ಕಲ್ಯಾಣ ಕರ್ನಾಟಕ ಪ್ರದೇಶದ ಕಲ್ಯಾಣಕ್ಕಾಗಿ ನಿರಂತರ ಹೋರಾಟ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ನಿರಂತರ ಮಲತಾಯಿ ಧೋರಣೆಯನ್ನು ಪ್ರತಿಭಟಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯು ಪಕ್ಷಾತೀತವಾಗಿ ಎಲ್ಲಾ ಏಳು ಜಿಲ್ಲೆಗಳ ಜನಪ್ರತಿನಿಧಿಗಳ, ರಾಜಕಿಯ ಪಕ್ಷಗಳ ಮುಖಂಡರ ಮತ್ತು ಆಯಾ ಕ್ಷೇತ್ರದ ಮುಖಂಡರ ಸಂಘ ಸಂಸ್ಥೆಗಳ ಮತ್ತು ಸಂಘಟನೆಗಳ ಮುಖಂಡರ ಸಂಯೋಗದೊಂದಿಗೆ ಪ್ರದೇಶಕ್ಕೆ ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ಮಾಡಲು ನಿರ್ಧರಿಸಲಾಯಿತು.

ಇಂದು ರವಿವಾರ ಹಿಂದಿ ಪ್ರಚಾರ ಸಭಾಂಗಣದಲ್ಲಿ, ರಾಯಚೂರು, ಬೀದರ ಬಳ್ಳಾರಿಯ ಪ್ರಮುಖ ಹೋರಾಟಗಾರರ ಮಹತ್ವದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು,  ಸಭೆಯಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಆಯಾ ಜಿಲ್ಲೆಯ ಪ್ರಮುಖ ಹೋರಾಟಗಾರರು ಭಾಗವಹಿಸಿದರು.

ಸಭೆಯಲ್ಲಿ ಮಾತನಾಡಿದ ರಾಯಚೂರಿನ ಹೋರಾಟಗಾರರಾದ ಡಾ. ರಜಾಕ ವಸ್ತಾದರವರು ಕಲ್ಯಾಣ ಕರ್ನಾಟಕ ಇತಿಹಾಸದಲ್ಲಿಯೇ ಪ್ರಸ್ತುತ ದಿನಗಳಲ್ಲಿ ಕಂಡರಿಯಲಾರದಷ್ಟು ಅನ್ಯಾಯ ನಿರ್ಲಕ್ಷತನ ಮಲತಾಯಿ ಧೋರಣೆ ನಡೆದಿದೆ. ಮಂತ್ರಿ ಮಂಡಲದಲ್ಲಿ ನಿರ್ಲಕ್ಷತನ, ೩೭೧ನೇ(ಜೆ) ಕಲಂ ಅನುಷ್ಠಾನಕ್ಕೆ ನಿರ್ಲಕ್ಷತನ, ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಮಂಜೂರಾದ ಯೋಜನೆಗಳು ನೆನೆಗುದಿಗೆ ಹಾಕುತ್ತಿರುವುದು ಮತ್ತು ಸ್ಥಳಾಂತರ ಮಾಡುತ್ತಿರುವುದು. ಒಟ್ಟಾರೆ ಕಲ್ಯಾಣ ಕರ್ನಾಟಕಕ್ಕೆ ಕೇವಲ ಕಲ್ಯಾಣ ನಾಮಕರಣ ಮಾಡಿ ಸರಕರ ನಮಗೆ ಘೋರ ಅನ್ಯಾಯ ಮಾಡುತ್ತಿದೆ. ಇದಕ್ಕೆ ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬ ಜನಪ್ರತಿನಿಧಿ ಯಾವ ಮುಲಾಜಿಲ್ಲದೆ ಪಕ್ಷಾತೀತವಾಗಿ ಖಂಡಿಸಿ ನಮ್ಮ ಒಕ್ಕಟ್ಟು ಪ್ರದರ್ಶನ ಮಾಡಬೇಕು ಎಂದು ಒತ್ತಾಯಿಸಿದರು.

