ಬಿಸಿ ಬಿಸಿ ಸುದ್ದಿ

ಭಂಕೂರ: ಕಡು ಬಡವರಿಗೆ ಗ್ರಾಪಂ ಸದಸ್ಯ ಶರಣಗೌಡ ದಳಪತಿ ಅವರಿಂದ ಆಹಾರ ವಿತರಣೆ

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ವಾರ್ಡ ನಂ.೧ರಲ್ಲಿ ಗ್ರಾಪಂ ಸದಸ್ಯ ಶರಣಗೌಡ ದಳಪತಿ ವಾರ್ಡನ ಅರವತ್ತು ಕಡು ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಶರಣಪ್ಪ ದಳಪತಿ, ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಲಾಕ್‌ಡೌನ್ ಮಾಡಲಾಗಿದೆ.ಕೆಲಸಕ್ಕಾಗಿ ದೂರದಿಂದ ಬಂದ ಜನರಿಗೆ ದುಡಿಯಲು ಕೆಲಸವಿಲ್ಲ. ಕೈಯಲ್ಲಿ ಹಣವಿಲ್ಲ.ಇದರಿಂದ ಬಡವರಿಗೆ ಕಷ್ಟದ ಬದುಕು ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಇದ್ದ ದುಡ್ಡು ಖಾಲಿಯಾಗಿದೆ.ಇಂತಹ ಅನೇಕ ಕುಟುಂಬಗಳಿಗೆ ಆಹಾರ ತಯ್ಯಾರು ಮಾಡಿ ನೀಡಿದರೇ ಒಂದು ದಿನದ ಮಟ್ಟಿಗೆ ಆಗಬಹುದು.ಅದರ ಬದಲಿಗೆ ಸ್ವಲ್ಪ ಆಹಾರ ಪದಾರ್ಥಗಳನ್ನು ನೀಡಿದರೇ ಅವರೇ ಆಹಾರವನ್ನು ಮಾಡಿಕೊಂಡು ಊಟ ಮಾಡುತ್ತಾರೆ ಎಂಬ ಆಲೋಚನೆಯಿಂದ ಆಹಾರ ಕಿಟ್ ವಿತರಿಸಿದ್ದೆನೆ.ನನ್ನ ವಾರ್ಡ ನನ್ನ ಜನರಿಗೆ ತೊಂದರೆಯಲ್ಲಿದ್ದಾಗ ಸಹಾಯ ಹಸ್ತ ಚಾಚುವುದು ಒಬ್ಬ ಚುನಾಯಿತ ಜನಪ್ರತಿನಿಧಿಯಾದ ನನ್ನ ಕರ್ತವ್ಯ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಮುನ್ನಾ ಪಟೇಲ್ ಹಾಗೂ ಮಹೇಶ ಧರಿ ಮಾತನಾಡಿ, ಲಾಕ್‌ಡೌನನಿಂದ ಬಹಳಷ್ಟು ಕುಟುಂಬಗಳು ತೊಂದರೆಗೆ ಒಳಗಾಗಿವೆ. ಆ ಕಡುಬಡವರಿಗೆ ಆಹಾರ ವಿತರಿಸುವ ಒಳ್ಳೆ ಕೆಲಸಕ್ಕೆ ನಾವು ಕೈ ಜೋಡಿಸಿದ್ದೆವೆ. ಬಹಳಷ್ಟು ಜನರಲ್ಲಿ ಶ್ರೀಮಂತಿಕೆ ಇದೆ.ಆದರೆ ಕೊಡುವ ಹೃದಯ ಇಲ್ಲ. ಕೊಡುವ ಮತ್ತು ನೀಡುವ ಹೃದಯವಂತರು ಮುಂದೆ ಬಂದರೆ ಬಡ ಜನರ ಸಂಕಷ್ಟ ಸ್ವಲ್ಪ ಮಟ್ಟಿಗಾದರೂ ತಗ್ಗಬಹುದು. ಪ್ರತಿಯೊಂದು ಪ್ರದೇಶದಲ್ಲಿ ದಾಸೋಹ ಮಾಡುವ ಜನರು ಹೆಚ್ಚಾಗಲಿ ಎಂಬುದೇ ನಮ್ಮ ಆಶಯ ಎಂದು ಹೇಳಿದರು.

ಅಕ್ಕಿ-೫ ಕೆಜಿ,ಜೋಳ-೫ಕೆಜಿ, ಉಪ್ಪು-೧ಕೆಜಿ, ಎಣ್ಣೆ-೧ ಕೆಜಿ, ಖಾರ ಒಳಗೊಂಡ ಆಹಾರ ಪದಾರ್ಥಗಳ ಕಿಟ್‌ನ್ನು ೬೦ ಕಡು ಬಡವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶರಣಗೌಡ ಎಲ್‌ಐಸಿ, ರಾಜು ಬೊಮ್ಮನಳ್ಳಿ, ಮಲ್ಲು ಖೇನಿ, ರಮೇಶ ಹಡಪದ ಸೇರಿದಮತೆ ಅನೇಕರು ಇದ್ದರು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

41 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago