ಬಿಸಿ ಬಿಸಿ ಸುದ್ದಿ

ಈ ಕರೋನಾ ಹಾವಳಿಯಿಂದಾಗಿ ಜೀವಗಳು ಗಾಳಿಗೆ ದೀಪವಿಟ್ಟಂತಾಗಿದೆ ಯಾವಾಗ(ಪ್ರಾಣ ಪಕ್ಷಿ) ಹಾರಿ ಹೋಗುತ್ತೋ ಗೊತ್ತಿಲ್ಲ.

ಕರೋನಾ ಎಂಬ ಹೆಮ್ಮಾರಿ ಇಂದ್ದಾಗಿ ಯಾರದೋ ತಂದೆ, ತಾಯಿ, ಅಣ್ಣಾ, ತಮ್ಮ, ಅಕ್ಕಾ, ತಂಗಿ ಮನೆಗೆ ಆಧಾರ ಸ್ತಂಬವಾಗಿರುವಂತ ಹಲವರು ಮೃತಪಟ್ಟು ಅವರ ಕುಟುಂಬಗಳು ಬೀದಿಪಾಲಾಗಿವೇ. ಈ ಕರೋನಾ ಎಂಬ ಮಾರಿ ಸಿಕ್ಕ, ಸಿಕ್ಕವರನ್ನು ತನ್ನ ಕಪಿಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಸಾವಿನ ಮನೆಗೆ ದೂಡುತ್ತಿದೆ. ಈ ಹೆಮ್ಮಾರಿಯ ರಣಕೇಕೆಗೆ ಜನರು ನಲುಗಿ ಹೋಗಿದ್ದಾರೆ.

ಆತ್ಮೀಯರು, ಸಂಬಂಧಿಗಳು ಈಗೆ ಹಲವರ ಸರಣಿ ಸಾವಿನ ಸುದ್ಧಿ ಬರ ಸಿಡಿಲಿನಂತೆ ಕಿವಿಗೆ ಅಪ್ಪಳಿಸುತ್ತಿರಲು ಮನುಷ್ಯ ಕುಗ್ಗಿಹೋಗುತ್ತಿದ್ದಾನೆ. ಇದರ ಮಧ್ಯ ಕರೋನಾ ಪಾಸಿಟಿವ್ ಆಗಿ ಮೃತರಾದ ಮನೆಯವರನ್ನು ನೋಡಿದ ಕೂಡಲೇ ಅವರನ್ನ ಅಮಾನವಿಯತೆಯಿಂದ ವರ್ತಿಸುತ್ತಿರುವುದು ಮಾತ್ರ ದುರಾದೃಷ್ಟಕರ ಸಂಗತಿ. ಮಾನವಿಯತೆಯನ್ನು ಮರೆತು ಅವರನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ದುರಂತವೇ ಸರಿ, ಇದರಿಂದಾಗಿ ಹಲವರು ಮತ್ತಷ್ಡು ಕುಗ್ಗಿ ಹೋಗುತ್ತಿದ್ದಾರೆ.

