ಶಹಾಪುರ: ತಿವೃ ಜಿದ್ದಾ ಜಿದ್ದಿನ ನಡುವೆ ರಸ್ತಾಪುರ ಗ್ರಾ.ಪಂ. ಗೆ ನೂತನ ಅಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡುವದರ ಮುಖಾಂತರ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದ ಶ್ರೀಮತಿ ಮಾಳಮ್ಮ ಗಂಡ ಗೊಪಾಲಪ್ಪ ಅವರನ್ನು ಸರ್ವಾನುಮತದಿಂದ ಗ್ರಾ.ಪಂ. ನೂತನ ಅಧ್ಯಕ್ಷರೆಂದು ತಹಿಸಲ್ದಾರಾದ ಸಂಗಮೇಶ ಜಿಡಗೆಯವರು ಘೋಷಣೆ ಮಾಡಿದರು.
ರಸ್ತಾಪುರ ಗ್ರಾ.ಪಂ. ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮಿಸಲಾಗಿದ್ದು ಅಂದು ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತ ಅದ್ಯಕ್ಷರಾಗಿ ಶ್ರೀಮತಿ ಅಯ್ಯಮ್ಮ ಪೂಜಾರಿಯವರು ಕಳೆದ ಅರ್ಧ ಅವಧಿವರೆಗೂ ಅಧಿಕಾರ ಚುಕ್ಕಾಣಿಯಲ್ಲಿದ್ದರು. ಪ್ರಗತಿಯಲ್ಲಿ ಅಸಮಧಾನದ ಅಲೆಯನ್ನೆಬ್ಬಸಿದ ಗ್ರಾ.ಪಂ. ಆಡಳಿತ ಸದಸ್ಯರು ಕಳೆದ ಮಾ.೨೬ರಂದು ಯಾದಗಿರಿ ಸಹಾಯಕ ಆಯುಕ್ತರ ಸಮಕ್ಷದಲ್ಲಿ ಅವಿಶ್ವಾಸ ನಿಲುವಳಿ ಮಂಡಿಸಿದ್ದರು. ಈ ಸಂಭಂಧ ಬಿಜೆಪಿ ಬೆಂಬಲಿತರಾಗಿದ್ದ ಅಯ್ಯಮ್ಮನವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.ತೆರವಾದ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ಚುನಾವಣೆ ದಿನಾಂಕ ನಿಗದಿಯಂತೆ ಸರ್ವ ಸದಸ್ಯರ ಸಭೆ ಜರುಗಿತು.
ತಹಿಲದಾರವರ ಅಧ್ಯಕ್ಷ್ಷತೆಯಲ್ಲಿ ನೆಡೆದ ಈ ಸಭೆಯಲ್ಲಿ ರಸ್ತಾಪುರ ಗ್ರಾ.ಪಂ. ಒಟ್ಟು ಬಲಾಬಲ ಸದಸ್ಯರ ಸಂಖ್ಯೆ ೨೪ ಇದ್ದು ನಿನ್ನೆ ಸಭೆಯಲ್ಲಿ ೨೧ ಜನರು ಅಧ್ಯಕ್ಷರ ಆಯ್ಕೆ ಪ್ರಕ್ರೀಯಲ್ಲಿ ಪಾಲ್ಗೊಂಡು ಒಮ್ಮತ್ತ ಸೂಚಿಸಿದರು. ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ದ ತಹಿಸಿಲ್ದಾರವರು ನೂತನ ಅಧ್ಯಕ್ಷರ ಹೆಸರನ್ನು ಅವರೋಧವೆಂದು ಘೋಷಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರು ಗ್ರಾಮಾಭಿವೃದ್ದಿಗೆ ಹೆಚ್ಚು ಅವಕಾಶ ನಿಡುವದಾಗಿ ಅವರು ತಿಳಿಸಿದರು.
ಅಲ್ಲದೆ ಕಾಂಗ್ರೆಸ್ ಹಿರಿಯ ದುರೀಣರಾ ಬಸವರಾಜಪ್ಪಗೌಡ ದರ್ಶನಾಪುರ ಮತ್ತು ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರವರ ಸೂಕ್ತ ಮಾರ್ಗದರ್ಶನದಲ್ಲಿ ರಸ್ತಾಪುರ ಗ್ರಾ.ಪಂ. ಅಧ್ಯಕ್ಷರಾಗಿ ನಿಯಮಗಳನುಸಾರ ಅಧಿಕಾರ ಆಡಳಿತ ಮಾಡುವದಾಗಿ ಅವರು ವಿವರಿಸಿದರು. ಈ ಸಮಯದಲ್ಲಿ ಸಿಪಿಐ ನಾಗರಾಜ ಜೆ.ಯವರು ಹಾಗೂ ಮುಖಂಡರಾದ ಶರಬಣ್ಣಗೌಡ ಪಾಟೀಲ್. ನಾಗಣ್ಣಗೌಡ ಪಾಟೀಲ್. ತಾ.ಪಂ. ಸದಸ್ಯರಾದ ನಾಗಣ್ಣ ಪೂಜಾರಿ. ವಿಎಸ್.ಎಸ್.ಎನ್. ಉಪಾಧ್ಯಕ್ಷರಾದ ಬಸವರಾಜ ಬ್ಯಾಲಾಳ ಭಿಮಕವಿ. ಟಣಕೆದಾರ. ಶರಬಣ್ಣ ಗುರುನಂದಣ್ಣ ಸೇರಿದಂತೆ ಅನೇಕ ಗಣ್ಯರು ಗ್ರಾಮದ ಮುಖಂಡರು ಅಭಿಮಾನಿಗಳು ಹಿತೈಸಿಗರು ಅಭಿವೃದ್ದಿ ಅಧಿಕಾರಿಗಳು. ಗ್ರಾ.ಪಂ. ಸಿಬ್ಬಂದಿಯವರು ಹಾಜರಿದ್ದರು.
ಕಲಬುರಗಿ: ಡಿ.3 ವಿಕಲಚೇತನರನ್ನು ಇತರರಂತೆ ಕಾಣಬೇಕು. ಅನುಕಂಪಕ್ಕೆ ಸೀಮಿತವಾಗಿಸದೆ ಅವರಿಗೆ ಅವಕಾಶ ನೀಡಿ ಸಬಲರನ್ನಾಗಿಸುವ ಜವಾಬ್ದಾರಿ ಸಮಾಜದ ಮೇಲಿದೆ…
ಕಲಬುರಗಿ: ಇಂದು ಪ್ರಗತಿ ಕಾಲೋನಿಯ ಬಸವರಾಜ್ ಮಗಲಿ ಅವರ ಮಗಳು ಕುಮಾರಿ ಸ್ವಾತಿ 20 ವರ್ಷದಿಂದ ಅಂಗವಿಕಲತೆಯಿಂದ ಬಳಲುತ್ತಿದ್ದು ಆಕೆ…
ಕಲಬುರಗಿ: ಇಂದಿನ ಯುಗದಲ್ಲಿ ಎಲ್ಲರೂ ವಾಹನ ಹೊಂದಿದ್ದಾರೆ. ರಸ್ತೆಯಲ್ಲಿ ನಿಧಾನವಾಗಿ, ವಿವೇಕದೊಂದಿಗೆ ವಾಹನ ಚಾಲನೆ ಮಾಡಬೇಕು. ವಾಹನ ಸವಾರರ ತಪ್ಪಿನಿಂದ…
ಕಲಬುರಗಿ: ಸೇವಾನಿವೃತ್ತಿಯ ದಿನ ತನ್ನ ದೇಹ ಮತ್ತು ನೇತ್ರವನ್ನು ದಾನ ಮಾಡಿದ ಕೆ ಎಸ್ ಆರ್ ಪಿ ಕಲಬುರಗಿ ಘಟಕದ…
ಕಲಬುರಗಿ; ಇಂದು ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮೂಡ್ ರವರಿಗೆ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಮನವಿಪತ್ರ ವನ್ನು ಸಲ್ಲಿಸಲಾಯಿತು.…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್…