ಅದ್ಯಾಕೋ ಗೊತ್ತಿಲ್ಲ. ಇಂದು ಬೆಳಗ್ಗೆ ೧೧ ಗಂಟೆಯಾಗಿರಬಹುದು. ಮಾಧ್ಯಮ ಮಿತ್ರ ಸಂಗಮನಾಥ ರೇವತಗಾಂವ ಅವರೊಂದಿಗೆ ಮಾತನಾಡುತ್ತ ಜಯತೀರ್ಥ ಕಾಗಲಕರ್ ಗುಣಮುಖವಾಗಿದ್ದಾರಾ? ಎಂದು ಕೇಳಿದೆ.
ದೋಸ್ತಾ ನೀ ಎಲ್ಲಿದಿ. ಎರಡ್ಮೂರು ದಿನ ಆಯ್ತು ವೆಂಟಿಲೇಟರ್ನಲ್ಲೇ ಇದ್ದಾರೆ. ಅವರಿಗೆ ಅಗತ್ಯವಾಗಿದ್ದ ಇಂಜೆಕ್ಷನ್ (ರೆಮಿಡಿಸಿವಿಆರ್) ಎಲ್ಲ ಕೊಡಲಾಗಿದೆ. ಆದರೆ ವೈದ್ಯರು 90% ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಉಳಿದರೆ ಮಿರ್ಯಾಕಲ್ ಎಂದಿದ್ದಾರೆ ಎಂದು ಹೇಳಿದ.
ಕಲಬುರಗಿಯ ಮಾಧ್ಯಮ ಮಿತ್ರರಿಗೆ ಸೋಂಕು ತಗುಲಿದ್ದು, ಯರ್ಯಾರು ಹೋಮ್ ಐಸೋಲೇಷನ್ ನಲ್ಲಿ ಇದ್ದಾರೆ, ಯಾರ್ಯಾರು ಗುಣಮುಖರಾಗಿದ್ದಾರೆ ಎಂದು ಮಾತನಾಡುತ್ತ ಕಾಗಲ್ಕರ್ ಅವರ ಒಳ್ಳೆಯ ಗುಣಗಳನ್ನು ಪರಸ್ಪರ ಕೊಂಡಾಡಿದೇವು. ಛೇ ಕೊರೊನಾ ನಿನಗಿಲ್ಲವೇ? ಒಂದಿಷ್ಟು ಕರುಣೆಯೇ? ಎಂದು ಪರಸ್ಪರ ಶಾಪ ಹಾಕಿದೆವು.
ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೊವಿಡ್ ಗೆ ಬಲಿ
ಇದಾಗಿ ಅರ್ಧಗಂಟೆ ಕೂಡ ಆಗಿರಲಿಕ್ಕಿಲ್ಲ. ಕೆಲಸದ ನಿಮಿತ್ತ ಹೊರಗಡೆ ಬಂದಿದ್ದ ನಾನು, ಜೇಬಿನಲ್ಲಿದ್ದ ಮೊಬೈಲ್ ತೆಗೆದು ಇಂಟರ್ ನೆಟ್ ಆನ್ ಮಾಡಿದೆ. ಅವರು ಕೋವಿಡ್ ಗೆ ಬಲಿಯಾದ ಸುದ್ದಿ ಮಹಿಪಾಲರೆಡ್ಡಿ ಮುನ್ನೂರ ಅವರ ವಾಟ್ಸ್ ಆಪ್ ಸಂದೇಶದ ಮೂಲಕ ತಿಳಿಯಿತು. ಎದೆ ಧಸಕ್ಕೆಂದಿತು.
ಹಿತ, ಮಿತಭಾಷಿಯಾಗಿದ್ದ ಕಾಗಲಕರ್ ಅವರನ್ನು ನಾನು ಸುಮಾರು 20 ವರ್ಷಗಳಿಂದ ಬಲ್ಲೆ. ನಾವಾದರೂ ರಾಜಕಾರಣಿಗಳು ಪಕ್ಷ ಬದಲಾಯಿಸುವಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ಆದರೆ ಕಾಗಲ್ ಕರ್ ಮಾತ್ರ ಅದೇ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲೇ ವರದಿಗಾರ, ಹಿರಿಯ ವರದಿಗಾರ, ಮುಖ್ಯ ವರದಿಗಾರ ಕೊನೆಗೆ ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಳೆದ ನವೆಂಬರ್ ನಲ್ಲಿ ನಾನು ಗುಲ್ಬರ್ಗ ವಿವಿಯಿಂದ ಪಿಎಚ್.ಡಿ ಪದವಿ ಪಡೆದಾಗ “ಸತ್ಯಂಪೇಟೆಗೆ ಡಾಕ್ಟರೇಟ್ ಪದವಿ” ಎಂಬ ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಿ, ” ನಮಸ್ಕಾರ ಡಾಕ್ಟರ್ ಸಾಹೇಬ್ರೆ” ಪಾರ್ಟಿಯಾವಾಗ? ಎಂದು ಕೇಳಿದ್ದರು. ನಾನು ಕೊಡೋಣ ಸರ್ ಎಂದಿದ್ದೆ. ಆದರೆ ಈ ಮಧ್ಯೆ ಅವರು ಮತ್ತು ನಾನು ಅಷ್ಟೊಂದು ಮುಖಾಮುಖಿ ಭೇಟಿಯಾಗಿರಲಿಲ್ಲ. ಅಲ್ಲಲ್ಲಿ ಬೈಕ್ ಮೇಲೆ ಹೊರಟಾಗ ಹಾಯ್, ಹಲೋ ಎಂದ್ಹೇಳಿ ಮುಂದೆ ಸಾಗುತ್ತಿದ್ದೇವಷ್ಟೇ!
ಕೊರೋನಾ ಮಾರ್ಗ ಅನುಸರಿಸಿ ನರೇಗಾ ಯೋಜನೆ ಜಾರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ
ತೀರಾ ಇತ್ತೀಚಿಗೆ ನಮ್ಮ ಇ-ಮೀಡಿಯಾದಲ್ಲಿ ಬರುವ ಸುದ್ದಿಗಳು ಕಾಪಿ ಆಗದಿದ್ದಾಗ, ಸರ್, ನುಡಿ ಕನ್ವರ್ಟ್ ಮಾಡಿ ಕಳಿಸಿ ಎಂದು ವಾಟ್ಸ್ ಆಪ್ ಮೂಲಕ ಮೆಸೆಜ್ ಕಳಿಸುತ್ತಿದ್ದರು. ನಾನು ಕಳುಹಿಸಿದ ಸುದ್ದಿಗಳನ್ನು ತಮ್ಮ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸುವುದಲ್ಲದೆ ನನ್ನ ವಾಟ್ಸ್ ಆಪ್ ಗೆ ಆ ಸುದ್ದಿ ತುಣುಕನ್ನು ಫಾರ್ವರ್ಡ್ ಕೂಡ ಮಾಡುತ್ತಿದ್ದರು.
ಆಶ್ಚರ್ಯದ ಸಂಗತಿಯೆನೆಂದರೆ ನಿನ್ನೆ ಕೂಡ ಒಂದು ಸುದ್ದಿಯನ್ನು ಅವರ ಮೇಲ್ ಗೆ ಫಾರ್ವರ್ಡ್ ಮಾಡಿದ್ದೆ. ಇದುವೇ ನಾನು ಅವರಿಗೆ ಕಳಿಸುವ ಕೊನೆಯ ಮೇಲ್ ಆಗಿರುತ್ತದೆ ಎಂದು ನಾನು ನಂಬಿರಲೇ ಇಲ್ಲ. ಅವರು ಈಗ ನಮ್ಮೊಂದಿಗಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಒದಗಿ ಬರಲಿ.
ಸರಳ ಮದುವೆಯಾದ ಮಾಜಿ ಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನ ಮರಗುತ್ತಿ
ತಮ್ಮ ಮಧುಮೇಹ ದೇಹಕ್ಕೆ ಕೊರೊನಾ ವೈರಸ್ ವಕ್ಕರಿಸಿದಾಗಿನಿಂದ ಇವರು ಬಹಳ ಹೆದರಿದ್ದರು ಎಂದು ಕೇಳಿದ್ದೆ. ವೈದ್ಯರು ಸಹ ಇವರು ಬಹಳ ಹೆದರಿದ್ದಾರೆ ಎಂದು ಹೇಳುತ್ತಿದ್ದರಂತೆ! ತೀರಾ ಸಂಕೋಚ ಸ್ವಭಾವದ ಇವರು ಧೈರ್ಯದಿಂದ ಕೊರೊನಾ ಎದುರಿಸಿದ್ದರೆ ಬಹುಶಃ ಉಳಿಯುತ್ತಿದ್ದರೇನೋ!
ಪತ್ರಕರ್ತರು ಕೊರೊನಾ ಫ್ರಂಟ್ ವಾರಿಯರ್ಸ್ ಎನ್ನುವ ಸರ್ಕಾರ ಅಥವಾ ಸಂಸ್ಥೆಯವರು ಇನ್ನಾದರೂ ಪತ್ರಕರ್ತರಿಗೆ ಭದ್ರತೆ ಒದಗಿಸಬೇಕಾಗಿದೆ. ಪತ್ರಕರ್ತರಾದ ನಾವು ಸಹ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…
View Comments
ಹಿರಿಯ ಪತ್ರಕರ್ತರು ಮತ್ತು ಆತ್ಮಿಯರಾದ ಜಯತೀರ್ಥ ಕಾಗಲಕರ ಅವರ ಸಾವಿನ ಸುದ್ದಿ ತಿಳಿದು ಬಹಳ ದು:ಖವಾಯಿತು.ಇದು ಅತ್ಯಂತ ನೊವಿನ ಸಂಗತಿ. ಓಂ ಶಾಂತಿ