ಬಿಸಿ ಬಿಸಿ ಸುದ್ದಿ

ಸಗರನಾಡು ಗಾನಕೋಗಿಲೆ ಮೈಲಾರಪ್ಪ ಸಗರ ಇನ್ನಿಲ್ಲ

ಶಹಾಪುರ: ರೈತಪರ ಹೋರಾಟಗಾರ ಸಗರನಾಡು ಜಾನಪದ ಲೋಕದ ಗಾನ ಕೋಗಿಲೆ ಎಂದು ಪ್ರಸಿದ್ಧಿಯನ್ನು ಪಡೆದ ಮೈಲಾರಪ್ಪ ಸಗರ ಅಪಾರ ಬಂಧು ಬಳಗವನ್ನು ಅಗಲಿ ವಿಧಿವಶರಾಗಿದ್ದಾರೆ ಎಂದು ತಿಳಿಸಲು ತುಂಬಾ ನೋವೆನಿಸುತ್ತದೆ.

ಮೈಲಾರಪ್ಪ ಸಗರ ಮೂಲತಃ ಶಹಾಪುರ ತಾಲೂಕಿನ ಸಗರ ಗ್ರಾಮದ ಕಡುಬಡತನದ ಕುಟುಂಬದಲ್ಲಿ ಜನಿಸಿ ಕೇವಲ ಮೂರನೇ ತರಗತಿವರೆಗೆ ಅಭ್ಯಾಸ ಮಾಡಿ ಜಾನಪದ ಸಾಹಿತ್ಯದ ಜೊತೆಗೆ ರೈತ ಮುಖಂಡರ ಪ್ರೊ. ನಂಜುಂಡಸ್ವಾಮಿ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರೈತಪರ ಚಳುವಳಿಯಲ್ಲಿ ಧುಮುಕಿದರು.ಎಲ್ಲಿ ರೈತ ಚಳುವಳಿ ಇರುತ್ತದೋ ಅಲ್ಲಿ ಮೈಲಾರಪ್ಪ ಸಗರ ಅವರ ಹಾಡು ಝೇಂಕರಿಸುತ್ತಿತು.ಗ್ರಾಮೀಣ ಸೊಗಡಿನ ಜಾನಪದ ಕಲೆಯನ್ನು ತಮ್ಮಬದುಕನ್ನಾಗಿಸಿಕೊಂಡು ಇದ್ದರು.ಅಲ್ಲದೆ ರೈತ ಕ್ರಾಂತಿಕಾರಿ ಗೀತೆಗಳನ್ನು ಹಾಡುವುದರ ಮೂಲಕ ನಾಡಿನಾದ್ಯಂತ ಪ್ರಖ್ಯಾತಿ ಪಡೆದಿದ್ದರು.ಹಿರಿಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆಯವರ ಒಡನಾಡಿಯಾಗಿದ್ದು ಅವರೊಂದಿಗೆ ಬಸವತತ್ವದಪ್ರಚಾರದಲ್ಲಿ ಕೂಡ ಸಕ್ರಿಯವಾಗಿ ಭಾಗಿಯಾಗಿದ್ದರು.

ರಂಜಾನ್ ವ್ರತಾಚರಣೆ ಮಾಡುವ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ವಿಶೇಷ ಸುತ್ತೋಲೆ

ಅಂದಿನ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಂದ ೨೦೧೬ ನೇ ಸಾಲಿಗೆ ರಾಜ್ಯಮಟ್ಟದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ತಮ್ಮ ಮುಡಿಗೇರಿಸಿಕೊಂಡಿದ್ದರು ಯಾವುದೇ ಆಡಂಬರಗಳಿಲ್ಲದೆ ಸರಳ ಜೀವಿಗಳಾಗಿದ್ದರು.ಕಾಯಕ ನಿಷ್ಠೆ ಶ್ರದ್ಧೆಯಿಂದ ಬದುಕನ್ನು ಸವೆಸಿದವರು. ಮಕ್ಕಳಿಗೆ ನೀತಿ ಪಾಠ ಹೇಳಿ ಕೊಡೋದ್ರಲ್ಲಿ ಎತ್ತಿದ ಕೈ.ನಾಯಕ ಜನಾಂಗದ ವಿಧಿವಿಧಾನಗಳೊಂದಿಗೆ ಇಂದು ಸಾಯಂಕಾಲ ಸಗರ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಶವಸಂಸ್ಕಾರ ನೆರವೇರುವುದು.

