ಹೈದರಾಬಾದ್ ಕರ್ನಾಟಕ

ಜೀವನೋಪಾಯಕ್ಕಾಗಿ ಪೊಲೀಸ್ ಇಲಾಖೆ ಸಲ್ಲದು, ಜನಸೇವೆಯೇ ಮುಖ್ಯ: ಬಿ. ದಯಾನಂದ್

ಕಲಬುರಗಿ: ಸಾಮಾನ್ಯರಂತೆ ಜೀವನ ನಡೆಸುವುದಕ್ಕಾಗಿ ಪೆÇಲೀಸ್ ಇಲಾಖೆಗೆ ಸೇರುವುದು ಸರಿಯಾದ ಆಯ್ಕೆಯಲ್ಲ. ಇಲ್ಲಿ ಸಮಾಜದ ರಕ್ಷಣೆ, ಸುಭದ್ರ ದೇಶ ನಿರ್ಮಾಣಕ್ಕಾಗಿ ಪೆÇಲೀಸ್ ಇಲಾಖೆಗೆ ಸೇರಬೇಕು ಎಂದು ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಬಿ. ದಯಾನಂದ ಅವರು ಪ್ರತಿಪಾದಿಸಿದರು.

ಸೋಮವಾರ ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ಪೆÇಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ನಡೆದ 3ನೇ ತಂಡದ ಪಿ.ಎಸ್.ಐ. (ಗುಪ್ತವಾರ್ತೆ), 5ನೇ ತಂಡದ ಪಿ.ಎಸ್.ಐ. (ನಿಸ್ತಂತು) ಹಾಗೂ 5ನೇ ತಂಡದ ಸ್ಪೆಷಲ್ ಆರ್.ಎಸ್.ಐ./ ಆರ್.ಎಸ್.ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೆÇಲೀಸ್ ಇಲಾಖೆಯು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಎದುರಿಸಲು ನೀವೆಲ್ಲರೂ ಸಿದ್ದಗೊಳ್ಳಬೇಕು. ಅನೇಕ ಸನ್ನಿವೇಶ ಮತ್ತು ಮತ್ತಿತರ ಕಠಿಣ ಸವಾಲುಗಳನ್ನು ಎದುರಿಸಲು ತಮಗೆ ಈ ತರಬೇತಿ ಸಹಾಯವಾಗಲಿದೆ. ಇಲಾಖೆಗೆ ಯಾವ ಉದ್ದೇಶ ಇಟ್ಟುಕೊಂಡು ಸೇರಿದ್ದಿರೋ ಅದೇ ಉದ್ದೇಶ ತಮ್ಮ ಸೇವಾವಧಿಯಲ್ಲಿ ದಾರಿದೀಪವಾಗಬೇಕು. ಸರಿ, ತಪ್ಪುಗಳನ್ನು ಅರಿಯುವ ಸಾಮಥ್ರ್ಯ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಲಬುರಗಿಯಲ್ಲಿ ಹೆಲಿಪೋರ್ಟ್ ಸ್ಥಾಪನೆ: ಸಚಿವ ಸಿ.ಪಿ.ಯೋಗೇಶ್ವರ್

ಇಂದಿಲ್ಲಿ ನಿರ್ಗಮನ ಪಥÀಸಂಚಲದಲ್ಲಿ ಭಾಗಿಯಾಗಿರುವ 108 ಪ್ರಶಿಕ್ಷಣಾರ್ಥಿಗಳು ತಮ್ಮ ಮುಂದಿನ ಸೇವಾವಧಿಯಲ್ಲಿ ಒಂದು ವರ್ಷದ ಮಟ್ಟುಗೆ ಹೆಚ್ಚಿನ ತರಬೇತಿ ಪಡೆದು, ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಲು ಅಣಿಯಾಗಬೇಕು. ಇಲ್ಲಿ ಸಾಕಷ್ಟು ಪ್ರಶಿಕ್ಷಣಾರ್ಥಿಗಳು ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಿ ಬಂದಿರುವುದರಿಂದ ಅದು ತಮಗೆ ವರವಾಗಲಿದೆ. ನಿಮಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಿ ಅದು ತಮ್ಮ ಮೌಲ್ಯಯುತ ಜೀವನ ನಡೆಸಲು ಅಡಿಪಾಯವಾಗುತ್ತದೆ ಎಂದು ಅವರು ಹೇಳಿದರು.

ನಾಗನಹಳ್ಳಿ ಪಿ.ಟಿ.ಸಿ. ಪ್ರಾಂಶುಪಾಲ ಮತ್ತು ಪೆÇಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸಂಸ್ಥೆಯ ವರದಿ ವಾಚನ ಮಾಡಿ, ಪ್ರಸ್ತುತ 3ನೇ ತಂಡದ ಪಿ.ಎಸ್.ಐ. (ಗುಪ್ತವಾರ್ತೆ), 5ನೇ ತಂಡದ ಪಿ.ಎಸ್.ಐ (ನಿಸ್ತಂತು) ಹಾಗೂ 5ನೇ ತಂಡದ ವಿಶೇಷ ಆರ್.ಎಸ್.ಐ./ ಆರ್.ಎಸ್.ಐ. ಪ್ರಶಿಕ್ಷಣಾರ್ಥಿಗಳಿಗೆ ಶುಭ ಕೋರಿದರು.