ಅಮೀನರೆಡ್ಡಿ ಬಿಜೆಪಿ ಸೇರಿದ್ದರಿಂದ ಉಂಟಾಗುವ ಪರಿಣಾಮಗಳೇನು ?

ಮುಂದುವರೆದು ಅವರು ಸಮಿತಿ ಹಮ್ಮಿಕೊಂಡ ಇಂದಿನ ಸಭೆಯಲ್ಲಿ ಏಳು ಜಿಲೆಗಳಲ್ಲಿ ಒಂದೆರಡು ವಾರಗಳಲ್ಲಿ ಸಂಘಟನಾ ಕಾರ್ಯಗಳು, ಜನಪ್ರತಿನಿಧಿಗಳ ಕಡೆ ಅಭಿಯಾನ ಪೂರ್ಣಗೊಳಿಸಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್ ಮಾಡಿ ಸರಕಾರಕ್ಕೆ ಎಚ್ಚರಿಕೆ ನೀಡಲು ಏಳು ಜಿಲ್ಲೆಗಳಲ್ಲಿ ಕಾರ್ಯಾಚರಣೆ ರೂಪದಲ್ಲಿ ಸಂಘಟನೆ ಹೋರಾಟ, ಕಾರ್ಯಗಳು ಕಾಲಮಿತಿಯಲ್ಲಿ ನಡೆಸಲಾಗುವುದು ಎಂದರು.

ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು ಮಾತನಾಡಿ ಸಮಿತಿಯ ನಿರ್ಣಯದಂತೆ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಿಕೊಂಡು ಸಮಿತಿಯು ಹಮ್ಮಿಕೊಂಡ ಜನಪ್ರತಿನಿಧಿಗಳ ಕಡೆ ಅಭಿಯಾನ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ನಿರಂತರ ಹೋರಾಟಗಳ ರೂಪರೇಷೆಗಳನ್ನು ಹಮ್ಮಿಕೊಳ್ಳಲು ಸಭೆಯ ಅಧ್ಯಕ್ಷರಿಗೆ ಸರ್ವಾನುಮತದಿಂದ ಅಧಿಕಾರ ನೀಡಲಾಯಿತು.

ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಮಾತನಾಡಿ ಜನಪ್ರತಿನಿಧಿಗಳ ಅಭಿಯಾನದ ನಂತರ ಆದಷ್ಟು ಶೀಘ್ರ  ವಿನೂತನ ಮಾದರಿಯಲ್ಲಿ ಕಲಬುರಗಿ ಬಂದ್ ನಡೆಸಿ ಕಲ್ಯಾಣ ಕರ್ನಾಟಕ ಬಂದ್‌ಗೆ  ಸಿದ್ಧತೆ ಮಾಡಲಾಗುವುದು. ಈಗಾಗಲೇ ತಾವು ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನದಡಿ ನಮ್ಮ ಸಂಸದರು ಮತ್ತು ಶಾಸಕರುಗಳಿಗೆ ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಂಭೀರವಾಗಿ ಪರಿಗಣಿಸಲು ಒತ್ತಾಯಿಸಲಾಗುತ್ತಿದ್ದು, ಅವರು ಸಹ ಸಕಾತಾತ್ಮಕವಾಗಿ ಸ್ಪಂದಿಸುವ ಮೂಲಕ  ಸಮಿತಿ ಹಮ್ಮಿಕೊಂಡಿರುವ ಪಕ್ಷಾತೀತವಾದ ಹೋರಾಟಕ್ಕೆ ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸುವ ಬಗ್ಗೆ ಭರವಸೆ ನೀಡುತ್ತಿದ್ದಾರೆ.  ಒಟ್ಟಾರೆ ಅಭಿಯಾನಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವುದು ನಮ್ಮ ಹೋರಾಟಕ್ಕೆ ಬಲ ಬಂದಿದೆ ಎಂದು ವಿವರಿಸಿದರು. ಸಮಿತಿಯ ಸರ್ವಾನುಮತದ ನಿರ್ಣಯದಂತೆ ತಾವು ಒಂದೆರಡು ದಿನಗಳಲ್ಲಿ ಹೋರಾಟದ ಕಾರ್ಯಸೂಚಿ ದಿನಾಂಕ ಪ್ರಕಟಿಸುವದಾಗಿ ತಿಳಿಸಿದರು.