ಅಂದಿನ ಗೋಕಾಕ್ ಚಳವಳಿಯ ಮುಂದಾಳತ್ವವನ್ನು ವಹಿಸಿಕೊಂಡರುವ ಡಾ. ರಾಜಕುಮಾರ್ ಅವರು ಶಹಾಪುರ ನಗರಕ್ಕೆ ಬಂದಾಗ ವೇದಿಕೆಯ ಮೇಲೆ ಕ್ರಾಂತಿಕಾರಿ ಗೀತೆಗಳನ್ನು ಹಾಡಿ ಅವರ ಮನಸ್ಸು ಗೆದ್ದಿದ್ದರು.ಇವರ ಹಲವಾರು ಹಾಡುಗಳನ್ನು ಧ್ವನಿಮುದ್ರಣಗೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ.ಅಲ್ಲದೆ ಕರ್ನಾಟಕ ಸರ್ಕಾರದ ವತಿಯಿಂದ ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೈಲಾರಪ್ಪ ಸಗರವರ ಇತ್ತೀಚೆಗೆ ಸಾಕ್ಷ್ಯಚಿತ್ರವು ಮಾಡಲಾಗಿದೆ.ಮೈಲಾರಪ್ಪ ಸಗರ ೫ ಗಂಡುಮಕ್ಕಳು ೧ ಹೆಣ್ಣುಮಕ್ಕಳು ೨೦ ಹೆಚ್ಚು ಮೊಮ್ಮಕ್ಕಳಿಂದ ಅಗಲಿದ್ದಾರೆ. ಐವರಲ್ಲಿ ಒಬ್ಬ ಮಗನು ದೇಶದ ಗಡಿ ಕಾಯಲು ಯೋಧನಾಗಿರುವುದು ಹೆಮ್ಮೆಯ ವಿಷಯ ಎಂದು ಆಗಾಗ ಮೈಲಾರಪ್ಪನವರು ಹೇಳುತ್ತಿದ್ದರು ನಾನು ಜೈ ಕಿಸಾನ್ ನನ್ನ ಮಗ ಜೈ ಜವಾನ್ ಎಂಬ ಘೋಷ ವಾಕ್ಯ ಅವರದ್ದಾಗಿತ್ತು.

ಮೋಹನ್ ಕುಮಾರ್ ದಾನಪ್ಪಗೆ ರೈಸಿಂಗ್ ಸ್ಟಾರ್ ಪ್ರಶಸ್ತಿ

ಸಂತಾಪ : ಶಾಸಕ ಶರಣಬಸಪ್ಪಗೌಡ ದರ್ಶನಾಪುರ,ಚಂದ್ರಶೇಖರ ಸಾಹು ಆರಬೋಳ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಿದ್ದಲಿಂಗಣ್ಣ ಆನೇಗುಂದಿ,ಸಾಹಿತಿಗಳಾದ ಸಿದ್ಧರಾಮ ಹೊನಕಲ್,ಶಿವಣ್ಣ ಇಜೇರಿ,ಮಲ್ಲಿಕಾರ್ಜುನ ಸತ್ಯಂಪೇಟೆ ವಿಶ್ವರಾಧ್ಯ ಸತ್ಯಂಪೇಟೆ,ಲಿಂಗಣ್ಣ ಪಡಶೆಟ್ಟಿ,ಬಸನಗೌಡ ಮಾಲಿ ಪಾಟೀಲ್,ಶರಣಪ್ಪ ಸಲದಾಪುರ,ಬಸವರಾಜ ಸಿನ್ನೂರ, ಪಂಚಾಕ್ಷರಿ ಹಿರೇಮಠ,ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

50 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

53 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

56 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago