ಬಿಸಿ ಬಿಸಿ ಸುದ್ದಿ

ಶೂದ್ರರು ಎಂದು ಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿ ಕೇಳಿ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಮಿಲ್ಲರ್ ಜಾತಿಗಣತಿಯನ್ನು ಉಲ್ಲೇಖಿಸಿ ಲಿಂಗಾಯತ ಸಮುದಾಯದವರೂ ಕೂಡಾ ಶೂದ್ರರು ಎನ್ನುವ ದಾಖಲೆಯನ್ನು ಒದಗಿಸಿ 2ಎ ಮೀಸಲಾತಿ ನೀಡುವಂತೆ ಆಯೋಗದ ಮುಂದೆ ಪಂಚಮಸಾಲಿ ಸಮುದಾಯದವರು ಕೋರಿಕೆಯನ್ನು ಇಟ್ಟಿದ್ದಾರೆ. ಮೇಲ್ಪಂಕ್ತಿಯವರ ಪಂಕ್ತಿಭೇದ ವನ್ನು ಉಲ್ಲೇಖಿಸಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಶೂದ್ರರು ಎಂದುಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಕೇಳಿ ಎಂದು ಅವರಲ್ಲಿ ನಮ್ಮ ಮನವಿಯನ್ನು ಮಾಡಿಕೊಳ್ಳುತ್ತೇವೆ. ನಮ್ಮ ತಟ್ಟೆಯಲ್ಲಿ ಕೈ ಹಾಕಿ ಅನ್ನವನ್ನು ಕಿತ್ತುಕೊಳ್ಳುವುದು ಬೇಡ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಮುಂದುವರೆದ ಸಮುದಾಯಗಳಿಗೆ 2ಎ ಪ್ರವರ್ಗ ಪಟ್ಟಿಯಲ್ಲಿ ಸೇರಿಸುವ ಮೂಲಕ ಮೀಸಲಾತಿಯನ್ನು ನೀಡಬಾರದು ಎಂದು ಆಯೋಗಕ್ಕೆ ನೀಡಿದ್ದ ಮನವಿಯ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಬಹಿರಂಗ ವಿಚಾರಣೆಯಲ್ಲಿ ಅವರು ತಮ್ಮ ವಾದವನ್ನು ಮಂಡಿಸಿದರು. 2 ಎ ಪ್ರವರ್ಗದಲ್ಲಿ ಸುಮಾರು 102 ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಲಿಂಗಾಯತ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಾಢ್ಯವಾಗಿವೆ. ತಮ್ಮ ಪ್ರಭಾವನ್ನು ಬಳಸಿಕೊಳ್ಳುವ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡವನ್ನು ಹೇರುವ ಮೂಲಕ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ.

೧೫೦ ದಿನಗಳ ಕೂಲಿ ನೀಡಿದ ಪಂಚಾಯತಿ ಅಧಿಕಾರಿಗಳಿಗೆ ಧನ್ಯವಾದ-ಸೋಮು ಆಲ್ದಾಳ

ಪಟ್ಟಿಯಲ್ಲಿ ಈಗಾಗಲೇ ಇರುವ ಹಲವಾರು ಸಮುದಾಯಗಳ ವ್ಯಕ್ತಿಗಳು ಇದುವರೆಗೂ ಒಂದು ಬಾರಿಯೂ ಕೂಡಾ ಮೀಸಲಾತಿಯ ಉಪಯೋಗ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ಮುಂದುವರೆದ ಪ್ರಬಲ ಜಾತಿಗಳನ್ನು ಸೇರಿಸಿದಲ್ಲಿ ಕುಲಕಸುಬು ಆಧಾರಿತ ಸಮುದಾಯಗಳು ತಮ್ಮ ಅಸ್ತಿತ್ವನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ರಾಜ್ಯ ಸರಕಾರ ತಪ್ಪಿಸಬೇಕಾಗಿತ್ತು. ಆದರೆ, ರಾಜಕೀಯ ಪ್ರಭಾವ ಬಳಸಿ ಹಾಕಿರುವ ಒತ್ತಡಗಳ ಅನಿವಾರ್ಯತೆಯಿಂದ ಅವರನ್ನು ಪ್ರವರ್ಗ ಪಟ್ಟಿಗೆ ಸೇರಿಸಲು ಸರಕಾರವೇ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿ ಸದನದಲ್ಲೂ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಆಯೋಗದ ಮುಂದೆ ಬಂದಿದ್ದೇವೆ. ಈಗ ಆಯೋಗ ಸಣ್ಣ ಸಮುದಾಯಗಳ ಆಸ್ಮಿತೆಯನ್ನು ಕಾಪಾಡುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಪ್ರಬಲ ಸಮುದಾಯದ ಹಿನ್ನಲೆಯ ಹೊಂದಿರುವ ಪಂಚಮಸಾಲಿ ಸಮುದಾಯದವರು ಶೈಕ್ಷಣಿಕ ಸಂಸ್ಥೇಗಳ ಮೂಲಕ, ಮಠಗಳ ಮೂಲಕ, ತಮ್ಮ ಸಮುದಾಯವನ್ನು ಪ್ರತಿನಿಧಿಸುವ ಶಾಸಕರನ್ನು ಹೊಂದುವ ಮೂಲಕ ಎಲ್ಲಾ ರೀತಿಯಲ್ಲೂ ಶಕ್ತರಾಗಿದ್ದಾರೆ. ಆದರೆ, ಅವರುಗಳು ತಮ್ಮ ಮಠಾಧೀಶರ ನೇತೃತ್ವದಲ್ಲಿ ಸಣ್ಣ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವಂತಹ ಪ್ರವರ್ಗ 2 ಎ ನಲ್ಲಿ ಸೇರಿಸಂತೆ ವಾದವನ್ನು ಮಂಡಿಸಿದ್ದಾರೆ. ಅಲ್ಲದೆ, ಅದಕ್ಕೆ ಮಿಲ್ಲರ್‌ ಸಮಿತಿಯ ವರದಿಯನ್ನು ಉಲ್ಲೇಖಿಸಿ ತಾವುಗಳು ಶೂದ್ರರ ಸ್ಥಾನಮಾನದವರು ಎನ್ನುವ ವಾದವನ್ನು ತಮ್ಮ ಮುಂದೆ ಇಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಮಠಾಧೀಶರುಗಳಿಗೆ ನಮ್ಮ ಸವಿನಯ ಮನವಿ ಏನೆಂದರೆ, ಸಾಮಾಜಿಕವಾಗಿ ಅಷ್ಟೇಲ್ಲಾ ನೋವುಗಳನ್ನು ಹೊಂದಿರುವ ಅವರುಗಳು ಹೆಚ್ಚಿನ ಮೀಸಲಾತಿ ಪ್ರಮಾಣ ಹೊಂದಿರುವ ಪರಿಶಿಷ್ಟ ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ಇಡಬೇಕು. ಕೇವಲ ಶೇಕಡಾ 15 ರಷ್ಟು ಮೀಸಲಾತಿಯನ್ನು ಹೊಂದಿರುವ ಪ್ರವರ್ಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ಸಣ್ಣ ಸಮುದಾಯದವರ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ. ಅಲ್ಲದೆ, ಪಂಕ್ತಿಭೇಧ ಹಾಗೂ ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆಯಿಂದ ಪ್ರವರ್ಗ 2ಎ ಸ್ಥಾನಮಾನ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ. ಅದಕ್ಕೆ ಅವರು ಪೋಲೀಸರ ಮೊರೆ ಹೋಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾರಕ: ದಸ್ತಿ

ಅತಿಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್‌ ಮಾತನಾಡಿ, ಪ್ರವರ್ಗ 2 ಎ ನಲ್ಲಿ ಈಗಾಗಲೇ ಇರುವಂತಹ ಜಾತಿಗಳು ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿವೆ. ಆದರೆ, ರಾಜಕೀಯವಾಗಿ ಬಹಳಷ್ಟು ಪ್ರಾಬಲ್ಯತೆಯನ್ನು ಹೊಂದಿರುವ, ಅಲ್ಲದೆ ಈಗಾಗಲೇ ಅದನ್ನು ಉಪಯೋಗಿಸಿಕೊಂಡು ರಾಜ್ಯ ಸರಕಾರದ ಮೇಲೆ ಸಾಕಷ್ಟು ಒತ್ತಡವನ್ನು ಹೇರಲಾಗಿದೆ.

ಸರಕಾರದ ಮಂತ್ರಿಗಳೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ಥಾಪ ಮಾಡಿದ್ದಾರೆ. ಆದರೆ, ಕುಲಕಸುಬು ಆಧಾರಿತ ಸಮುದಾಯಗಳೀಗೆ ಯಾವುದೇ ರಾಜಕೀಯ ಪ್ರಾತಿನೀಧ್ಯ ಇಲ್ಲದೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿಯದೇ ನ್ಯಾಯಯುತವಾದಂತಹ ವರದಿಯನ್ನು ಸರಕಾರಕ್ಕೆ ನೀಡಬೇಕು ಹಾಗೂ ಅತಿ ಹಿಂದುಳಿದ ಜಾತಿಗಳ ಆಸ್ಮಿತೆ ಹಾಗೂ ಅಸ್ತಿತ್ವ ವನ್ನು ಕಾಪಾಡಬೇಕು. ಮೃಗಾಲಯದಲ್ಲಿ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇಟ್ಟಿರಲಾಗುತ್ತದೆ. ಅದೇ ಬಲಿಷ್ಠ ಪ್ರಾಣಿಗಳ ಜೊತೆಯಲ್ಲೇ ಇತರ ಸಣ್ಣ ಪ್ರಾಣಿಗಳನ್ನು ಬಿಟ್ಟರೆ ಅವು ಹೇಗೆ ಅಹಾರ ಸ್ವೀಕರಿಸಲು ಸಾಧ್ಯ. ಪಂಚಮಸಾಲಿಯಂತಹ ಬಲಿಷ್ಠ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಿದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದರು.

ಮನುಷ್ಯ ರಕ್ತ ಕಾರುವಂತ ಭಯಾನಕ ಇನ್ನೊಂದು ರೋಗ ಬರಲಿದೆ: ಕಾಲಜ್ಞಾನ ಬ್ರಹ್ಮ ಶರಣಬಸವ ಶ್ರೀ ಭವಿಷ್ಯ

ಈ ಸಭೆಯಲ್ಲಿ ವೇದಿಕೆಯ ಉಪಾಧ್ಯಕ್ಷರಾದ ಡಾ.ಜಿ. ರಮೇಶ್‌, ಹೆಚ್‌ ಸುಬ್ಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾರದ ಜಿ.ಡಿ ಗೋಪಾಲ್‌, ಹೆಚ್‌ ಸಿ ರುದ್ರಪ್ಪ, ಟಿ.ಸಿ ನಟರಾಜ್‌, ಎಂ.ಬಿ ಬಸವರಾಜ್‌ ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago