ಪ್ರತಿ ತಿಂಗಳು 2 ಸಾವಿರ ನೆರವು ನೀಡಲು ಕನ್ನಡಪರ ಸಂಘಟನೆಗಳ ಆಗ್ರಹ

ಕಲಬುರಗಿ: ಕಳೆದ ವರ್ಷ ಮಾರ್ಚ 24 ರಂದು ಪ್ರಾರಂಭವಾದ ಕೊರೊನಾ ಮಹಾಮಾರಿ ಭಾರತ ದೇಶದ ಜನರನ್ನು ತತ್ತರಿಸುವಂತೆ ಮಾಡಿದೆ.ಇದರಿಂದಾಗಿ ಜನತಾ ಕಪ್ಯೂ೯ , ಲಾಕ್ ಡೌನ್ ದಿಂದಾಗಿ ಜನರ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಜನತೆಯ ಕಾಪಾಡುವ ಹೊಣೆ ರಾಜ್ಯದ ಮುಖ್ಯಮಂತ್ರಿ ಅವರ ಮೇಲಿದೆ ಎಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮನವಿ ಮಾಡಿದರು.

ರಾಜ್ಯದ ಎಲ್ಲಾ ಸರಕಾರಿ ನೌಕರರಿಗೆ ರಾಜ್ಯ ಸರ್ಕಾರ ವೇತನ ಕಳೆದ ಒಂದು ವರ್ಷದಿಂದ ವೇತನ ನೀಡುತ್ತಿದೆ. ರಾಜ್ಯದಲ್ಲಿ ಕೊರೊನಾ ಮತ್ತು ಲಾಕ್ ಡೌನ್ ದಿಂದಾಗಿ ಬಡ ಮಧ್ಯಮ ವರ್ಗದ ಜನರು, ಅಂಗಡಿಗಳಲ್ಲಿ ಕೆಲಸ ಮಾಡುವವರು, ಟೇಲರಿಂಗ್, ನೇಕಾರರು,ಹಮಾಲಿಗಳು, ಚಮ್ಮಾರರು, ಗ್ಯಾರೆಜ್ ಮತ್ತು ಚಿಕ್ಕಪುಟ್ಟ ವ್ಯಾಪಾರ ಮಾಡುವ ಜನರು, ಚಿತ್ರಮಂದಿರದಲ್ಲಿ ಕೆಲಸ ಮಾಡುವ,‌ ಮನೆಗಳ ಅಡುಗೆ ಕೆಲಸ ಮಾಡುವ ಮಹಿಳೆಯರು, ದೋಬಿಗಳು, ಕ್ಷೌರಿಕರು, ಕುಂಬಾರರು, ಆಟೋ ಚಾಲಕರು, ಸೇರಿದಂತೆ ಸಮುದಾಯದ ಕೆಲಸ ಮಾಡುವ ಜನರು ದಿನನಿತ್ಯ ದುಡಿಮೆಯ ಮೇಲೆ ತಮ್ಮ ಕುಟುಂಬ ನಿರ್ವಹಣೆ ಮಾಡುವ ಕುಟುಂಬಗಳ ಆರ್ಥಿಕ ಪರಿಸ್ಥಿತಿ ತುಂಬಾ ಜನಕವಾಗಿದೆ. ಒಂದು ಒಪ್ಪತ್ತಿನ ತುತ್ತಿಗೂ ಊಟಕ್ಕೂ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಿಗೂ ಸಹ ಆರ್ಥಿಕ ಸಹಾಯ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಯಲ್ಲಿದು ಇದರಿಂದ ಗ್ರಾಮೀಣ ಜನತೆ ಕೈ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ.

ಆದರೆ ಕೆಲವೊಂದು ಮಧ್ಯಮ ವರ್ಗದ ಜನತೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಲು ಆಗದವರು ಇದ್ದಾರೆ ಇದನ್ನು ಗಮನಿಸಬೇಕಾದ ಸಂಗತಿಯಾಗಿದೆ ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಒಬ್ಬರಿಗೆ 10 ಕೆ.ಜಿ. ಅಕ್ಕಿ ಕೊಡುತ್ತಿದ್ದಾರೆ. ಇದನ್ನು ಸ್ವಾಗತಿಸಿದ ಅವರು ಆದರೆ ಕೇವಲ ಅಕ್ಕಿ ಕೊಟ್ಟರೆ ಬಡವರ ಹೊಟ್ಟೆ ತುಂಬುವುದಿಲ್ಲ. ಅದಕ್ಕೆ ಬೇಕಾದ ಗ್ಯಾಸ್, ಇತರೆ ಅಡುಗೆ ಸಾಮಾನುಗಳು ಅವಶಕ ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ತಿಳಿಸುವ ಅಗತ್ಯವಿಲ್ಲ ನೆರೆಯ ಆಂಧ್ರಪ್ರದೇಶ , ತೆಲಂಗಾಣದಲ್ಲಿ‌ ಪ್ರತಿ ಕುಟುಂಬಕ್ಕೆ ಭಾರಿ ಪ್ರಮಾಣದ ಆರ್ಥಿಕ ಸಹಾಯ ಘೋಷಿಸಿವೆ.

ಆದರೆ ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಕೆಲವು ಸಮುದಾಯಗಳಿಗೆ ಆರ್ಥಿಕ ಸಹಾಯ ಘೋಷಿಸಿ ಅದಕ್ಕೆ ಒಂದಿಷ್ಟು ದಾಖಲೆಗಳನ್ನು ಕಡ್ಡಾಯ ಮಾಡಿ ಕೆಲವೇ ಜನರಿಗೆ ಸಹಾಯ ಮಾಡಿರುವುದು ಅನ್ಯಾಯವಾಗಿದೆ. ಕಾರಣ ಮುಖ್ಯಮಂತ್ರಿಗಳು ರಾಜ್ಯದ ದೊಡ್ಡ ಮೊತ್ತದ ಅಭಿವೃದ್ಧಿ ಕೆಲಸ ನಿಂತರು ಪರವಾಗಿಲ್ಲ ರಾಜ್ಯದ ಪ್ರತಿಯೊಂದು ಬಿಪಿಎಲ್ ಕಾರ್ಡ್ ಹೊಂದಿದ ಮತ್ತು ಬಿಪಿಎಲ್ ಇಲ್ಲದೇ ಇರುವ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ರೂ. 2000/ ಗಳನ್ನು 6 ತಿಂಗಳು ತನಕ ಜನಧನ ಖಾತೆ ಸೇರಿದಂತೆ ಪ್ರತಿ ಕುಟುಂಬದ ಬ್ಯಾಂಕ್ ಖಾತೆಗೆ ಜಮಾ ಮಾಡುವ ಘೋಷಣೆ ಮಾಡುವ ಮೂಲಕ ಒಬ್ಬ ಕ್ರಾಂತಿಕಾರಕ ಮುಖ್ಯಮಂತ್ರಿಗಳಾಗಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಾದ ರೈತಪರ, ಬಡವರ ಬಂಧು ಮಾನ್ಯ ಬಿ.ಎಸ್.ಯಡಿಯೂರಪ್ಪ ನವರಲ್ಲಿ ಕಳಕಳಿಯಾಗಿ ವಿನಂತಿಸಿದ್ದಾರೆ.

ಇದು ಕುಟುಂಬಗಳಿಗೆ ಒಪ್ಪತ್ತಿನ ಗಂಜಿಗೆ ಅನುಕೂಲವಾಗುವುದು ಹೊರತು ಈ 2000 ರೂ.ಗಳು ಯಾವುದಕ್ಕೂ ಸಾಲುವುದಿಲ್ಲ. ಇದು ಆದರೆ ದೇಶದ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಯ ಸಹ ಸಹಕರಿಸುತ್ತಿದ್ದಾರೆ. ಈ ಬಡ ಜನರ ಜೀವನ ನಿರ್ವಹಣೆಗೆ ಇದೊಂದು ಚಿಕ್ಕ ಸಹಾಯವಾಗುತ್ತದೆ. ಎಂದು ಮತ್ತೊಮೆ ಅವರು ಸರಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ವಿಭಾಗೀಯ ಅಧ್ಯಕ್ಷರಾದ ನಂದಕುಮಾರ ನಾಗಭುಜಂಗೆ, ಗೌರವ ಅಧ್ಯಕ್ಷರಾದ ಜಗನ್ನಾಥ ಸೂರ್ಯವಂಶಿ, ಅಮೃತ ಪಾಟೀಲ, ಮಲ್ಲಿಕಾರ್ಜುನ ಸಾರವಾಡ, ಗೋಪಾಲ ನಾಟೀಕಾರ, ದತ್ತು ಭಾಸಗಿ, ಮನೋಹರ ಬೀರನೂರ, ಶಿವಲಿಂಗ ಹಳಿಮನಿ, ಸಂದೀಪ ಭರಣಿ, ಆನಂದ ತೆಗನೂರ, ರವಿ ದೇಗಾಂವ, ದಿನೇಶ ನಾಯಕ,ಪ್ರದೀಪ್ ಬಾಚನಳ್ಳಿ , ಮಲ್ಲಿಕಾರ್ಜುನ ಎಸ್ ಸರಡಗಿ, ಶರಣು ಬಡಿಗೇರ ಇದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

2 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

3 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

5 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

16 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

18 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

18 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420