ಕಲಬುರಗಿಯಲ್ಲಿ ಹೆಲಿಪೋರ್ಟ್ ಸ್ಥಾಪನೆ: ಸಚಿವ ಸಿ.ಪಿ.ಯೋಗೇಶ್ವರ್

ಬಹುಮಾನ ವಿತರಣೆ: ತರಬೇತಿ ಸಮಯದಲ್ಲಿ ಏರ್ಪಡಿಸಿದ ಒಳಾಂಗಣ ವಿಭಾಗದಲ್ಲಿ ಪಿ.ಎಸ್.ಐ. (ಗುಪ್ತವಾರ್ತೆ)ಯ ಚೈತ್ರ ಎಸ್. ಅವರು ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಪಿ.ಎಸ್.ಐ (ನಿಸ್ತಂತು) ವಿಭಾಗದಲ್ಲಿ ಸೈಯ್ಯದ ಹರ್ಮೈನ್ ಸರ್ವರಿ ಒಳಾಂಗಣ ಕ್ರೀಡೆಯಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಪ್ರಶಸ್ತಿ ಪಡೆದುಕೊಂಡರು. ಇನ್ನು ಸ್ಪೆಷಲ್ ಆರ್.ಎಸ್.ಐ/ ಆರ್.ಎಸ್.ಐ. ಒಳಾಂಗಣ ವಿಭಾಗದಲ್ಲಿ ಅಮರೇಶ ಬಿರಾದಾರ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿದ್ದಾರೆ. ಹೊರಾಂಗಣ ಕ್ರೀಡೆಯಲ್ಲಿ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಮಹಾಲಿಂಗ ಗಂಗಪ್ಪತೇಲಿ ಬಹುಮಾನ ಪಡೆದರು. 9 ಎಂ.ಎಂ ಪಿಸ್ತೂಲ್ ಶೂಟಿಂಗ್‍ನಲ್ಲಿ ಪರಶುರಾಮ ಕಾಂಬಳೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಎಸ್.ಎಲ್.ಆರ್. ರೈಫಲ್ ಶೂಟಿಂಗ್‍ನಲ್ಲಿ ಅಂಬರೀಷ ಮೇತ್ರಿ ಪ್ರಥಮ ಸ್ಥಾನ ಪಡೆದರು. ಒಟ್ಟಾರೆ ಆಲ್ ರೌಂಡರ್ ಬೆಸ್ಟ್ (ಸರ್ವಾಂಗೀಣ) ಸ್ಥಾನ ಗಳಿಸಿದ ಮಹಾಲಿಂಗ ಗಂಗಪ್ಪತೇಲಿ ಅವರಿಗೆ ಅತಿಥಿ ಗಣ್ಯರು ಬಹುಮಾನ ನೀಡಿ ಗೌರವಿಸಿದರು.

ನಿರ್ಗಮನ ಪಥಸಂಚಲನದ ಪರೇಡ್ ಕಮಾಂಡರ್‍ರಾಗಿ ಡಿ.ಎ.ಆರ್. ಆರಕ್ಷಕ ಉಪ ನಿರೀಕ್ಷಕ ಪುನೀತಕುಮಾರ ಸಿ.ಎಸ್. ಹಾಗೂ ದ್ವಿತೀಯ ದಂಡ ನಾಯಕನಾಗಿ 4ನೇ ಪಡೆಯ ಎಸ್.ಆರ್.ಪಿ ಆರಕ್ಷಕ ಉಪ ನಿರೀಕ್ಷಕ ಅಭಿμÉೀಕ ನಾಡಗೌಡರ್ ಅವರು ಮುಂದಾಳತ್ವ ವಹಿಸಿದರು. ಶಶಿಕುಮಾರ ಕೆ.ಟಿ. ರಾಕೇಶ್ ಕೆ.ಜಿ. ಚೈತ್ರ ಎಸ್., ಲಿಂಗರಾಜ ಹುನ್ನೂರ ಆಯಾ ತಂಡದ ನೇತೃತ್ವ ವಹಿಸಿದರು.

ಚಂದ್ರಂಪಳ್ಳಿ ಜಲಾಶಯ ಸಮಗ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು : ಸಿ.ಪಿ.ಯೋಗೇಶ್ವರ್

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಕೆ.ಎಸ್.ಆರ್.ಪಿ 6ನೇ ಪಡೆಯ ಕಮಾಡೆಂಟ್ ಬಸವರಾಜ ಜಿಳ್ಳೆ ಹಾಗೂ ಪೆÇಲೀಸ್ ಇಲಾಖೆಯ ಇನ್ನಿತರ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.

ಪಿ.ಟಿ.ಸಿ.ಯ ಹೊರಾಂಗಣ ವಿಭಾಗದ ಡಿ.ಎಸ್.ಪಿ ಎಂ.ಎಂ. ಯಾದವಾಡ ಅವರು ಸ್ವಾಗತ ಕೋರಿದರು. ಪೆÇಲೀಸ್ ಇನ್ಸ್‍ಪೆಕ್ಟರ್ ಮೊಹಮ್ಮದ್ ಗೌಸ್ ವಂದಿಸಿದರು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ಸೇಡಂ ಮತಕ್ಷೇತ್ರದಲ್ಲಿ ನಡೆದ 4 ಗ್ರಾ.ಪಂ ಉಪಚುನಾವಣೆ ಬಿಜೆಪಿ ಗೆಲುವು

ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂ‌‌ನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು‌ ಜಯ…

6 mins ago

ವಾಡಿ: ಬಿಜೆಪಿ ಕಛೇರಿಯಲ್ಲಿ 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…

10 mins ago

ನಿಧನ ವಾರ್ತೆ: ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್

ಚಿಂಚೋಳಿ: ತಾಲೂಕಿನ‌ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…

13 mins ago

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

5 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

16 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago