ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಜನತೆ ಹಾಗೂ ರಾಜಕಾರಣಿಗಳು ತುಂಬಾ ಭಿನ್ನ. ಇಲ್ಲಿನ ರಾಜಕಾರಣಿಗಳಾಗಲಿ, ಮತದಾರರಾಗಲಿ ಗುಂಡಾಗಿರಿಗೆ ಎಂದೂ ಆಸ್ಪದ ನೀಡಿದವರೆ ಅಲ್ಲ. ಗುಂಡಾಗಿರಿಗೆ ರಾಜಕಾರಣಿಗಳು ಸಪೋರ್ಟ್ ನೀಡುತ್ತಾರೆ ಎಂದು ಮನವರಿಗೆ ಆಗುತ್ತಲೇ ಮತದಾರ ತಕ್ಷಣ ಎಚ್ಚೆತ್ತುಕೊಂಡು ಆ ರಾಜಕಾರಣಿಯ ಕೋರೆ ಹಲ್ಲುಗಳನ್ನು ಮುರಿಯಬಲ್ಲ. ಕೋಡು ಕಿತ್ತಬಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹಿಂದೆ ಈ ಕ್ಷೇತ್ರದಿಂದ ಗೆದ್ದು ಬಂದ ಶಿವಶೇಖರಪ್ಪ ಪಾಟೀಲ ಶಿರವಾಳ ಬರೀ ಉಪದ್ಪ್ಯಾಪಿ ಮಾತಾಡಿದಕ್ಕೆ ದರ್ಶನಾಪುರ ಗೆದ್ದು ಬಂದರು. ಅದಕ್ಕೂ ಪೂರ್ವದಲ್ಲಿ ಬಾಪುಗೌಡ ದರ್ಶನಾಪುರ ಆರ್ಭಟಿಸಿದ್ದಕ್ಕೆ ನೇರ ಮನೆಗೆ ಕಳಿಸಿದರು. ಇದೆಲ್ಲ ಒತ್ತಟ್ಟಿಗಿರಲಿ ಶರಣಬಸಪ್ಪಗೌಡ ದರ್ಶನಾಪುರ ಅವರ ಕಾಕ ಬಸವರಾಜಪ್ಪಗೌಡ ಮತ್ತು ಪಟಾಲಂ ಭೀಮರಾಯನ ಗುಡಿಯಲ್ಲಿ ಕುಂತು ಕೆಮ್ಮಿದ್ದಕ್ಕೆ ಶರಣಬಸಪ್ಪಗೌಡ ತನ್ನ ಸ್ಥಾನವನ್ನು ಕಳಕೊಂಡು ಗುರುಪಾಟೀಲ ಆ ಸ್ಥಾನವನ್ನು ಅಲಂಕರಿಸಿದರು.
ಆದರೆ ಗುರುಪಾಟೀಲ ಒಳ್ಳೆಯವರೇನೋ ಹೌದು. ಆದರೆ ಅಪ್ಪನಂತೆ ಮಗ ಉದಾರಿ ಅಲ್ಲ ಎಂಬ ಹೇಳಿಕೆ ಕ್ಷೇತ್ರದ ತುಂಬಾ ಹಬ್ಬಿತು. ಆಗ ಕ್ಷೇತ್ರಕ್ಕೆ ಸಾಕಷ್ಟು ಕೆಲಸಗಳು ಆಗಲಿಲ್ಲ ಎಂಬ ಆಪಾದನೆಯ ಹಿನ್ನೆಯಲ್ಲಿ ಮತ್ತೆ ಶರಣಬಸಪ್ಪಗೌಡ ದರ್ಶನಾಪುರ ಗೆದ್ದು ಬಂದರು.
ಓದುಗರ ಗಮನ ಸೆಳೆಯುವ “ನಿಜ ಶರಣ’ ನಾಟಕ
ಶರಣಬಸಪ್ಪಗೌಡ ಗೆದ್ದು ಬರಲು ತುಂಬಾ ಮಹತ್ವದ ಕಾರಣವೆಂದರೆ ಯಾಳಗಿಯ ಅಮೀನರೆಡ್ಡಿ ಪಾಟೀಲ ಜೆಡಿಎಸ್ ದಿಂದ ಸ್ಪರ್ದಿಸಿದ್ದು. ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ದರ್ಶನಾಪುರ ಗೆದ್ದು ಬಂದರು ಎಂಬ ವಾದವಿದೆ ಇದು ಅರ್ಧ ಸತ್ಯ. ಆದರೆ ಇದೆಲ್ಲಕ್ಕಿಂತ ಮುಖ್ಯ ಗುರುಪಾಟೀಲ ಹಾಗೂ ಅಮೀನರೆಡ್ಡಿಯ ನಡುವಿನ ಒಪ್ಪಂದ ತುಂಬಾ ಪ್ರಮುಖ ಪಾತ್ರ ವಹಿಸಿತು ಎಂದು ಹೇಳುವವರಿದ್ದಾರೆ.
ಇದೇನೆ ಇರಲಿ, ಇದೀಗ ಅಮೀನರೆಡ್ಡಿ ಪಾಟೀಲ ಯಾಳಗಿ ಜೆಡಿಎಸ್ ತೊರೆದು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಗುರು ಪಾಟೀಲ ಅಮೀನರಡ್ಡಿಯೊಂದಿಗೆ ಸ್ಪಂದಿಸಿದರೆ ದರ್ಶನಾಪುರ ಅವರ ಮುಂದಿನ ಚುನಾವಣೆ ತುಂಬಾ ತುರುಸಿನಿಂದ ಕೂಡಲಿದೆ. ಹಾಗಂತ ದರ್ಶನಾಪುರ ಬಳಗವೇನು ಕೈಕಟ್ಟಿ ಕೂಡುವುದಿಲ್ಲ. ಅವರೂ ತಮ್ಮ ಇಡೀ ಕಸುವನ್ನು ಕ್ಷೇತ್ರದಲ್ಲಿ ಹಾಕಿ ಗೆಲ್ಲಲು ತಯಾರಿ ಮಾಡಿಕೊಳ್ಳುವವರೆ ಆಗಿದ್ದಾರೆ.
ಇತ್ತೀಚಿನ ರಾಜಕೀಯದಲ್ಲಿ ಹಣಬಲ ತುಂಬಾ ಮುಖ್ಯ. ಅದು ಅಮೀನರೆಡ್ಡಿ ಪಾಟೀಲಗೆ ಇದೆ. ಹೇಳಿಕೇಳಿ ಅಮೀನರೆಡ್ಡಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್. ಈಗಾಗಲೇ ದೇವೇಗೌಡರ ಸಹಾಯದಿಂದ ಸಾಕಷ್ಟು ಅದನ್ನು ಗಳಿಸಿ ಆಗಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.
ರಾಯಚೂರು ವಿವಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಸಿಎಂಗೆ ಎಸ್ಎಫ್ಐ ಮನವಿ
ಹಾಗಂತ ದರ್ಶನಾಪುರ ಅವರೇನು ಕಮ್ಮಿ ಇಲ್ಲ. ಅವರೂ ತಮ್ಮ ಶಕ್ತಿಯನ್ನು ಪಣಕ್ಕಿಟ್ಟು ಹೋರಾಡಬಲ್ಲರು. ಕ್ಷೇತ್ರದ ತುಂಬಾ ಅವರು ಮಾಡಿರುವ ಕೆಲಸಗಳು ಲೆಕ್ಕಕ್ಕೆ ಬಂದರೆ ಅಮೀನರೆಡ್ಡಿ ಬೇಕಾದಷ್ಟು ಲಾಗ ಹಾಕಿದರೂ ಅದು ಪರಿಣಾಮ ಉಂಟು ಮಾಡದು.
ಚುನಾವಣೆಗಳು ಇನ್ನೂ ಬಹುದೂರ ಇರುವಾಗ ಈ ಲೆಕ್ಕಾಚಾರಗಳೆಲ್ಲ ಏನಾದರೂ ಆಗುವ ಸಾಧ್ಯತೆ ಇದೆ. ಜೆಡಿ ಎಸ್ ಪಕ್ಷದಿಂದ ಮತ್ತೊಬ್ಬ ವ್ಯಕ್ತಿಯ ಸ್ಪರ್ಧೆ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಬಹುದು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…