ಸುರಪುರ ಬಸ್ ಡಿಪೋ ಮುಂದೆ ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

0
25

ಸುರಪುರ: ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ನಿಲ್ಲಿಸಿ ಸೇವೆಗೆ ಆಗಮಿಸಿದ್ದು ಆ ನೌಕರರಿಗೆ ಘಟಕ ವ್ಯವಸ್ಥಾಪಕರು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾಮೂಹಿಕ ಸಂಘಟನೆಗಳ ಮುಖಂಡರು ಸುರಪುರ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಕಳೆದ ಹನ್ನೆರಡು ದಿನಗಳಿಂದ ಮುಷ್ಕರ ನಡೆಸಿ ಹೈಕೋರ್ಟ್ ಆದೇಶದಂತೆ ಈಗ ಸಾರಿಗೆ ನೌಕರರು ಮರಳಿ ಕೆಲಸಕ್ಕೆ ಬಂದಿದ್ದಾರೆ,ಆದರೆ ಆ ಎಲ್ಲಾ ಆನೌಕರರಿಗೆ ಇಲ್ಲಿಯ ಡಿಪೋ ಮ್ಯಾನೇಜರ್ ಅವರು ಕೋವಿಡ್ ಪರೀಕ್ಷೆ ವರದಿ ತನ್ನಿ ಅಲ್ಲದೆ ಡಿಸಿಯವರನ್ನು ಭೇಟಿ ಮಾಡಿ ಬನ್ನಿ ಎಂದು ವಿನಾಕಾರಣ ನೌಕರರಿಗೆ ತೊಂದರೆ ನೀಡುತ್ತಿದ್ದಾರೆ.

Contact Your\'s Advertisement; 9902492681

ಕೋವಿಡ್ ರೋಗಿಗಳ ಚಿಕಿತ್ಸೆಗೆ ಎಸ್.ಎನ್.ಸಿ‌.ಯು ಕಟ್ಟಡ ಬಳಕೆಗೆ ಡಿ.ಸಿ. ಸೂಚನೆ

ಈಗಾಗಲೇ ಶಹಾಪುರ ಡಿಪೋದ ಪುನಾಕ್ಕೆ ಹೋಗುವ ಬಸ್ ಬಂದಿದೆ,ಶಹಾಪುರದಲ್ಲಿ ಕೇಳದ ಕೋವಿಡ್ ವರದಿ ಇಲ್ಲಿ ಮಾತ್ರ ಕೇಳುವ ಮೂಲಕ ನೌಕರರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ.ಕೂಡಲೇ ಎಲ್ಲಾ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ನಿರಂತರವಾಗಿ ನಡೆಸುವುದಾಗಿ ಎಚ್ಚರಿಸಿದರು.

ನಂತರ ಕೆಲ ಕಾಲ ರಸ್ತೆ ತಡೆ ನಡೆಸಿದ್ದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.ನಂತರ ಪ್ರತಿಭಟನಾ ಸ್ಥಳಕ್ಕೆ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಆಗಮಿಸಿ ಹೋರಾಟಗಾರರ ಮನವೊಲಿಸಿ ರಸ್ತೆ ತಡೆಯನ್ನು ತಡೆದರು ಅಲ್ಲದೆ ಹೋರಾಟಗಾರರೊಂದಿಗೆ ಮಾತನಾಡಿ,ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಲು ಮತ್ತು ಎಲ್ಲರು ಕೆಲಸಕ್ಕೆ ಹಾಜರಾಗುವಂತೆ ಅವಕಾಶ ಮಾಡಿಕೊಡಲಾಗುವುದು ಒಂದು ದಿನದ ಅವಕಾಶ ನೀಡುವಂತೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು.

ವಾರ್ತಾ ಇಲಾಖೆಯ ನೌಕರ ಶಿವಶರಣಪ್ಪ ನಿಧನ

ಈ ಸಂದರ್ಭದಲ್ಲಿ ಮುಖಂಡರಾದ ರಾಹುಲ್ ಹುಲಿಮನಿ ರಮೇಶ ದೊರೆ ಆಲ್ಧಾಳ ಮೂರ್ತಿ ಬೊಮ್ಮನಹಳ್ಳಿ ತಿಪ್ಪಣ್ಣ ಶೆಳ್ಳಗಿ ಖಾಜಾಹುಸೇನ ಗುಡಗುಂಟಿ ಮಾನಪ್ಪ ಭಂಡಾರಿ ಪಾರಪ್ಪ ದೇವತ್ಕಲ್ ಪರಶುರಾಮ ದೇವತ್ಕಲ್ ಮಹೇಶ ಯಾದಗಿರಿ ಜೆಟ್ಟೆಪ್ಪ ನಾಗರಾಳ ಸೇರಿದಂತೆ ಅನೇಕ ಜನ ಸಾರಿಗೆ ನೌಕರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here