ಸುರಪುರ: ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿಗಳು ಕಿರಾಣಿ, ಮಧ್ಯದಂಗಡಿ, ಹೋಟೇಲ್‌ಗಳು ಮತ್ತು ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ಹೊರತು ಪಡಿಸಿ ಉಳಿದ ಅಂಗಡಿಗಳ ವ್ಯಾಪಾರ ವಹಿವಾಟು ಬಂದ್‌ಮಾಡಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಜೀವನ ಕುಮಾರ ಮಾತನಾಡಿ ಕರೋನಾ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚಿತ್ತಿದ್ದು ಕರೋನಾ ಚೈನ್ ಲಿಂಕನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಕರೋನಾ ನಿಯಮಾವಳಿಗಳಂತೆ ಎಲ್ಲಾ ಜನರು ಮತ್ತು ವ್ಯಾಪಾರಸ್ಥರು ನಡೆದುಕೊಳ್ಳಬೇಕು ಅಂಗಡಿ ಮಂಗಟ್ಟುಗಳಲ್ಲಿ ಮುಗಿಬಿದ್ದಿ ವಸ್ತಗಳ ಖರಿದಿಸಿ ನಿಯಮವನ್ನು ಮೀರುತ್ತಾರೆ. ಮತ್ತು ಯಾವೋಬ್ಬರು ಮಾಸ್ಕ ಹಾಕಿಕೊಳ್ಳುವುದಿಲ್ಲಾ ಇದರಿಂದ ಪ್ರಕರಣಗಳು ದಿನದಿಂದ ಏರುಗತಿಯಲ್ಲಿ ಸಾಗುತ್ತಿವೆ ಇದನ್ನು ಗಮನಿಸಿ ಜಿಲ್ಲಾಧಿಕಾರಿಗಳು ಅಗತ್ಯ ವಸ್ತುಗಳು ಮತ್ತು ಔಷಧಿ ಅಂಗಡಿ ಸೇರಿದಂತೆ ಇನ್ನಿತರ ವಹಿವಾಟಿಗೆ ಮಾತ್ರ ಅವಕಾಶ ಕಲ್ಪಿಸಿರುತ್ತಾರೆ ಅದರಂತೆ ಎಲ್ಲಾ ಜನರು ನಡೆದು ಕೊಳ್ಳಬೇಕು ಎಂದರು.
ಸುರಪುರ ಬಸ್ ಡಿಪೋ ಮುಂದೆ ಸಾಮೂಹಿಕ ಸಂಘಟನೆಗಳ ಪ್ರತಿಭಟನೆ
ಇನ್ನು ಹೋಟೆಲಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಇನ್ನು ಮಧ್ಯದಂಗಡಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟಗಳಲ್ಲಿ ಪಾರ್ಸಲ್ ಅವಕಾಶವಿದೆ ಇನ್ನು ಸಾರ್ವಜನಿಕರು ಅನಗತ್ಯಾಗಿ ಹೊರಗಡೆ ಸಂಚರಿಸುವುದನ್ನು ಬಿಡಬೇಕು ಮತ್ತು ಕಡ್ಡಾಯವಾಗಿ ಮಾಸ್ಕ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ನಗರಸಭೆಯ ಈ ನಡೆಗೆ ವ್ಯಾಪಾರಸ್ತರಲ್ಲಿ ಮತ್ತು ಜನರಲ್ಲಿ ಗೊಂದಲವನ್ನು ಮೂಡಿಸಿತ್ತು ಕೆಲ ಕಾಲ ನಗರಸಭೆಯ ಅಧಿಕಾರಿಗಳ ಬಹುತೇಕ ಅಂಗಡಿ ಮಾಲಿಕರು ಯಾವುದೇ ಮುನಸೂಚನೆ ಇಲ್ಲದೆನೆ ಯಾವರೀತಿ ಬಂದ ಮಾಡಿಸುತ್ತಿದ್ದರಿ ಎಂದು ವಾಗ್ವಾದ ಮಾಡಿರುವ ಘಟನೆಯು ಜರುಗಿತು.ಇದನ್ಯಾವುದನ್ನು ಲೆಕ್ಕಿಸದೆ ನಗರಸಭೆ ಅಧಿಕಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿಸಿದರು.
ಕೋವಿಡ್ ರೋಗಿಗಳ ಚಿಕಿತ್ಸೆಗೆ ಎಸ್.ಎನ್.ಸಿ.ಯು ಕಟ್ಟಡ ಬಳಕೆಗೆ ಡಿ.ಸಿ. ಸೂಚನೆ
ಈ ಘಟನೆಯಿಂದ ವಿವಿಧ ಗ್ರಾಮಗಳಿಂದ ನಗರಕ್ಕೆ ವಸ್ತುಗಳ ಖರೀದಿಗಾಗಿ ಆಗಮಿಸಿದ ಜನರು ವಿಚಲಿತರಾಗಿ ವಸ್ತುಗಳ ಖರೀದಿ ನಿಲ್ಲಿಸಿ ಬಂದ ದಾರಿಗೆ ಸುಂಕವಿಲ್ಲೆಂಬತ್ತೆ ಮರಳಿ ಗ್ರಾಮಗಳಿಗೆ ತೆರಳಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…