ಓದುಗರ ಗಮನ ಸೆಳೆಯುವ “ನಿಜ ಶರಣ’ ನಾಟಕ

0
132

ಕಲಬುರಗಿ : 12ನೇ ಶತಮಾನದ ವಚನ ಚಳುವಳಿಯ ಸಂದರ್ಭವನ್ನು ಆಧರಿಸಿ ತನ್ನ ಸಾಮಾಜಿಕ ಆಯಾಮಗಳಿಂದ ಕೂಡಿದ ಅಂಶಗಳಿಂದಾಗಿ ಡಾ. ಎಸ್.ಎಂ ಹಿರೇಮಠ್ ಅವರ” ನಿಜಶರಣ” ನಾಟಕ ಓದುಗರ ಗಮನ ಸೆಳೆಯುತ್ತದೆ ವಚನಸಾಹಿತ್ಯವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಬಸವಣ್ಣನ ಮುಂದಾಳತ್ವದಲ್ಲಿ ಆರಂಭವಾದ ಈ ಚಳುವಳಿಯಲ್ಲಿ ವಿವಿಧ ಕಾಯಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶರಣರು ತಮ್ಮದೇ ಆದ ವಚನಗಳನ್ನು ರಚಿಸುವುದರ ಮೂಲಕ ತಮ್ಮ ವಿಚಾರಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಿದರು ಎಂದು ಕರ್ನಾಟಕ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿವೇಕಾನಂದ ಸಜ್ಜನರವರು ಹೇಳಿದರು.

ನಗರದ ಸಿದ್ದಲಿಂಗೇಶ್ವರ ಬುಕ್ ಮಾಲ್ ನಲ್ಲಿ ನಡೆದ “ಅಟ್ಟದ ಮೇಲೆ ಬೆಟ್ಟದಂತ ವಿಚಾರ” ಕಾರ್ಯಕ್ರಮದಲ್ಲಿ ಡಾ. ಎಸ್.ಎಂ ಹಿರೇಮಠ್ ಅವರ ರಚಿಸಿರುವ ನಿಜಶರಣ ನಾಟಕ ಕುರಿತು ಮಾತನಾಡುತ್ತಾ ವಚನ ಚಳುವಳಿಯ ಕಾಲಘಟ್ಟದಲ್ಲಿ ನಡೆದ ಎಲ್ಲ ವೈಚಾರಿಕ ಕ್ರಿಯೆಗಳಿಂದಾಗಿ ವಚನ ಉತ್ತರ ಕಾಲಘಟ್ಟದ ಅನೇಕ ಕವಿಗಳು ವಿದ್ವಜ್ಜನರು ಸ್ಪೂರ್ತಿಗೊಂಡು ಹಲವು ಕೃತಿಗಳನ್ನು ರಚನೆ ಮಾಡಿರುವುದು ಕಂಡುಬರುತ್ತದೆ.ಹರಿಹರ ಭೀಮಕವಿಯ ಒಳಗೊಂಡಂತೆ ಹಲವು ಕವಿಗಳ ಕಥನಗಳು ಮಧ್ಯಕಾಲೀನ ಕನ್ನಡ ಸಾಹಿತ್ಯ ಕಾಲಘಟ್ಟದಲ್ಲಿ ರಚನೆಯಾದವು. ಈ ಬಗೆಯ ಕೃತಿಗಳ ಪ್ರಭಾವದಿಂದ ಆಧುನಿಕ ಸಂದರ್ಭದಲ್ಲಿ ಲಂಕೇಶರ ಸಂಕ್ರಾಂತಿ, ಚಂದ್ರಶೇಖರ್ ಕಂಬಾರ್ ಅವರ ಶಿವರಾತ್ರಿ,ಎಚ್. ಎಸ್ ಶಿವಪ್ರಕಾಶ್ರವರ ಮಹಾಚೈತ್ರ, ನಾಟಕಗಳು ವಚನಕಾರರ ಸ್ವರೂಪದಲ್ಲಿರುವ ಪ್ರಭುಶಂಕರ ಅವರ ಬೆರಗು ಕೃತಿಗಳು ವಚನ ಸಾಹಿತ್ಯವನ್ನು ಆಧರಿಸಿದೆ.

