ಬೆಂಗಳೂರು: ರಸಗೊಬ್ಬರ ಬೆಲೆ ಏರಿಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದೊಂದು ದೇಶ ವಿನಾಶದ ಕೃತ್ಯ ಎಂದು ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ದೇಶ ಇಂದು ಹಲವಾರು ಸಂಕಷ್ಟಗಳಗಳ ಬೆಂಕಿಯಲ್ಲಿ ಬೇಯುತ್ತಿದೆ. ರೈತಾಪಿ ವರ್ಗ ಪ್ರಕೃತಿ ವಿಕೋಪದಂತಹ ಅನಾಹುತಗಳನ್ನು ಎದುರಿಸಲಾಗದೆ ತೀವ್ರ ತೊಂದರೆಯಲ್ಲಿದ್ದಾರೆ. ಎಲ್ಲ ಸಂಕಷ್ಟಗಳ ಮಧ್ಯೆಯೂ ಕೂಡಾ ರೈತರು ಕಷ್ಟಪಟ್ಟು ದುಡಿದು ದೇಶವನ್ನು ಉಳಿಸಿದ್ದಾರೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಈ ಸಲ ಶೇ 6.4 ರಷ್ಟು ಕೃಷಿ ವಲಯದಲ್ಲಿ ಪ್ರಗತಿ ಕಂಡುಬಂದಿದ್ದು, ದೇಶದಲ್ಲಿ ಶೇ 3.4 ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ಪರಿಣಾಮ ದೇಶದ ಜಿಡಿಪಿಗೆ ಕೃಷಿ ವಲಯ ಶೇ 20 ರಷ್ಟು ಕೊಡುಗೆ ನೀಡಿದೆ.
ವಿಜೃಂಭಣೆಯಿಂದ ಅಂಬೇಡ್ಕರ ಜಯಂತಿ ಆಚರಿಸಿ: ಜಿಲ್ಲಾಧಿಕಾರಿ ಡಾ:ರಾಗಪ್ರೀಯ
ಈ ಸಂದರ್ಭದಲ್ಲಿ ರೈತ ವಿರೋಧಿ ಧೋರಣೆ ಅನುಸಿರುತ್ತಿರುವ ಮನೆಹಾಳ ಮೋದಿ ಸರ್ಕಾರ ರಸಗೊಬ್ಬರ ಬೆಲೆಯನ್ನು ಶೇ 60 ರಷ್ಟು ಹೆಚ್ಚಿನ ರೈತರ ಬಾಳಿಗೆ ಮುಳ್ಳಾಗ ಹೊರಟಿದೆ. ಹೊಸ ದರಪಟ್ಟಿಪ್ರಕಾರ ಡಿಎಪಿ ಗೊಬ್ಬರ ಬೆಲೆ ಏಪ್ರಿಲ್ 1 ರಿಂದ ಪ್ರತಿ ಕ್ವಿಂಟಾಲ್ ಗೆ ರೂ 1,400 ರಷ್ಟು ಹೆಚ್ಚಾಗಿದ್ದು ಇದೂವರೆಗೆ ರೂ 2,400 ಕ್ಕೆ ದೊರಕುತ್ತಿದ್ದ ಗೊಬ್ಬರ ಖರೀದಿಸಲು ರೈತರು ರೂ 3,800 ತೆರಬೇಕಾಗಿದೆ. ಅದೇ ರೀತಿ ಸಾರಜನಕ,ರಂಜಕ ಹಾಗೂ ಪೊಟ್ಯಾಷ್ ಗಳ ಬೆಲೆ ಪ್ರತಿ ಕ್ಷಿಂಟಾಲ್ ಗೆ ರೂ 1,250 ರಷ್ಟು ಹೆಚ್ಚಾಗಿದ್ದು, ರೂ 3,600 ಗೆ ಮುಟ್ಟಿದೆ.
ರಸಗೊಬ್ಬರ ಬೆಲೆ ದಿಢೀರ್ ಹೆಚ್ಚಾಗಲು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ ಎಂದು ಸರ್ಕಾರ ಸಬೂಬು ಹೇಳುತ್ತಿದೆ. ಇದು ಅಕ್ಷರಶಃ ಸುಳ್ಳು. ಈ ಬಾರಿಯ ಬಜೆಟ್ ನಲ್ಲಿ 54,417 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಕಡಿಮೆ ಮಾಡಿದೆ. ಕಳೆದ ವರ್ಷ 1,33,947 ಕೋಟಿ ರೂಪಾಯಿಗಳನ್ನು ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು.
ಕಲಬುರಗಿ: ಅತ್ಯುತ್ತಮ ಡೇಟಾ ಎಂಟ್ರಿ ಆಪರೇಟರ್ ಪ್ರಶಸ್ತಿ ಪ್ರದಾನ
ಈ ವರ್ಷ ಆ ಮೊತ್ತವನ್ನು 79,530 ಕೋಟಿಗೆ ಇಳಿಸಿ ಶೇ 40.62 ರಷ್ಟು ಕಡಿತಗೊಳಿಸಲಾಗಿದೆ. ಈ ಎಲ್ಲದರ ಪರಿಣಾಮ ರಸಗೊಬ್ಬರ ಬೆಲೆ ಏರಿಸಲು ಕಾರಣವಾಗಿದೆ ಎಂದು ಅವರು ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ದಮನಕಾರ ನೀತಿ ನೋಡಿದರೆ ಇದು ಯಾವ ದೃಷ್ಟಿಯಿಂದಲೂ ಬಡವರ, ರೈತರ, ಹಿಂದುಳಿದವರ, ದಲಿತರ, ಮಹಿಳೆಯರ ಹಾಗೂ ಮಕ್ಕಳ ಪರವಾದ ಸರ್ಕಾರ ಎನಿಸುತ್ತಿಲ್ಲ. ಮೋದಿ ಅವರ ಭಾಷಣಗಳು ಹೂರಣವಿಲ್ಲದ ಹೋಳಿಕೆ ಕಡುಬಿನಂತೆ. ಬರೀ ಸುಳ್ಳುಗಳಿಂದಲೇ ಜನರನ್ನು ಮರುಳು ಮಾಡುತ್ತಿದ್ದು ಮುಗ್ಧ ಜನರು ಕೆಲವೊಮ್ಮೆ ಅವರ ಮಾತನ್ನು ನಂಬಿ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಹೂವನ್ನೇ ನಿಜವಾದ ಹೂವು ಎಂದು ನಂಬುತ್ತಿದ್ದಾರೆ. ನನ್ನ ರಾಜಕೀಯ ಜೀವಮಾನದಲ್ಲೇ ಇಂತಹ ಜನದ್ರೋಹಿ ಸರ್ಕಾರವನ್ನು ನೋಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಲು ಎಸ್ಎಫ್ಐ ಆಗ್ರಹ
ಕೇಂದ್ರದ ವಿರುದ್ದ ಸೊಲ್ಲೆತ್ತದ ಬಿಜೆಪಿ ಸಂಸದರನ್ನು ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದರು ಗುಲಾಮಿ ಮನಸ್ಥಿತಿಯವರು ಎನ್ನದೇ ವಿಧಿಯಿಲ್ಲ. ಇವರು ರಾಜ್ಯಕಷ್ಟೆ ಅಲ್ಲದೇ ಭೂಮಿಗೆ ಭಾರ. ಈ ದುಷ್ಟ ಬಿಜೆಪಿ ಸರ್ಕಾರವನ್ನು ಮೊದಲು ಕಿತ್ತೆಸೆಯಬೇಕು ಇಲ್ಲದಿದ್ದರೆ ದೇಶದ ಜನರು ಎರಡೊತ್ತಿನ ಊಟಕ್ಕೂ ಪರದಾಡುವಂತೆ ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.
ದೇಶ ಭೀಕರ ಹತಾಶೆಯಲ್ಲಿದೆ. ದೇಶದ ಎಲ್ಲ ರಂಗಗಳೂ ಮಕಾಡೆ ಮಲಗಿವೆ. ದೇಶದ ಸರ್ಕಾರಿ ಖಜಾನೆ ಖಾಲಿಯಾಗುತ್ತಿದೆ. ಆದರೆ, ಅದಾನಿ, ಅಂಬಾನಿ ಮುಂತಾದವರ ಖಜಾನೆಗಳು ತುಂಬಿ ತುಳುಕುತ್ತಿವೆ. ಕೋವಿಡ್ ಬಿಕ್ಕಟ್ಟಿನಲ್ಲೂ ಅಂತವರ ಸಂಪತ್ತು 12 ಲಕ್ಷ ಕೋಟಿಗೂ ಹೆಚ್ಚು ವೃದ್ಧಿಯಾಗಿದೆ. ಅವರ ಮೇಲೆ ತೆರಿಗೆ ಹಾಕುವ ಬದಲು ಬಡವರ ಅನ್ನದ ತಟ್ಟೆಯ ಮೇಲೆ ಮೋದಿಯರು ಕಣ್ಣು ಹಾಕಿದ್ದಾರೆ.
ಉದ್ಯೋಗ ಖಾತ್ರಿ ಕೆಲಸಗಾರರ ಕನಿಷ್ಠ ದಿನಗೂಲಿ ನೀಡಬೇಕೆಂದು ಪ್ರತಿಭಟನೆ
ದೇಶದ ಪ್ರಜ್ಞಾವಂತರು, ಮಾಧ್ಯಮಗಳು ಇಂಥ ಹೊತ್ತಿನಲ್ಲೂ ಸುಮ್ಮನೆ ಕೂರಬಾರದು. ಹಾಗೆ ಕೂತರೆ ನಮ್ಮ ಮುಂದಿನ ತಲೆಮಾರುಗಳು ನಮ್ಮನ್ನು ಕ್ಷಮಿಸಲಾರವು. ಗ್ಯಾಸ್, ಪೆಟ್ರೋಲ್ ,ಡೀಸೆಲ್ ಎಲ್ಲವುಗಳ ಬೆಲೆ ಗಗನ ಮುಟ್ಟಿದೆ. ಇಂಥ ಸಂದರ್ಭದಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿಸಲಾಗಿದೆ. ಇದು ರೈತನ ಹೊಟ್ಟೆಯ ಮೇಲೆ ಹಾಕಿದ ಭೀಕರ ಬರೆ. ರಸಗೊಬ್ಬರಗಳ ಬೆಲೆಯೇರಿಕೆಯಂಥ ಜನದ್ರೋಹಿ ನಿರ್ಧಾರವನ್ನು ಈ ಕೂಡಲೇ ವಾಪಸ್ಸು ಹಿಂತೆಗೆದುಕೊಳ್ಳಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…