ಕಲಬುರಗಿ: ಡೆಡ್ಲಿ ಕರೋನಾ ಮಹಾಮಾರಿ ಭೀತಿಯಿಂದ ಇಡೀ ಭಾರತವೇ ೧ನೇ ಹಂತದಲ್ಲಿ ಲಾಕ್‌ಡೌನ್ ಆಗಿರುವುದರಿಂದ ಕಲಾವಿದರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.
ಹೀಗಾಗಿ ಸರಕಾರ ಕಲಾವಿದರಿಗೆ ಕಳೆದ ವರ್ಷ ಕೂಡಾ ಯಾವುದೇ ರೀತಿಯ ಸಹಾಯ ಹಸ್ತ ಮಾಡಿರುವುದಿಲ್ಲ. ಸದರಿ ೨ನೇ ಅಲೆಯಲ್ಲಿ ಕರ್ನಾಟಕ ಸಂಪೂರ್ಣವಾಗಿ ಲಾಕ್‌ಡೌನ್ ಆಗಿರುವುದರಿಂದ ಸಮಸ್ತ ಕಲಾವಿದರಿಗೆ ಜೀವನವನ್ನು ನಡೆಸುವಲ್ಲಿ ತುಂಬಾ ಕಷ್ಠದಾಯಕವಾಗುತ್ತಿದೆ ಎಂದು ಗುಲಬರ್ಗಾ ಡ್ಯಾನ್ಸ್ ಸಂಘ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಯಂಕಪ್ಪ (ಅಕ್ಷಯ) ಅವರು ತಿಳಿಸಿದ್ದಾರೆ.
ಕಲಾವಿದರು ಜೀವನವನ್ನು ಸಾಗಿಸುವುದು ತುಂಬಾನೇ ಕಷ್ಠದಾಯಕವಾಗಿದೆ. ಕಲೆಯಿಂದನೇ ಕಲಾವಿದರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈಗ ಕರೋನಾ ಮಹಾಮಾರಿ ಬೀತಿಯ ಹಿನ್ನಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿರುತ್ತದೆ. ಮತ್ತು ಕಲೆಗೆ ಬೆಲೆ ಇಲ್ಲದಂತಾಗಿರುತ್ತದೆ ಕಲಾವಿದರೂ ಎಲ್ಲಾ ಕ್ಷೇತ್ರದಲ್ಲಿ ತುಂಬಾ ಅವಶ್ಯಕತೆ ಇದ್ದು ಈಗ ಸದರಿ ಸರ್ಕಾರವು ಕಲಾವಿದರನ್ನು ಕಡೆಗಣಿಸುತ್ತಿದ್ದಾರೆ ಎಂದು ಯಂಕಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಡಕಾರ್ಮಿಕರಿಗೆ ಹಣ ಘೋಷಣೆ ಮಾಡಿದ ಹಾಗೆ ಕಲಾವಿದರಿಗೂ ಕೂಡ ಸಹಾಯ ಹಸ್ತವನ್ನು ಮಾಡಬೇಕೆಂದು ಸಮಸ್ತ ಕಲಾವಿದರ ವತಿಯಿಂದ ಸರ್ಕಾರಕ್ಕೆ ಮನವಿಯನ್ನು ಮಾಡಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮನಸ್ಸು ಜಾನಪದ ಕಲಾ ಸಂಸ್ಥೆ, ಜ್ಯೋತಿ ಜಾನಪದ ಕಲಾ ಸಂಸ್ಥೆ, ಮಯ್ಯೂರಿ ನೃತ್ಯ ಕಲಾ ತಂಡ, ರಂಗಾಂತರ ರಂಗ ಜಾನಪದ ತಂಡ, ಕರ್ನಾಟಕ ನೃತ್ಯ ಕಲಾ ಸಂಸ್ಥೆ, ಎಚ್.ಕೆ.ಇ.ಡಿ ಸಂಗೀತ ಕಲಾ ಸಂಸ್ಥೆ, ಅರವಿಂದ ಸನಗುನಗಿ ಜಾನಪದ ಕಲಾ ತಂಡ, ಚಾಂಚ ಜಾಕ್ಷನ ಜಾನಪದ ಕಲಾ ತಂಡ, ಮಹಾತ್ಮಾಗಾಂಧಿ ಡ್ಯಾನ್ಸ್ ಅಕಾಡಮಿ, ಸಾಯಬಣ್ಣಾ ಸನ್ಮಾನ ಡ್ಯಾನ್ಸ್ ಅಕಾಡಮಿ, ಮನಸ್ವಿನಿ ಜಾನಪದ ಕಲಾ ತಂಡ, ಶ್ರೀ ಬಸವ ಸಂಗೀತ ಜಾನಪದ ಕಲಾ ತಂಡ, ಶರಣು ಕ.ಎ. ಮೂಲಗೆ ಕಲಾ ತಂಡದವರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…