ಬಿಸಿ ಬಿಸಿ ಸುದ್ದಿ

ಚೆನ್ನಣ್ಣ ವಾಲೀಕಾರ ಜನ್ಮ ದಿನದ ಅಂಗವಾಗಿ ವ್ಯೋಮಾ ವ್ಯೋಮಾ ಪ್ರಶಸ್ತಿ ಪ್ರದಾನ

ಕಲಬುರಗಿ: ಸಕಲ ಜೀವಾತ್ಮರಿಗೆ ಲೇಸು ಬಯಸಿದ ಈ ನಾಡಿನಲ್ಲಿ ಅಪೂರ್ವ ಸೇವೆ ಸಲ್ಲಿಸಿದವರಿದ್ದಾರೆ ಎಂದು ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.

ನಗರದ ಕನ್ನಡ ಬವನದ ಸುವರ್ಣ ಸಭಾ ಭವನದಲ್ಲಿ ಸಿದ್ಧಾರ್ಥ ಪ್ರಕಾಶನ, ಕವಿಮಾರ್ಗ ಪ್ರಕಾಶನ ಹಾಗೂ ದಲಿತ ಬಂಡಾಯ ಸಾಹಿತ್ಯ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಬಂಡಾಯ ಸಾಹಿತಿ, ಹೋರಾಟಗಾರ, ಸಮಾಜ ಚಿಂತಕ ಡಾ. ಚನ್ನಣ್ಣ ವಾಲೀಕಾರ ಜನ್ಮ ದಿನೋತ್ಸವ ಅಂಗವಾಗಿ ಜನಪದ, ಸಾಹಿತ್ಯ, ಕಲೆ, ಹೋರಾಟ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ರಾಜ್ಯ ಮಟ್ಟದ ವ್ಯೋಮಾ ವ್ಯೋಮಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಮ್ಯೂನಿಸ್ಟ್‌ ಇರಬಹುದು, ಬಿಜೆಪಿ ಇರಬಹುದು. ಆದರೆ ಮನುಷ್ಯತ್ವ ಇರಬೇಕು ಎಂದರು.

ಕೆಂಪಂಗಿ ಚೆನ್ನಣ್ಣ ಮತ್ತು ನನ್ನ ಸ್ನೇಹ ಜಗಳದಿಂದಲೇ ಶುರುವಾಗಿತ್ತು. ವಾದ-ವಿವಾದಗಳಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ತಿಳಿಸಿದರು. ದೇಶ ಇಂದು ಅನೇಕ ಸಂಘರ್ಷ ಮತ್ತು ಇಕ್ಕಟ್ಟುಗಳಿಂದ ಕೂಡಿದೆ. ಇದನ್ನು ತಿಳಿಗೊಳಿಸಿ ಸೌಹಾರ್ದಯುತ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಅಜಯಸಿಂಗ್ ಗೆ ಭೇಟಿ: ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನಕ್ಕೆ ಸ್ಪಂದನೆ

ಡಾ. ಚೆನ್ನಣ್ಣ ವಾಲೀಕಾರ ಬದುಕು ಬರಹ ಕುರಿತು ಮಾತನಾಡಿದ ಕಲಬುರಗಿ ಆಕಾಶವಾಣಿ ಕೆಂದ್ರದ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಶಂಕರವಾಡಿಯಲ್ಲಿ ಜನಿಸಿದ ಚನ್ನಣ್ಣನವರು, ಸಾಹಿತ್ಯ ಲೋಕದ ಶಂಕರನಾಗಿ ಬೆಳೆದದ್ದು ವಿಷ್ಮಯವೇ ಸೈ ಎಂದರು.

‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಧ್ಯೇಯವಾಕ್ಯ ನೀಡಿದ ಚೆನ್ನಣ್ಣನವರು ದಲಿತ ಬಂಡಾಯ ಚಳವಳಿಗೆ ಭದ್ರ ಬುನಾದಿ ಹಾಕಿದರು ಎಂದು ವಿವರಿಸಿದರು. ಇದೇವೇಳೆಯಲ್ಲಿ ಡಾ. ಸ್ವಾಮಿರಾವ ಕುಲಕರ್ಣಿ, ಟಿ.ವಿ. ಶಿವಾನಂದನ್, ಡಾ. ಸರಸ್ವತಿ ಚಿಮ್ಮಲಗಿ, ಶಂಭುಲಿಂಗ ವಾಲ್ದೊಡ್ಡಿಯವರಿಗೆ ವ್ಯೋಮಾ ವ್ಯೋಮಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಎಸ್ ಎಸ್ ವಿ ಟಿವಿ ಚಾನೆಲ್ ಪ್ರಧಾನ ಸಂಪಾದಕ ಶಂಕರ ಕೋಡ್ಲಾ, ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಜಗದೇವಿ ಗಾಯಕವಾಡ ಮುಖ್ಯ ಅತಿಥಿಯಾಗಿದ್ದರು.

ಮಂಗಳವಾರ ಸಂತೆ ಪ್ರಾರಂಭಕ್ಕೆ ರೈತರು, ವರ್ತಕರ ಆಗ್ರಹ

ಸಿದ್ದಮ್ಮ ವಾಲೀಕಾರ ಉಪಸ್ಥಿತರಿದ್ದರು. ಡಾ. ಕೆ.ಎಸ್. ಬಂಧು ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಅಣಜಗಿ ಸ್ವಾಗತಿಸಿದರು. ಸಿ.ಎಸ್. ಮಾಲಿಪಾಟೀಲ ನಿರೂಪಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago