಿರೂಪಿಸಿದರು. ಡಾ. ದೇವು ಸುಧಾಕರ ಪಾಟೀಲ ಉಪಸ್ಥಿತರಿದ್ದರು.
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಡಾ. ಅಬೀದ ಅಲಿಖಾನ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ, ಡಾ ತಿರ್ಥಂಕರ ಘೋಷ ಶ್ರೀ ಶ್ರೀ ವಿಶ್ವವಿದ್ಯಾಲಯ ಓಡಿಶಾ, ಡಾ. ಎಲ್. ಪಿ. ಸಿಂಗ್ ಎನ್.ಐ.ಟಿ. ಜಲಂದರ, ಡಾ. ಸೌಗತಾ ಕಮಕರ ಐಐಟಿ ಗುಹಾಟಿ, ಡಾ. ಎ. ನಳಿನಿ ಕೃಷಿ ವಿಶ್ವವಿದ್ಯಾಲಯ ಹೈದ್ರಾಬಾದ, ಶ್ರೀ ಅಮೋಲ ಗೋಗರೆ, ಸಿ.ಇ.ಓ. ಟೆಕ್ಸಾಆನ್ ಕಾರ್ಪೊರೇಷನ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ದೇಶದ ವಿವಿಧಡೆಯಿಂದ ಸುಮಾರು ೧೨೦ ಜನ ಈ ವೆಬಿನಾರನಲ್ಲಿ ನೊಂದಣಿ ಮಾಡಿಸಿ ಭಾಗವಹಿಸಿದರು.