ಕಲಬುರಗಿ : ಪ್ರಸ್ತುತ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸಾರಿಗೆ ಮುಷ್ಕರ ಆರಂಭವಾಗಿ ಇಂದಿಗೆ ಹನ್ನೊಂದು ದಿನಗಳು ಗತಿಸಿದರೂ ಸಹ ಸರಕಾರ ಈ ಮುಷ್ಕರಕ್ಕೆ ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರ ಅನುಕೂಲಕ್ಕೆ ಮುಷ್ಕರ ನಿರತ ನೌಕರರ ಬಗ್ಗೆ ಉದಾರ ನೀತಿಯನ್ನು ಅನುಸರಿಸಿ ಅವರ ಜೊತೆ ಮಾತುಕತೆಯ ಮೂಲಕ ಸಮಸ್ಯೆಗೆ ಅಂತ್ಯ ಹಾಡಿ ರಾಜ್ಯಸ ಜನತೆಗೆ ಸಾರಿಗೆ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ನಾಯಕತ್ವ ವಹಿಸಿರುವ ಚಂದ್ರಶೇಖರ ಕೋಡಿಹಳ್ಳಿಯವರು ಸಹ ನೌಕರರ ಹಿತದೃಷ್ಟಿಯಿಂದ ಪ್ರಸ್ತುತ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಪ್ರತಿಷ್ಠೆಯನ್ನು ಬದಿಗೊತ್ತಿ ಸರಕಾರದ ಜೊತೆ ಮಾತುಕತೆಗೆ ಮುಂದಾಗಿ ನೌಕರರ ಬೇಡಿಕೆಗಳನ್ನು ನ್ಯಾಯಯುತವಾಗಿ ಈಡೇರಿಸಿಕೊಡುವ ನಿಟ್ಟಿನಲ್ಲಿ ಆರೋಗ್ಯಕರವಾದ ವಾತಾವರಣ ನಿರ್ಮಿಸಲು ಬದ್ಧತೆ ಪ್ರದರ್ಶಿಸಬೇಕು.
ಬಹುಜನ ಸಮಾಜ ಪಕ್ಷದಿಂದ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕ
ಸಾರಿಗೆ ನೌಕರರು ಕರ್ನಾಟಕ ರಾಜ್ಯದ ಕೋಟ್ಯಾಂತರ ಜನರ ದಿನವಹಿ ಆಪತ್ಕಾಲಿಕ ಸೇವೆಗೆ ಪೂರಕವಾಗಿರುವುದರಿಂದ ಸಾರ್ವಜನಿಕರ ನೋವಿಗೆ ಕೆಂಗಣ್ಣಾಗದೆ ಪ್ರಸ್ತುತ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನೌಕರರು ಪ್ರತಿಷ್ಠೆ ಮತ್ತು ಜಿದ್ದು ಬಿಟ್ಟು ಸರಕಾರದ ಎದುರು ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಆರೋಗ್ಯಕರವಾದ ಮಾತುಕತೆಯ ಮುಖಾಂತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳಬೇಕೆಂದು ಒತ್ತಾಯಿಸಿದ್ದಾರೆ.
ಸರಕಾರ ಸಾರಿಗೆ ನೌಕರರು ಹಮ್ಮಿಕೊಂಡ ಮುಷ್ಕರದ ಸಂದರ್ಭದಲ್ಲಿ ನೌಕರರ ಮೇಲೆ ಕೈಗೊಂಡ ಎಲ್ಲಾ ಕ್ರಮಗಳನ್ನು ಹಿಂದಕ್ಕೆ ಪಡೆದು ಉದಾರ ಧೋರಣೆಯಂತೆ ಮುಷ್ಕರನಿರತ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸಿ, ಜನಸಾಮಾನ್ಯರ ಬದುಕಿಗೆ ನ್ಯಾಯ ಒದಗಿಸಬೇಕು. ನೌಕರರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವುದು ಸಂವಿಧಾನಬದ್ಧ ಜನ್ಮ ಸಿದ್ಧ ಹಕ್ಕಾಗಿದೆ. ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಪ್ರಸ್ತುತ ಗಂಭೀರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಉದಾರ ನೀತಿ ಅನುಸರಿಸಬೇಕು, ನೌಕರರೂ ಸಹ ಪ್ರತಿಷ್ಠೆಯನ್ನು ಕೈಬಿಟ್ಟು ನಾಡಿನ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಸಾರಿಗೆ ಮುಷ್ಕರಕ್ಕೆ ಅಂತ್ಯ ಹಾಡಿ ಜನಸಾಮಾನ್ಯರ ನೋವಿಗೆ ಸ್ಪಂದಿಸಲು ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…