ಪ್ರತಿದಿನ ನೈಟ್ ಕಫ್ರ್ಯೂ, ಶನಿವಾರ ಮತ್ತು ರವಿವಾರ ಸಂಪೂರ್ಣ ಬಂದ್

0
180

ಶಹಾಬಾದ: ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಏಪ್ರಿಲ್ 21ರ ರಾತ್ರಿ 9 ಗಂಟೆಯಿಂದ ಮೇ 4ರ ಮುಂಜಾನೆ 6 ಗಂಟೆಯವರೆಗೂ ನಗರದಲ್ಲಿ ಕಠಿಣ ಕಫ್ರ್ಯೂ ವಿಧಿಸಿ ಆದೇಶ ಹೊರಡಿಸಲಾಗಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಯಾರೂ ಓಡಾಡುವಂತಿಲ್ಲ. ಓಡಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದರು.

ಅವರು ಬುಧವಾರ ನಗರಸಭೆಯ ಸಭಾಂಗಣದಲ್ಲಿ ಕೋವಿಡ್ ನಿಮಿತ್ತ ಕಂದಾಯ ಹಾಗೂ ನಗರಸಭೆಯಿಂದ ಆಯೋಜಿಸಲಾದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ: 4ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಕಠಿಣ ನೈಟ್ ಕಫ್ರ್ಯೂ ಇರಲಿದ್ದು, ಶನಿವಾರ ಮತ್ತು ಭಾನುವಾರ ಇಡೀ ದಿನ ಕಫ್ರ್ಯೂ ಇರಲಿದೆ.

ಈ ಸಮಯದಲ್ಲಿ ಮೆಡಿಕಲ್, ಆಸ್ಪತ್ರೆ ಹಾಗೂ ಹಾಲು ಮಾರಾಟಕ್ಕೆ ಅವಕಾಶವಿದ್ದು, ಉಳಿದ ಎಲ್ಲಾ ಅಂಗಡಿಗಳು ಬಂದ್ ಇರಲಿವೆ. ನಗರದ 5 ಪ್ರದೇಶಗಳಲ್ಲಿ ಕೋವಿಡ್ ಮಾಹಿತಿ ಕೇಂದ್ರಗಳನ್ನು ನೇಮಿಸಲಾಗಿದೆ.ಸಾರ್ವಜನಿಕರು ಯಾವುದೇ ಸಮಸ್ಯೆಯಿದ್ದರೇ ಅಲ್ಲಿನ ಸಿಬ್ಬಂದಿಗಳನ್ನು ತಿಳಿಸಿ ಸಮಸ್ಯೆ ಬಗೆಹರಿಸಕೊಳ್ಳಬಹುದೆಂದು ತಿಳಿಸಿದರಲ್ಲದೇ, ಸೋಮವಾರದಿಂದ ಶುಕ್ರವಾದವರೆಗೆ ದಿನಸಿ ಅಂಗಡಿಗಳು, ಹಣ್ಣು ತರಕಾರಿ, ಹಾಲಿನ ಡೇರಿ, ಮೀನು, ಮಾಂಸದ ಅಂಗಡಿ ತೆರೆಯಲು ಅನುಮತಿಯಿದೆ.ಆದರೆ ಶನಿವಾರ ಮತ್ತು ರವಿವಾರ ಬಂದ್ ಇರಲಿವೆ.

ಕೊರೋನ್ ಸೋಂಕು ತಡೆಗೆ ಜಾಗೃತಿ ಜಾಥಾ

ಶಾಪಿಂಗ್ ಮಾಲ್, ಸಿನಿಮಾ ಹಾಲ್ ಗಳು, ಜಿಮ್, ಯೋಗಾ ಸೆಂಟರ್, ಸ್ವಿಮ್ಮಿಂಗ್ ಪೂಲ್, ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಸ್ಪಾ ಬಂದ್. ಬಾರ್ , ರೆಸ್ಟೋರೆಂಟ್ ನಲ್ಲಿ ಮದ್ಯಸೇವನೆಗೆ ಅವಕಾಶವಿಲ್ಲ. ಸಾರ್ವಜನಿಕ, ರಾಜಕೀಯ ಸೇರಿ ಎಲ್ಲಾ ಕಾರ್ಯಕ್ರಮಗಳಿಗೆ ನಿಬರ್ಂಧ ಹೇರಲಾಗಿದೆ.ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಅನುಮತಿ. ಬ್ಯಾಂಕ್, ಇನ್ಶೂರೆನ್ಸ್ ಸಂಸ್ಥೆ, ಮಾಧ್ಯಮಕ್ಕೆ ಅನುಮತಿ. ದೇವಸ್ಥಾನ, ಚರ್ಚ್, ಮಸೀದಿ ಸೇರಿ ಎಲ್ಲಾ ಧಾರ್ಮಿಕ ಸ್ಥಳಗಳು ಬಂದ್. ಮದುವೆಗಳಿಗೆ 50 ಜನ.ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಅವಕಾಶ ನೀಡಲಾಗಿದೆ.ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ತಪ್ಪಿ ನಡೆದರೆಏ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಲಬುರಗಿ: ವೆಂಟಿಲೇಟರ್, ಬೆಡ್ ಸಿಗದೆ ಕೊರೊನಾ ರೋಗಿ ಸಾವು

ನಗರಸಭೆಯ ಪೌರಾಯುಕ್ತ ಡಾ.ಕೆ. ಗುರಲಿಂಗಪ್ಪ, ವ್ಯವಸ್ಥಾಪಕ ಶಂಕರ ಇಂಜನಗೇರಿ, ಪಿಎಸ್‍ಐ ಯಲ್ಲಮ್ಮ,  ಬಿಆರ್‍ಸಿ ಮಲ್ಲಿಕಾರ್ಜುನ ಸೇಡಂ, ಕಂದಾಯ ಅಧಿಕಾರಿ ಸುನೀಲಕುಮಾರ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here