ವಾಡಿ: ಸಮಾಜದ ಕೆಲ ವರ್ಗಗಳ ಮೇಲೆ ಶಾಸ್ತ್ರಗಳು ಹೇರಲ್ಪಟ್ಟ ನಿರ್ಭಂಧನೆಗಲಳು ಭಾರತೀಯ ಸಮಾಜದ ಬದುಕನ್ನೇ ನುಂಗಿ ಹಾಕಿತ್ತು. ಸಾವಿರಾರು ವರ್ಷಗಳಿಂದ ಜಾರಿಯಲ್ಲಿದ್ದ ಈ ಅಮಾನವೀಯ ಕಟ್ಟಳೆಗಳನ್ನು ಪ್ರಶ್ನಿಸಲಾಗದೆ ಗುಲಾಮಗಿರಿಯನ್ನು ಸಹಿಸಿಕೊಂಡ ಜನಾಂಗಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಅರಿವು ನೀಡಿ ಮೈ ಕೊಡವಿ ಎದ್ದುನಿಲ್ಲುವಂತೆ ಮಾಡಿದ್ದು ಬಹುದೊಡ್ಡ ಸಾಮಾಜಿಕ ಕ್ರಾಂತಿ ಎಂದು ಯುವ ಸಾಹಿತಿ ಕಾಶೀನಾಥ್ ಹಿಂದಿನ್ಕೇರಿ ಅಭಿಪ್ರಾಯಪಟ್ಟರು.
ಸಮೀಪದ ಇಂಗಳಗಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಅವರ 130 ನೇ ಜನ್ಮದಿನಾಚರಣೆ ಉದ್ದೇಶಿಸಿ ಅವರು ಮಾತನಾಡುತ್ತ, ಅಂಬೇಡ್ಕರ್ ಈ ದೇಶ ಕಂಡ ಮಹಾನ್ ದಾರ್ಶನಿಕರು. ಅವರ ಸಂಪೂರ್ಣ ವ್ಯಕ್ತಿತ್ವ ಅರಿಯದೇ ಕೇವಲ ಜನಾಂಗವೊಂದರ ನಾಯಕ ಎನ್ನುವಂತೆ ಬಿಂಬಿಸುತ್ತಿರುವುದು ವಿಷಾದಕರ ಎಂದರು.
ಇತ್ತೀಚೆಗೆ ಪಿಹೆಚ್ ಡಿ ಪದವಿ ಪಡೆದ ಗ್ರಾಮದ ಮೊದಲ ಡಾಕ್ಟರೇಟ್ ಪದವೀಧರ ಸಾಯಬಣ್ಣ ಗುಡುಬಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗುಡುಬಾ ಶಿಕ್ಷಣದ ಮಹತ್ವವೇ ಗೊತ್ತಿಲ್ಲದ ನನಗೆ ಮಾರ್ಗದರ್ಶನ ಮಾಡಿ ಶಾಲೆಯಿಂದ ವಿಶ್ವವಿದ್ಯಾಲಯದ ವರೆಗೆ ತಲುಪುವಂತೆ ಮಾಡಿದ ಶಿಕ್ಷಣ ಪ್ರೇಮಿ ಸುಭಾಶ್ಚಂದ್ರ ಯಾಮೇರ್ ಅವರ ಸಾಮಾಜಿಕ ಕಳಕಳಿ ಮಾದರಿಯಾಗಿದೆ. ಅಂಬೇಡ್ಕರ್ ಅವರ ಅರಿವಿನ ಬೆಳಕಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಸುಭಾಶ್ಚಂದ್ರ ಯಾಮೇರ್ ಮಾತನಾಡಿ ಜಡಗೊಂಡಿದ್ದ ಭಾರತೀಯ ಸಮಾಜಕ್ಕೆ ಚೈತನ್ಯ ತುಂಬಿರುವ ಅಂಬೇಡ್ಕರ್ ಆಧುನಿಕ ಭಾರತದ ಶಿಲ್ಪಿಗಳಾಗಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಕಾಶೀನಾಥ್ ಚನ್ನಗುಂಡ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಸದಸ್ಯರಾದ ಅಣ್ಣಾರಾವ ಪಾಟೀಲ, ಶರಣು ರಾವೂರ್, ಮಲ್ಲು ಸಾಹುಕಾರ್ ವಡಗಾಂವ್, ಮಲ್ಲು ಸೀಮಿ, ಮಲ್ಲಪ್ಪ ನಾಟೇಕರ್, ವೆಂಕಟಗಿರಿ ಕಟ್ಟಿಮನಿ, ದಾದಾರಾವ್ ಬೋವಿ, ಕರ್ನಾಟಕ ಪ್ರಾಂತ ರೈತ ಸಂಘದ ಶೇಕಮ್ಮ ಕುರಿ, ಗ್ರಾಮಾಭಿವೃದ್ಧಿ ಅಧಿಕಾರಿ ರೇಷ್ಮಾ ಕೊತ್ವಾಲ್, ಮಾಳಿಂಗರಾಯ ಹಿಂದಿನಕೇರಿ, ನಬಿ ಪಠಾಣ್, ಶ್ರೀಶೈಲ ನಾಟೇಕರ್, ಗ್ರಾಮ ಪಂಚಾಯಿತಿ ಸಿಬ್ಬಂದಿ. ಹಾಗೂ ನರೇಗ ಕಾಯಕ ಬಂಧುಗಳು ಮತ್ತಿತರರು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಶೈಲ ಕೊಟ್ಟರಕಿ ನಿರೂಪಿಸಿದರು. ಸದಸ್ಯ ಖದೀರ್ ಪಟೇಲ್ ಸ್ವಾಗತಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…