ಶಹಾಬಾದ : ನವ ಪೀಳಿಗೆ ಯಶಸ್ವಿ ಮತ್ತು ಪರಿಪೂರ್ಣ ಬದುಕಿಗಾಗಿ ಭಗವಾನ್ ರಾಮನ ಜೀವನ ಮತ್ತು ಸದ್ಗುಣಗಳಿಂದ ಪಾಠ ಕಲಿತು, ಶ್ರೀ ರಾಮ ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.
ಅವರು ಬುಧವಾರ ಭಂಕೂರ ಗ್ರಾಮದ ವೃತ್ತದಲ್ಲಿ ಗ್ರಾಮದ ಯುವಕರು ಆಯೋಜಿಸಲಾದ ರಾಮನವಮಿ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಧರ್ಮದಲ್ಲಿ ರಾಮನಿಗೆ ಮಹತ್ವದ ಸ್ಥಾನವಿದ್ದು ಅವರನ್ನು ಮರ್ಯಾದಾ ಪುರು?ತ್ತಮ ಎಂದು ಕರೆಯಲಾಗಿದೆ. ವಿ?ವಿನ ಹತ್ತನೆಯ ಅವತಾರವಾಗಿ ರಾಮನನ್ನು ಕೊಂಡಾಡುತ್ತಾರೆ. ರಾಮಾಯಣದ ಕಥೆಯನ್ನು ಆಲಿಸಿಕೊಂಡು ಬೆಳೆದು ಬಂದವರು ನಾವಾಗಿರುವುದರಿಂದ ಜೀವನದಲ್ಲಿನ ಮಹತ್ವದ ಅಂಶಗಳನ್ನು ನಾವು ರಾಮಾಯಣದಿಂದ ಅರಿತಿದ್ದೇವೆ. ರಾಮನನ್ನು ಮರ್ಯಾದಾ ಪುರು?ತ್ತಮ ಎಂದು ಕರೆಯಲಾಗುತ್ತದೆ.ರಾಮನ ಸದ್ಗುಣಗಳನ್ನು ಪಾಲಿಸುವ ಮೂಲಕ ನವ ಸಮಾಜದ ನಿರ್ಮಾಣಕ್ಕೆಮುಂದಾಗೋಣ ಎಂದರು.
ಪ್ರತಿದಿನ ನೈಟ್ ಕಫ್ರ್ಯೂ, ಶನಿವಾರ ಮತ್ತು ರವಿವಾರ ಸಂಪೂರ್ಣ ಬಂದ್
ಪ್ರಕಾಶ ಪಾಟೀಲ ಮಾತನಾಡಿ, ರಾಮನು ಒಬ್ಬ ಪ್ರಜಾ ಪಾಲಕನಾಗಿದ್ದ. ಅವರ ರಾಜ್ಯಾಭಾರದಲ್ಲಿ ಕಳ್ಳತನ, ದರೋಡೆ, ಹಸಿವೆಯಿಂದ ಜನ ಬಳಲುತ್ತಿರಲಿಲ್ಲ. ತನ್ನ ವನವಾಸದ ಬಳಿಕ ಅಯೋಧ್ಯೆಗೆ ಮರಳಿ ರಾಜ್ಯಾಭಾರವನ್ನು ನಡೆಸಿದ ರಾಮನ ನಿರ್ಧಾರ ಮತ್ತು ಆಡಳಿತ ಪಾರದರ್ಶಕವಾಗಿತ್ತು. ಪ್ರಜೆಗಳ ಪಾಲನೆಯನ್ನು ಅತ್ಯಂತ ಗೌರವದಿಂದ ಮಾಡುತ್ತಿದ್ದ ರಾಮನು ಒಬ್ಬ ಪರಿಪೂರ್ಣ ಮನು?ನಾಗಿದ್ದಾರೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ಮಾತನಾಡಿ, ಧರ್ಮ ಮಾರ್ಗದಲ್ಲಿ ಪರಿಪಾಲನೆಗೆ ಹೆಸರುವಾಸಿಯಾದವರು ರಾಮನು. ರಾಮನ ಆಡಳಿತದ ಸಮಯದಲ್ಲಿ ರಾಜ್ಯದಲ್ಲಿದ್ದ ಜನರು ಸುಖಿಗಳಾಗಿದ್ದರು. ಎಲ್ಲಿಯೂ ಕಳ್ಳತನ, ಮೋಸ, ವಂಚನೆ, ಹಸಿವಿನ ಚಿಂತೆ ಇರಲಿಲ್ಲ. ಎಲ್ಲಾ ಪ್ರಜೆಗಳು ಸುಖದಿಂದ ಬಾಳುತ್ತಿದ್ದರು. ರಾಮನ ಉದಾತ್ತ ಆದರ್ಶಗಳನ್ನು ಅವರು ನಂಬಿದ್ದರು. ಅಂತೂ ರಾಮ ರಾಜ್ಯ ಸುಖೀ ರಾಜ್ಯ ಎಂದು ಕರೆಯಬಹುದು ಎಂದು ಹೇಳಿದರು.
ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ: 4ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ
ಗ್ರಾಮದ ಮುಖಂಡರಾದ ಶಶಿಕಾಂತ ಪಾಟೀಲ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಯುವಕರಾದ ಸಂತೋಷ ಕಲಶೆಟ್ಟಿ, ಈರಪ್ಪ ಹೂಗಾರ, ವಿರೇಶ ಸ್ವಾಮಿ,ಸಂಗಮೇಶ ಚಿತ್ತಾಪೂರ, ಪವನ ಸಿರಗೊಂಡ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…