ಅಂತಹವರಿಗೆ ದೈರ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಟೀಕೆ ಟಿಪ್ಪಣಿ ಮಾಡುತ್ತಿರುವುದು ವಿಷಾದದ ಸಂಗತಿ. ಇಂತಹ ಕೆಲವು ಘಟನೆಗಳನ್ನು ಕೇಳಿದಾಗ ಮನಸ್ಸಿಗೆ ತುಂಬಾ ನೋವು ಆಗುತ್ತದೆ. ರೋಗ-ಮರಣ-ಜಗಳ ಇವುಗಳು ಹೇಳಿ ಕೇಳಿ ಇವರಿಗೆ, ಇಂತಹವರಿಗೆ ಬರಬೇಕು ಅಂತಹ ಏನು ಇಲ್ಲ, ಯಾವಾಗಬೇಕಾದರು ಯಾರಿಗೆಬೇಕಾದರು ಬರಬಹುದು. ಏಕೆಂದರೆ ಹುಟ್ಟು ಖಚಿತ ಸಾವು ನಿಶ್ಚಿತ ಇದನ್ನು ಗೊತ್ತಿದ್ದು ಮನುಜ ಇಲ್ಲೇ ಖಾಯಂ ಆಗಿ ಗೊಟಾ ಹೊಡಕೊಂಡು ಕುಂದುರುತಿವಿ ಅನ್ನುವಂಗ್ ಮಾಡತ್ತಾರ. ಇದಕ್ಕೆನೇ ಇರಬೇಕು ೧೨ನೇ ಶತಮಾನದಲ್ಲಿ ಆಗಿ ಹೋದ ಶರಣ ಮುಳಬಾವಿಯ ಸೋಮಣ್ಣ ತನ್ನ ಒಂದು ವಚನದಲ್ಲಿ ಈಗೆ ಹೇಳುತ್ತಾನೆ.

ಆಗಿಲ್ಲದ ಸಿರಿ,
ಆಯುಷ್ಯವಿಲ್ಲದ ಬದುಕು.
ಸುಖವಿಲ್ಲದ ಸಂಸಾರ.
ಎಳತಟೆಗೊಂಬ ಕಾಯದ ಸಂಘ
ಬಳಲಿಸುವ ಜೀವಭಾವ.
ಇವರ ಕಳವಳವಳಿದಲ್ಲದೆ ಮಳುಬಾವಿಯ ಸೋಮನ ತಿಳಿಯಬಾರದು.

ನಮ್ಮನು ನಾವು ಹೇಗೆ ಧೈರ್ಯ ತಂದು ಕೊಳ್ಳಬೇಕು ಎಂದು ಅಕ್ಕನ ಈ ವಚನ ಮತ್ತೆ ಮತ್ತೆ ನನಪಾಗುತ್ತೆ.

ಹೆದರದಿರು ಮನವೆ
ಬೆದರದಿರು ತನುವೆ
ನಿಜವನರಿತು ನಿಶ್ಚಿಂತನಾಗಿರು. ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ
ಎಲವದಮರನ ಇಡುವರೊಬ್ಬರ ಕಾಣೆ. ಭಕ್ತಿಯುಳ್ಳವರ ಬೈವರೊಂದು ಕೋಟಿ
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ. ನಿಮ್ಮ ಶರಣರ ನುಡಿಯೆ ಎನಗೆ ಗತಿ ಸೋಪಾನ
*ಚೆನ್ನಮಲ್ಲಿಕಾರ್ಜುನಾ.

ಅಕ್ಕಮಹಾದೇವಿಯವರ ಈ ವಚನದಂತೆ ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂದರ್ಭವಿರಲಿ ಮನುಜ ಹೆದರದೆ ಆತ್ಮಸ್ತೈರ್ಯವನ್ನು ಕಂಡುಕೊಂಡರೆ ಈ ಕರೋನಾ ಎಂಬ ಸಾಂಕ್ರಾಮಿಕ ರೋಗದಿಂದಲೂ ಆಚೆ ಬರಬಹುದಾಗಿದೆ. ಆದರೆ ಗುಟಾ ಹೊಡೆದುಕೊಂಡು ಕುಂದುರುತಿವಿ ಅನ್ನುವವರು ಕೂಡಾ ಒಂದಿಲ್ಲ ಒಂದೊಮ್ಮೆ ಇಲ್ಲಿಂದ ಜಾಗ ಕಾಲಿಮಾಡಲೇ ಬೇಕು ಇಲ್ಲಿ ಯಾರು ಶಾಶ್ವತವಲ್ಲ ಎಂಬುದನ್ನು ಅರಿತ್ತು ಕೊಳ್ಳಬೇಕಾಗಿದೆ.
* ಸಾಯಿಕುಮಾರ ಇಜೇರಿ
emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

3 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

3 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

3 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

3 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

3 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

3 hours ago