ಓದುಗರ ಗಮನ ಸೆಳೆಯುವ “ನಿಜ ಶರಣ’ ನಾಟಕ

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರುಗಳಾದ ಮನೀಷ್ ಜಾಜು ಅವರು ಸ್ವಾಗತವನ್ನು ಕೋರಿ, ಅಭಿಯಾನದ ಮತ್ತು ಜನತಾ ಮಹಾ ಅಧಿವೇಶನದ ಕುರಿತು ವಿವರವಾದ ಕಾರ್ಯಸೂಚಿಯನ್ನು ಮಂಡಿಸಿದರು. ಲಿಂಗರಾಜ ಸಿರಗಾಪೂರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಮೂರು ದಶಕಗೈಂದ ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೆ ಪಕ್ಷಾತೀತ ಧೋರಣೆಯಿಮ್ದ ಹೋರಾಟದ ನಾಯಕತ್ವ ವಹಿಸಿದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರ ಹೋರಾಟದ ರೂಪರೇಷೆಯಂತೆ ಎಲ್ಲಾ ಹೋರಾಟಗಾರರು ಬೆಂಬಲಿಸುವುದು ಅತಿ ಅವಶ್ಯವಾಗಿದೆ ಎಂದರು.

ಸಭೆಯಲ್ಲಿ  ಶಿವಲಿಂಗಪ್ಪ  ಬಂಡಕ್, ಭದ್ರಶೇಟ್ಟಿ, ಭವಾನಿಕುಮಾರ ವಳಕೇರಿ, ಶಾಂತಪ್ಪ ಕಾರಭಾಸಗಿ, ಜ್ಞಾನಮಿತ್ರ ಸ್ಯಾಮ್ಯುವೆಲ್, ಅಶೋಕ ಗುರುಜಿ, ಬಿ.ಬಿ. ನಾಯಕ, ಸಾಯಬಣ್ಣ ಹೋಳ್ಕರ, ಶಿವಾನಂದ ಕಾಂದೆ, ಗುರುಇಂಗಪ್ಪ ಟೆಂಗಳಿ, ಮಲ್ಲಿನಾಥ ಸಂಗಶೆಟ್ಟಿ, ರಮೇಶ ಚವ್ಹಾಣ, ಪ್ರಶಾಂತ ಶೀಲ್ಡ, ರಾಜು ಜೈನ್, ಬಿ.ಎಸ್. ಬರಗಾಲಿ, ಹುಸನಯ್ಯ ಗುತ್ತೇದಾರ, ಪ್ರಶಾತ ತಂಬೂರಿ, ಶಿವಕುಮಾರ ಬಿಬಲೂರ, ಸಂಧ್ಯಾರಾಜ ಸ್ಯಾಮ್ಯುವೆಲ್, ರಾಜೇಂದ್ರ ಕೆ. ಬಳ್ಳಾರಿ, ಸಿದ್ದಪ್ಪ ಮಂಟಗಿ, ವೀರೇಶ ಪುರಾಣಿಕ್, ವೈಜನಾಥ ಯಾದಗಿರ್, ಸಾಬಿರ ಅಲಿ, ಗೋಪಾಲರಾವ ಜಾಧವ, ಸುರೇಶ ನಾಮದೇವ, ದತ್ತು ಚವ್ಹಣ, ಮಿರಾಜೊದ್ದೀನ್, ಅಸ್ಲಂ ಚೌಂಗೆ, ಬಾಬುರಾವ ಗಂವ್ಹಾರ, ಅಮರ ಬಿದ್ದಾಪೂರ, ರೋಹನ ಕುಮಾರ ಬೀದರ, ಚಂದ್ರಶೇಖರ ಮೇಕಿನ್, ಸೇರಿದಂತೆ ನೂರಾರು ಜನ ಸಮಿತಿಯ ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಆಯಾ ಜಿಲ್ಲೆಯ ಹೋರಾಟಗಾರರು ಭಾಗವಹಿಸಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

4 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

4 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

6 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

6 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

6 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

7 hours ago