Contact Your\'s Advertisement; 9902492681

“ಬಾಬುಜೀ, ಮತ್ತು ಬಾಬಾಸಾಹೇಬ ರವರ ನೀಡಿದ ಭವ್ಯ ಸಂವಿಧಾನ ಉಳಿಸಿ: ಡಾ. ವಿಠ್ಠಲ್ ದೊಡ್ಡಮನಿ

ಹಾಗೂ ಇದೇ ನೆಲೆಯಲ್ಲಿ ಪ್ರಖರ ವಚನಕಾರ ಅಂಬಿಗರ ಚೌಡಯ್ಯನ ವಚನಗಳು ಹಾಗೂ ಜೀವನವನ್ನಾಧರಿಸಿ ಹಿರೇಮಠ್ ಅವರು ನಿಜಶರಣ ಎಂಬ ನಾಟಕವನ್ನು ರಚಿಸಿದ್ದಾರೆ ಪ್ರಸ್ತುತ ನಾಟಕದಲ್ಲಿ ಸಂವಾದದ ಸ್ವರೂಪದಲ್ಲಿ ಬಹುಮಟ್ಟಿಗೆ ಆತನ ವಚನಗಳೇ ಬಳಕೆಯಾಗಿದ್ದು ಕೃತಿಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂಬಿಗರ ಚೌಡಯ್ಯ ಓರ್ವ ಪ್ರಕಾರ ವಿಚಾರವಾದಿಯೂ ಸ್ವತಂತ್ರ ಚಿಂತಕರುರಾಗಿದ್ದು ಎಲ್ಲಾ ಸಂಗತಿಗಳು ಆತನ ವಚನಗಳಲ್ಲಿ ಪ್ರತಿಬಿಂಬಿತವಾಗಿವೆ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ ಮೊದಲಾದ ವಚನಕಾರರು ತಮ್ಮದಾಗಿಸಿಕೊಂಡರೆ ಅಂಬಿಗರ ಚೌಡಯ್ಯ ತನ್ನ ಹೆಸರನ್ನೇ ಅಂಕಿತವಾಗಿ ಕೊಂಡಿದ್ದು ಆತನ ಅನನ್ಯತೆಯನ್ನು ಪ್ರತಿಬಿಂಬಿಸುತ್ತದೆ ನಾಟಕದ ಆರಂಭದಲ್ಲಿಯೇ ಈ ವಿಷಯ ಓದುಗರ ಗಮನ ಸೆಳೆಯುತ್ತದೆ.ನಿಜಶರಣ ನಾಟಕವು ಸಾಹಿತಿಕ ಪಠ್ಯವಾಗಿ ಮಹತ್ವದಾಗಿರುವುದಲ್ಲದೆ, ರಂಗಪ್ರಯೋಗದ ದೃಷ್ಟಿಯಿಂದಲೂ ಮಹತ್ವದ್ದಾಗಿ ಕಾಣಿಸುತ್ತದೆ ನಾಟಕದುದ್ದಕ್ಕೂ ವಚನಕಾರರ ಸಂವಾದದ ಮೂಲಕ ಕಥಾನಕವನ್ನು ಕಟ್ಟಿಕೊಡುತ್ತಾ ಹೋಗಿದ್ದರೂ ರಂಗಪ್ರಯೋಗಕ್ಕಾನುಗುನವಾಗಿ ಹಿನ್ನೆಲೆಯ ಧ್ವನಿಯ ಮೂಲಕ ಮಹತ್ವದ ಸಂಗತಿಗಳನ್ನು ಪ್ರತಿಪಾದಿಸುವ ಅಂಶ ಕಂಡುಬರುತ್ತದೆ ಎಂದರು.

ಕೃತಿಯ ಲೇಖಕರಾದ ಎಸ್ಎಂ ಹಿರೇಮಠ್ ಅವರು ಮಾತನಾಡಿ ವಿಶ್ವದ ಸಾಂಸ್ಕೃತಿಕ ಚರಿತ್ರೆಯಲ್ಲಿ ನಂಬಲೇಬೇಕಾದ ಪುಟವೆಂದರೆ ಕನ್ನಡನಾಡಿನ 12ನೇ ಶತಮಾನದ ಬಸವಾದಿ ಶಿವಶರಣರ ಕ್ರಾಂತಿಯ ಮೂಲಕ ನಾಟಕದಲ್ಲಿ ಉಕ್ತವಾಗಿದೆ. ಅಂಬಿಗರ ಚೌಡಯ್ಯನ ವಚನಗಳುಇತರ ಶರಣರ ವಚನಗಳು ಒಂದಿಗೆ ಸಂವಾದ ನಡೆಸುವಾಗ ಆಯಾ ಸಂದರ್ಭಕ್ಕನುಗುಣವಾಗಿ ರಚಿತವಾಗಿದೆ ಎಂಬುದು ಪ್ರಸ್ತುತವಾದ ನಾಟಕದ ಮೂಲಕ ಸಾಧ್ಯವಾಗುತ್ತದೆ ಎಂದರು.

ಸಲಹಾ ಸಮಿತಿಯ ಸದಸ್ಯರಾದ ಹಿರಿಯ ಸಾಹಿತಿ ಡಾ. ವಸಂತ್ ಕುಷ್ಟಗಿ ಮಾತನಾಡುತ್ತಾ ನಾಟಕವು ವಿಭಿನ್ನ ರುಚಿಯಳ್ಳ ಎಲ್ಲಾ ಜನರಿಗೂ ತೃಪ್ತಿಯನ್ನು ಒದಗಿಸುವ ಅನನ್ಯ ಸಂತರ್ಪಣೆ ಎಂಬ ಅಭಿಪ್ರಾಯವು ಮನೋರಂಜನೆಯ ಸಾಮಗ್ರಿಯಾಗಿ ನಾಟಕವನ್ನು ಪರಿಗಣಿಸಿ ರಸ ಪ್ರತಿಪಾದನೆ ಅದರ ಪ್ರಮುಖ ಉದ್ದೇಶ ನೆಲೆಯಲ್ಲಿ ನಾಟಕದ ಮಹತ್ವವನ್ನು ಪ್ರತಿಪಾದಿಸುತ್ತದೆ. ಅಲ್ಲದೆ ಭರತನ ನಾಟ್ಯ ಶಾಸ್ತ್ರದಲ್ಲಿ ನಾಟಕವು ಮನರಂಜನೆ ಸಾಮಗ್ರಿ ಮಾತ್ರವಲ್ಲ ಅದು ಜೀವನ ಮೌಲ್ಯಗಳು ಹಾಗೂ ಉಪದೇಶಗಳನ್ನು ಒಳಗೊಂಡಿರುವಂತಹದ್ದು ಎಂದು ಉಕ್ತವಾಗಿರುವ ಮಾತು ನಾಟಕಗಳ ಸಾಮಾಜಿಕ ಆಯಾಮವನ್ನು ಪ್ರತಿಬಿಂಬಿಸುತ್ತದೆ ನುಡಿದರು.

ಹದಗೆಟ್ಟ ಬಾಲಕರ ವಸತಿ ನಿಲಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಕಾಶನ ಮಾಲೀಕರಾದ ಶ್ರೀ ಬಸವರಾಜ ಕೊನೇಕ್ ಮಾತನಾಡಿ ಈ ರೀತಿ ಕಾರ್ಯಕ್ರಮಗಳು ಪ್ರತಿ ತಿಂಗಳಿಗೆ ಎರಡು ಬಾರಿ ಹಮ್ಮಿಕೊಂಡಿದ್ದು ಇಲ್ಲಿ ಚರ್ಚೆಯಾದ ವಿಷಯವನ್ನು ಪುಸ್ತಕರೂಪದಲ್ಲಿ ದಾಖಲಿಸಿ ಸುವಂತಹ ಕೆಲಸ ಮಾಡಲಾಗುತ್ತಿದ್ದು,ಇದರ ಪ್ರಯೋಜನ ಎಲ್ಲರಿಗೂ ಆಗಲಿ ಎನ್ನುವ ಉದ್ದೇಶದಿಂದ ಇಂತಹ ಕೆಲಸಕ್ಕೆ ಕೈ ಹಾಕಿರುವುದು ತಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ಶಿವರಾಜ್ ಪಾಟೀಲ್, ಡಾ.ಚಿ. ಸಿ.ನಿಂಗಣ್ಣ,ಪ್ರೊ. ಎಸ್.ಎಲ್.ಪಾಟೀಲ್ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಡಾ. ಶರಣಮ್ಮ ಪಾಟೀಲ್, ಶ್ರೀ ಸುಬ್ಬರಾವ್ ಕುಲಕರ್ಣಿ, ಶ್ರೀ.ಪ.ಮನುಸಗರ್, ವೆಂಕಣ್ಣ ದೊಣ್ಣೆ ಗೌಡರ,ಬಿ.ಎಸ್ ಮಾಲಿಪಾಟೀಲ್, ಇತರರು ಇದ್ದರು. ಇದೇ ಸಂದರ್ಭದಲ್ಲಿ ನಿಧನರಾದ ಹಿರಿಯ ಸಾಹಿತಿ ಪ್ರೊ.ಹೇಮಂತ್ ಕೊಲ್ಲಾಪುರ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯೊಂದಿಗೆ ಶೃದ್ದಾoಜಲಿ ಸಲ್ಲಿಸಲಾಯಿತು. ಡಾ. ಚಿ. ಸಿ.ನಿಂಗಣ್ಣ ಸ್ವಾಗತಿಸಿದರುಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here