ಫ್ಲಿಪ್ ಕಾರ್ಟ್ ಮತ್ತು ಮಹೀಂದ್ರ ಲಾಜಿಸ್ಟಿಕ್ಸ್ ನ ಇಡಿಇಎಲ್ ಜತೆ ಒಪ್ಪಂದ

ಬೆಂಗಳೂರು: ಭಾರತದ ಸ್ವದೇಶಿ ಈ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ (ಎಂಎಲ್ಎಲ್)ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಇಂದು ಘೋಷಣೆ ಮಾಡಿದೆ. ಈ ಒಪ್ಪಂದದ ಉದ್ದೇಶವೆಂದರೆ ದೇಶಾದ್ಯಂತ ಫ್ಲಿಪ್ ಕಾರ್ಟ್ ನ ಲಾಜಿಸ್ಟಿಕ್ಸ್ ಗೆ ಎಲೆಕ್ಟ್ರಿಕ್ ವಾಹನಗಳ ನಿಯೋಜನೆ ಮಾಡಿಕೊಳ್ಳುವುದಾಗಿದೆ. 2030 ರ ವೇಳೆಗೆ 25,000 ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳ(ಇವಿಗಳು)ನ್ನು ನಿಯೋಜನೆ ಮಾಡಿಕೊಳ್ಳುವ ಮೂಲಕ ಸಂಪೂರ್ಣವಾಗಿ ಎಲೆಕ್ಟ್ರಿಕ್ ಸಾರಿಗೆಯನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ಫ್ಲಿಪ್ ಕಾರ್ಟ್ ಹೊಂದಿದೆ. ಇದರ ಅಂಗವಾಗಿ ಮಹೀಂದ್ರ ಲಾಜಿಸ್ಟಿಕ್ಸ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮಹೀಂದ್ರ ಲಾಜಿಸ್ಟಿಕ್ಸ್ ವಿವಿಧ ಒಇಎಂಗಳ ಜತೆಗೆ ಮಹತ್ವದ ಪಾತ್ರ ವಹಿಸಲಿದೆ ಮತ್ತು ಫ್ಲಿಪ್ ಕಾರ್ಟ್ ನ ಸಾರಿಗೆ ವ್ಯವಸ್ಥೆಯನ್ನು ಸುಸ್ಥಿರ ಸಾರಿಗೆ ವ್ಯವಸ್ಥೆಯಾದ ಇವಿಗಳಿಗೆ ರೂಪಾಂತರಗೊಳ್ಳಲು ಬೆಂಬಲವಾಗಿ ನಿಲ್ಲಲಿದೆ.

ಸುಸ್ಥಿರವಾದ ವ್ಯವಹಾರ ಪದ್ಧತಿಗಳತ್ತ ಪರಸ್ಪರ ಬದ್ಧತೆ ಮತ್ತು ದೂರದೃಷ್ಟಿಯೊಂದಿಗೆ ಮಹೀಂದ್ರ ಲಾಜಿಸ್ಟಿಕ್ಸ್ ತನ್ನದೇ ಸ್ವಂತ ಎಲೆಕ್ಟ್ರಿಕ್ ಡೆಲಿವರಿ ಬ್ರ್ಯಾಂಡ್ ಇಡಿಇಎಲ್ ಅನ್ನು 2020 ರ ಅಂತ್ಯದ ವೇಳೆಗೆ ಆರಂಭಿಸಿದೆ. ಇಡಿಇಎಲ್ ಗ್ರಾಹಕ ಕಂಪನಿಗಳು & ಈ-ಕಾಮರ್ಸ್ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಭಾರತದಲ್ಲಿನ ಆರು ನಗರಗಳಲ್ಲಿನ ಕಟ್ಟಕಡೆಯ ಗ್ರಾಹಕನಿಗೂ ವಿತರಣೆ ಸೇವೆಯನ್ನು ಒದಗಿಸುತ್ತಿದೆ.

ಚೆನ್ನಣ್ಣ ವಾಲೀಕಾರ ಜನ್ಮ ದಿನದ ಅಂಗವಾಗಿ ವ್ಯೋಮಾ ವ್ಯೋಮಾ ಪ್ರಶಸ್ತಿ ಪ್ರದಾನ

ಇಡಿಇಎಲ್ ಮೂಲಕ ಎಂಎಲ್ಎಲ್ ಫ್ಲಿಪ್ ಕಾರ್ಟ್ ಗ್ರೀನ್ ಸಪ್ಲೈ ಚೇನ್ ಅನ್ನು ಸೃಷ್ಟಿಸುವ ತನ್ನ ಜರ್ನಿಯಲ್ಲಿ ದೊಡ್ಡ ಇವಿಗಳನ್ನು ನಿಯೋಜನೆ ಮಾಡುವುದಲ್ಲದೇ, ಇವಿ ನಿಯೋಜನೆ ಮತ್ತು ದೇಶಾದ್ಯಂತ ಕಾರ್ಯಾಚರಣೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಇದರಲ್ಲಿ ಮೂಲಸೌಕರ್ಯ ಮತ್ತು ಚಾರ್ಜಿಂಗ್ ಸ್ಟೇಷನ್ ಗಳು, ಪಾರ್ಕಿಂಗ್ ಲಾಟ್ ಗಳು, ತರಬೇತಿ ಸ್ಥಳಗಳು, ರೂಟ್ ಪ್ಲಾನಿಂಗ್ ಮತ್ತು ಬ್ಯಾಟರಿ ಸ್ವಾಪಿಂಗ್ ಸ್ಟೇಷನ್ ಗಳ ನಿರ್ಮಾಣವೂ ಸೇರಿದೆ. ಮತ್ತೊಂದು ಪ್ರಮುಖವಾದ ಆದ್ಯತಾ ವಲಯವೆಂದರೆ ತಂತ್ರಜ್ಞಾನ ಮತ್ತು ಕಂಟ್ರೋಲ್ ಟಾವರ್ ಕಾರ್ಯಾಚರಣೆಗಳಿಂದ ಅತ್ಯುತ್ಕೃಷ್ಠವಾದ ಕಾರ್ಯದಕ್ಷತೆ ಮತ್ತು ವೆಚ್ಚ ಉಳಿತಾಯಕ್ಕೆ ಅವಕಾಶ ಮಾಡಿಕೊಡುತ್ತದೆ.

ಫ್ಲಿಪ್ ಕಾರ್ಟ್ ಈಗಾಗಲೇ ಅನೇಕ ಒಇಎಂಗಳ ಜತೆಗೆ ಪಾಲುದಾರಿಕೆಯನ್ನು ಹೊಂದಿದೆ ಮತ್ತು ತನ್ನ ಸಪ್ಲೈ ಚೇನ್ ನಲ್ಲಿ ಈಗಾಗಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಅಳವಡಿಕೆ ಮಾಡಿಕೊಂಡಿದೆ. ಎಂಎಲ್ಎಲ್ ಇಡಿಇಎಲ್ ನೊಂದಿಗೆ ಕಂಪನಿಯ ಪಾಲುದಾರಿಕೆಯೊಂದಿಗೆ ಈ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಕ್ರಿಯಾಶೀಲ ಮಾಡಲಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಯೋಜನೆ ಮಾಡಲು ನೆರವಾಗುತ್ತದೆ. ಇದಲ್ಲದೇ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಬೆಂಬಲವನ್ನು ಮೇಲ್ಮಟ್ಟಕ್ಕೆ ಹೆಚ್ಚಳ ಮಾಡಿಕೊಳ್ಳಲು ನೆರವಾಗುತ್ತದೆ. ಚಾರ್ಜಿಂಗ್ ತಾಣಗಳು, ಟ್ರ್ಯಾಕಿಂಗ್, ಅಸೆಟ್, ಸುರಕ್ಷತೆ ಮತ್ತು ವೆಚ್ಚದ ವಿಚಾರದಲ್ಲಿ ಕಂಪನಿಗೆ ಸಾಕಷ್ಟು ಉಪಯೋಗವಾಗಲಿದೆ.

ಶಾಸಕ ಅಜಯಸಿಂಗ್ ಗೆ ಭೇಟಿ: ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನಕ್ಕೆ ಸ್ಪಂದನೆ

ಎಂಎಲ್ಎಲ್ ತನ್ನ ಎಲೆಕ್ಟ್ರಿಕ್ ವಿತರಣೆ ಬ್ರ್ಯಾಂಡ್ ಆಗಿರುವ ಇಡಿಇಎಲ್ ಅಡಿ ವಿವಿಧ ಮಾದರಿಯ ಮತ್ತು ವರ್ಗಗಳ ಎಲೆಕ್ಟ್ರಿಕ್ ವಾಹನಗಳನ್ನು ಒಇಎಂಗಳ ಮೂಲಕ ಪಡೆದುಕೊಳ್ಳಲಿದೆ. ಇಡಿಇಎಲ್ ಈಗಾಗಲೇ ಇವಿಗಳನ್ನು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ನ ಉದ್ದೇಶಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಈ ಕಾರ್ಯಾಚರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಡಿಇಎಲ್ ಬೆಂಗಳೂರು, ಮುಂಬೈ, ದೆಹಲಿ, ಪುಣೆ, ಕೊಲ್ಕತ್ತಾ ಮತ್ತು ಹೈದ್ರಾಬಾದ್ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಪ್ರಮುಖ 20 ನಗರಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ.

ಹೇಮಂತ್ ಬದ್ರಿ, ಎಸ್ ವಿಪಿ ಸಪ್ಲೈ ಚೇನ್, ಫ್ಲಿಪ್ ಕಾರ್ಟ್ ಗ್ರೂಪ್ ಅವರು ಮಾತನಾಡಿ, “ಫ್ಲಿಪ್ ಕಾರ್ಟ್ ನ ದೊಡ್ಡ ಮಟ್ಟದ ಸುಸ್ಥಿರತೆಯ ಗುರಿಯನ್ನು ತಲುಪಲು ಲಾಜಿಸ್ಟಿಕ್ಸ್ ನ ವಿದ್ಯುದ್ದೀಕರಣ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಮಹೀಂದ್ರ ಲಾಜಿಸ್ಟಿಕ್ಸ್ ಅನ್ನು ಲಾಜಿಸ್ಟಿಕ್ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. 2030 ರ ವೇಳೆಗೆ ನಮ್ಮ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಎಲೆಕ್ಡ್ರಿಕ್ ಮಾಡುವ ಗುರಿಯನ್ನು ತಲುಪುವಲ್ಲಿ ಈ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಮೂಹಿಕ ಪ್ರಯತ್ನಗಳ ಮೂಲಕ ನಾವು ದೇಶಾದ್ಯಂತ ಇವಿ ಅಳವಡಿಕೆಯನ್ನು ಮಾಡಿಕೊಳ್ಳಲಿದ್ದೇವೆ ಮತ್ತು ನಮ್ಮ ಲಾಜಿಸ್ಟಿಕ್ಸ್ ಫ್ಲೀಟ್ ಅನ್ನು ಹಂತಹಂತವಾಗಿ ಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲಿದ್ದೇವೆ’’ ಎಂದು ತಿಳಿಸಿದರು.

ಮಂಗಳವಾರ ಸಂತೆ ಪ್ರಾರಂಭಕ್ಕೆ ರೈತರು, ವರ್ತಕರ ಆಗ್ರಹ

ಈ ಒಂದು ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಎಂಎಲ್ಎಲ್ ನ ಸಿಇಒ & ಎಂಡಿ ರಾಮಪ್ರವೀಣ್ ಸ್ವಾಮಿನಾಥನ್ ಅವರು, “ನಮ್ಮ ಆರ್ ಐಎಸ್ಇ ತತ್ತ್ವಶಾಸ್ತ್ರಕ್ಕೆ ಅನುಗುಣವಾಗಿ ಮಹೀಂದ್ರ ಲಾಜಿಸ್ಟಿಕ್ ಸುಸ್ಥಿರತೆಗೆ ಬದ್ಧವಾಗಿದೆ. ಇವಿ ಆಧಾರಿತ ಕಟ್ಟ ಕಡೆಯ ಮೈಲಿ ವಿತರಣಾ ಸೇವೆ ಸಲ್ಲಿಸಲು ಇಡಿಇಎಲ್ ಅನ್ನು ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ಗ್ರಾಹಕರಿಗೆ ಸುಸ್ಥಿರವಾದ, ವೆಚ್ಚ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ಕಟ್ಟಕಡೆ ಮೈಲಿ ವಿತರಣಾ ಪರಿಹಾರವನ್ನು ಒದಗಿಸುತ್ತದೆ. ದೊಡ್ಡ ದೊಡ್ಡ ಗ್ರಾಹಕರೊಂದಿಗೆ ನಮ್ಮ ಆಳವಾದ ಸಹಭಾಗಿತ್ವದ ಆಧಾರದ ಮೇಲೆ ನಮ್ಮ ಜಾಲವನ್ನು ವಿಸ್ತರಿಸುವತ್ತ ನಾವು ಗಮನಹರಿಸುತ್ತೇವೆ. ಫ್ಲಿಪ್ ಕಾರ್ಟ್ ನೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದದ ಬಗ್ಗೆ ಸಂತಸವೆನಿಸುತ್ತದೆ. ಈ ಸಹಭಾಗಿತ್ವವನ್ನು ದೀರ್ಘಾವಧಿವರೆಗೆ ನಾವು ಎದುರು ನೋಡುತ್ತೇವೆ’’ ಎಂದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

2 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

3 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

5 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

16 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

18 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

18 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420