ಬಿಸಿ ಬಿಸಿ ಸುದ್ದಿ

ಆಳಂದದಲ್ಲಿ ಕೊರೋನಾ ರಣಕೇಕೆ- ಬಿಗಿ ಕ್ರಮಗಳೆಲ್ಲಿ?: ಹಣಮಂತ ಭೂಸನೂರ್

ಕಲಬುರಗಿ: ಕೊರೋನಾ ಸೋಂಕು ಇಡೀ ಜಿಲ್ಲೆಯನ್ನೇ ವ್ಯಾಪಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವ ಗಡಿ ತಾಲೂಕು ಆಳಂದದಲ್ಲಿ ಸೋಂಕಿನ ಆತಂಕ ಹೆಚ್ಚಾಗಿದ್ದರೂ ಸಹ ಆಡಳಿತ ಅಗತ್ಯ ತ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ, ಇದರಿಂದ ಸೋಂಕು- ಸಾವುನೋವು ಹಾಗೇ ಮುಂದುವರಿದಿದ್ದು ತಾಲೂಕಿನಲ್ಲಿ ಜನತೆ ಕಂಗಾಲಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಈಗಾಗಲೇ ಗಡಿಗ್ರಾಮ ಆಳಂಗಾ ಸೀಲ್‍ಡೌನ್ ಆಗಿದೆ ನೂರಾರು ಸೋಂಕಿತರು ಒಂದೇ ಊರಲ್ಲಿ ಪತ್ತೆಯಾಗಿದ್ದಾರೆ, 5 ಮಂದಿ ಸಾವನ್ನಪ್ಪಿದ್ದಾರೆ, ಇನ್ನು ಇಡೀ ತಾಲೂಕಿನಲ್ಲಿ 300 ರಷ್ಟು ಸೋಂಕಿನ ಸಕ್ರೀಯ ಪ್ರಕರಣ ಕಂಡು ಬಂದಿವೆ. ಇಷ್ಟಿದ್ದರೂ ನಿತ್ಯ ಹೆಚ್ಚಿನ ಪರೀಕ್ಷೆ ನಡೆಸುವ, ತಕ್ಷಣ ಫಲಿತಾಂಶ ನೀಡುವ ಕೆಲಸ ಆಗುತ್ತಿಲ್ಲ. ಗಂಟಲು ದ್ರವ ಸಂಗ್ರಹಿಸಿ ವಾರ ಆದಮೇಲೆ ಫಲಿತಾಂಶ ನೀಡಲಾಗುತ್ತಿದ್ದು ಇದರಿಂದ ಜನತೆ ಗೊಂದಲದ್ದಿದ್ದಾರೆ. ಗಂಟಲು ದ್ರವ ಸಂಗ್ರಹದ ನಂತರ 1 ದಿನದಲ್ಲೇ ಫಲಿತಾಂಶ ಯಾಕೆ ನೀಡಲಾಗುತ್ತಿಲ್ಲ? ಎಂದು ತಾಲೂಕು ತಹಸೀಲ್ದಾರ್, ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ರೆಮ್ ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ತಡೆಗಟ್ಟಲು ಆಗ್ರಹ

ಅಳಂಗಾ ಊರಲ್ಲಿ ಸೀಲ್‍ಡೌನ್ ಮುಂದುವರೆದಿದೆ. ಆದರೆ ಸೋಂಕಿತರ ಹೆಚ್ಚುತೊಡಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಒಟ್ಟಾರೆಯಾಗಿ ಈ ಗ್ರಾಮದಲ್ಲಿ 11 ದಿನಗಳಲ್ಲಿ ಸುಮಾರು 14 ಮಂದಿ ವಿವಿಧ ಕಾರಣಗಳಿಂದ ವಯೋವೃದ್ಧರು ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ಗೊತ್ತಗಿಲ್ಲವೆಂದು ತಾಲೂಕು ಆಡಳಿತ ಹೇಳುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ, ಇಲ್ಲಿಯವರೆಗೂ ಕೊರಂಟೇನ್ ಸೆಂಟರ್ ತೆಗೆದಿಲ್ಲ ಎಂದು ದೂರಿದ್ದಾರೆ.

ಅಳಂಗಾದಲ್ಲಿ ಮಹಾರಾಷ್ಟ್ರದಿಂದ ಹೇಗೆ ಜನ ಬಂದರು, ಹೀಗೆ ಬಂದವರಿಂದಲೇ ಸೊಂಕು ಹರಡಿದ್ದರೂ ಇದಕ್ಕೆ ಹೊಣೆಗಾರರಾಗಿರುವ ಅದಿಕಾರಿಗಳ ವಿರುದ್ಧ ಇಂದಿಗೂ ಕ್ರಮ ಕೈಗೊಳ್ಳಲಾಗಿಲ್ಲ ಯಾಕೆ? ತಾಲೂಕು ಆಡಳಿತ ಜನಪರ ಕಾಳಜಿಗಿಂತ ಹೆಚ್ಚಿಗೆ ಸಮಜಾಯಿಷಿ, ಸಬೂಬು ಹೇಳುತ್ತ ಹೊರಟಿರುವಂತಿದೆ. ಇದರಿಂದಾಗಿಯೇ ಬೇರುಮಟ್ಟದಲ್ಲಿ ಕೋರೋನಾ ತಡೆಗಟ್ಟುವ ದಿಶೆಯಲ್ಲಿ ಕೆಲಸಗಳು ಅಷ್ಟೊಂದು ಪರಿಣಾಮಕಾರಿಯಾಗಿ ಸಾಗುತ್ತಿಲ್ಲವೆಂದು ಭೂನಸೂರ್ ದೂರಿದ್ದಾರೆ.

ರಾಮನ ರಾಜ್ಯಾಭಾರದಲ್ಲಿ ಹಸಿವೆನಿಂದ ಜನ ಬಳಲುತ್ತಿರಲಿಲ್ಲ: ಈರಣ್ಣ ಕಾರ್ಗಿಲ್

ಊರು ಕೊಳ್ಳೆ ಹೋದ ಮೇಲೆ ಎಂಬಂತೆ ಆಳಂದದಲ್ಲಿ ಕೋವಿಡ್ ಕೇರ್ ಸೆಂಟರ್ ಈಗ ಆರಂಭಿಸಿದ್ದಾರೆ. ತಾಲೂಕು ಹಂತದಲ್ಲಿ ಕೋವಿಡ್ ಕೇರ್ ಸೆಂಟರ್ ಮುಂಚೆಯೇ ಆರಂಭವಾಗಿದ್ದರೆ ಸಾವು- ನೋವು ಸಂಭವಿಸುತ್ತಿರಲಿಲ್ಲ. ಇಂತಹ ಜನಪರ ಕ್ರಮಕ್ಕೂ ವಿಳಂಬ ಯಾಕೋ? ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಿಂದ ಬರುವವರಿಗೆ 3 ಕಡೆಗಳಲ್ಲಿ ತಪಾಸಣೆ ನಡೆಸಲು ಚೆಕ್ ಪೋಸ್ಟ್ ಹಾಕಲಾಗಿದೆಯಾದರೂ ಜನ ಕಣ್ಣು ತಪ್ಪಿಸಿ ಅಡ್ಡ ದಾರಿಗಳಲ್ಲಿ ಆಳಂದ ಪ್ರವೇಸಿಸುತ್ತಿದ್ದರೂ ಕೇಳೋರಿಲ್ಲ. ಅನೇಕರು ಚೆಕ್ ಪೋಸ್ಟ್ ನಲ್ಲಿಯೇ ಗಿಂಬಳ ಕೊಟ್ಟೂ ಬರುತ್ತಿದ್ದಾರೆ. ದೊಡ್ಡ ಗಾಡಿಗೆ 500 ರು, ಸಣ್ಣ ಗಾಡಿಗೆ 250 ರು ಎಂಬ ದರವೇ ನಿಗದಿ ಮಾಡಲಾಗಿದೆ. ಹೀಗಾದಲ್ಲಿ ಸೋಂಕಿನ ನಿಯಂತ್ರಣ ಹೇಗೆ ಸಾಧ್ಯ ಎಂದು ಹಣಮಂತ ಪ್ರಶ್ನಿಸಿದ್ದಾರೆ.

ಕೋವಿಡ್ ಭೀತಿಯಿಂದಾಗಿ ಸಹಜವಾಗಿ ಅನಾರೋಗ್ಯಕ್ಕೆ ತುತ್ತಾದವರಿಗೂ ಆಸ್ಪತ್ರೆಯಲ್ಲಿ ಬೇಡ್‍ಗಳ ಭರ್ತಿಯಿಂದಾಗಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿತ್ತಿರುವ ಪ್ರಕರಣಗಳು ಹೆಚ್ಚಾಗಿ ಜನ ಭಯದಲ್ಲಿದ್ದಾರೆ. ಖಜೂರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೋಂಕು ಆವರಿಸಿದ ಸಕ್ರಿಯ ಒಟ್ಟು 65 ಪ್ರಕರಣಗಳು ದಾಖಲಾಗಿ ಆತಂಕ ಮೂಡಿಸಿದೆ ಇದೇ ರೀತಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಆತಂಕ ಹೆಚ್ಚುತ್ತಿದೆ.

ಪ್ರತಿದಿನ ನೈಟ್ ಕಫ್ರ್ಯೂ, ಶನಿವಾರ ಮತ್ತು ರವಿವಾರ ಸಂಪೂರ್ಣ ಬಂದ್

ಅನಾರೋಗ್ಯದಿಂದಾಗಿ ನೆರೆಯ ಉಮರಗಾ, ಸೋಲಾಪೂರ ಹಾಗೂ ಕಲಬುರಗಿ ಹಾಗೂ ಹೈದರಾಬಾದ ಆಸ್ಪತ್ರೆಗೆ ದಾಖಲಾಗಿ ಕೆಲವರು ಗುಣಮುಖರಾದರೆ, ಇನ್ನೂ ಕೆಲವರ ಮೃತರಾಗಿರುವುದು ಆರೋಗ್ಯ ಇಲಾಖೆಯ ದಾಖಲೆಗೆ ಸೇರುತ್ತಿಲ್ಲ. ಆದರೆ ಆಸ್ಪತ್ರೆಯಿಂದ ಪಾರ್ಥೀವ ಶರೀರ ತಂದು ಕೋವಿಡ್ ನಿಮಾವಳಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಇದರಿಂದಾಗಿ ನಾಗರಿಕರು ಸೋಂಕಿನ ಕುರಿತಂತೆ ಮತ್ತಷ್ಟೂ ಗೊಂದಲಕ್ಕಿಡಾಗುತ್ತಿದ್ದಾರೆ.

ಹೀಗೆ ಆಳಂದ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಹಠಾತಾಗಿ ಜನರ ಸಾವು ಸಂಭವಿಸತೊಡಗಿದ್ದು, ಆದರೆ ಈ ನಡುವೆ ಕೆಲವರಿಗೆ ಕೋವಿಡ್ ನಿಮಾವಳಿಯಲ್ಲಿ ಅಂತ್ಯಕ್ರಿಯೆ ನೆರವೇರಿದರು ಸಹ ಆರೋಗ್ಯ ಇಲಾಖೆಯ ಅಂಕಿ ಅಂಶಗಳಲ್ಲಿ ಮೃತರ ಹೆಸರು ದಾಖಲಾಗುತ್ತಿಲ್ಲ. ಯಾಕೆ ಇಂತಹ ಗೊಂದಲ? ದ್ವಂದ್ವ? ಇದಕ್ಕೆ ಆಡಳಿತದವರು ಉತ್ತರಿಸಬೇಕಿದೆ. ತಾಲೂಕಿನಲ್ಲಿ ಜನತೆ ಸೋಂಕಿನ ಭಯ ಭೀತಿ ಆವರಿಸಿದೆ. ಈಗಾಗಲೇ ಅಲಂಗಾ ಸೀಲ್‍ಡೌನ್ ಆಗಿದೆ ಇನ್ನೂ ಹೆಚ್ಚಿನ ಗ್ರಾಮಗಲು ಇಂತಹ ದುರವಸ್ಥೆಗೆ ತಲುಪುವ ಮುನ್ನವೇ ಇನ್ನಾದರೂ ಆಡಳಿತ ಎಚ್ಚೆತ್ತು ಮುನ್ನೆಚ್ಚರಿಕೆ, ಜನರಿಗೆ ತಿಳುವಳಿಕೆ ನೀಡುವ ಕ್ರಮಗಳಿಗೆ ಮುಂದಾಗಲಿ ಎಂದೂ ಹಣಮಂತ ಭೂಸನೂರ್ ಆಗ್ರಹಿಸಿದ್ದಾರೆ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

18 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago