ಅಗತ್ಯ ವಸ್ತುಗಳ ಮಾರಾಟ: ಇತರೆ ವ್ಯಾಪಾರ ಬಂದ್

0
33

ಸುರಪುರ: ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿಗಳು ಕಿರಾಣಿ, ಮಧ್ಯದಂಗಡಿ, ಹೋಟೇಲ್‌ಗಳು ಮತ್ತು ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ಹೊರತು ಪಡಿಸಿ ಉಳಿದ ಅಂಗಡಿಗಳ ವ್ಯಾಪಾರ ವಹಿವಾಟು ಬಂದ್‌ಮಾಡಿಸಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಜೀವನ ಕುಮಾರ ಮಾತನಾಡಿ ಕರೋನಾ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚಿತ್ತಿದ್ದು ಕರೋನಾ ಚೈನ್ ಲಿಂಕನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಕರೋನಾ ನಿಯಮಾವಳಿಗಳಂತೆ ಎಲ್ಲಾ ಜನರು ಮತ್ತು ವ್ಯಾಪಾರಸ್ಥರು ನಡೆದುಕೊಳ್ಳಬೇಕು ಅಂಗಡಿ ಮಂಗಟ್ಟುಗಳಲ್ಲಿ ಮುಗಿಬಿದ್ದಿ ವಸ್ತಗಳ ಖರಿದಿಸಿ ನಿಯಮವನ್ನು ಮೀರುತ್ತಾರೆ. ಮತ್ತು ಯಾವೋಬ್ಬರು ಮಾಸ್ಕ ಹಾಕಿಕೊಳ್ಳುವುದಿಲ್ಲಾ ಇದರಿಂದ ಪ್ರಕರಣಗಳು ದಿನದಿಂದ ಏರುಗತಿಯಲ್ಲಿ ಸಾಗುತ್ತಿವೆ ಇದನ್ನು ಗಮನಿಸಿ ಜಿಲ್ಲಾಧಿಕಾರಿಗಳು ಅಗತ್ಯ ವಸ್ತುಗಳು ಮತ್ತು ಔಷಧಿ ಅಂಗಡಿ ಸೇರಿದಂತೆ ಇನ್ನಿತರ ವಹಿವಾಟಿಗೆ ಮಾತ್ರ ಅವಕಾಶ ಕಲ್ಪಿಸಿರುತ್ತಾರೆ ಅದರಂತೆ ಎಲ್ಲಾ ಜನರು ನಡೆದು ಕೊಳ್ಳಬೇಕು ಎಂದರು.

Contact Your\'s Advertisement; 9902492681

ಸುರಪುರ ಬಸ್ ಡಿಪೋ ಮುಂದೆ ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

ಇನ್ನು ಹೋಟೆಲಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಇನ್ನು ಮಧ್ಯದಂಗಡಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟಗಳಲ್ಲಿ ಪಾರ್ಸಲ್ ಅವಕಾಶವಿದೆ ಇನ್ನು ಸಾರ್ವಜನಿಕರು ಅನಗತ್ಯಾಗಿ ಹೊರಗಡೆ ಸಂಚರಿಸುವುದನ್ನು ಬಿಡಬೇಕು ಮತ್ತು ಕಡ್ಡಾಯವಾಗಿ ಮಾಸ್ಕ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ನಗರಸಭೆಯ ಈ ನಡೆಗೆ ವ್ಯಾಪಾರಸ್ತರಲ್ಲಿ ಮತ್ತು ಜನರಲ್ಲಿ ಗೊಂದಲವನ್ನು ಮೂಡಿಸಿತ್ತು ಕೆಲ ಕಾಲ ನಗರಸಭೆಯ ಅಧಿಕಾರಿಗಳ ಬಹುತೇಕ ಅಂಗಡಿ ಮಾಲಿಕರು ಯಾವುದೇ ಮುನಸೂಚನೆ ಇಲ್ಲದೆನೆ ಯಾವರೀತಿ ಬಂದ ಮಾಡಿಸುತ್ತಿದ್ದರಿ ಎಂದು ವಾಗ್ವಾದ ಮಾಡಿರುವ ಘಟನೆಯು ಜರುಗಿತು.ಇದನ್ಯಾವುದನ್ನು ಲೆಕ್ಕಿಸದೆ ನಗರಸಭೆ ಅಧಿಕಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿಸಿದರು.

ಕೋವಿಡ್ ರೋಗಿಗಳ ಚಿಕಿತ್ಸೆಗೆ ಎಸ್.ಎನ್.ಸಿ‌.ಯು ಕಟ್ಟಡ ಬಳಕೆಗೆ ಡಿ.ಸಿ. ಸೂಚನೆ

ಈ ಘಟನೆಯಿಂದ ವಿವಿಧ ಗ್ರಾಮಗಳಿಂದ ನಗರಕ್ಕೆ ವಸ್ತುಗಳ ಖರೀದಿಗಾಗಿ ಆಗಮಿಸಿದ ಜನರು ವಿಚಲಿತರಾಗಿ ವಸ್ತುಗಳ ಖರೀದಿ ನಿಲ್ಲಿಸಿ ಬಂದ ದಾರಿಗೆ ಸುಂಕವಿಲ್ಲೆಂಬತ್ತೆ ಮರಳಿ ಗ್ರಾಮಗಳಿಗೆ ತೆರಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here