ಬಿಸಿ ಬಿಸಿ ಸುದ್ದಿ

ತೈಲ ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿದ್ದಾರೆ: ಆರ್.ವಿ.ನಾಯಕ

ಸುರಪುರ: ತೈಲ ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿದ್ದು ಕೇಂದ್ರ ಸರಕಾರದ ವಿರುದ್ಧ ಬೇಸತ್ತಿದ್ದಾರೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ೧೦೦ ನಾಟೌಟ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ನರೇಂದ್ರ ಮೋದಿ ಮತ್ತು ಬಿಜೆಪಿಯವರು ಜನರ ತೆರಿಗೆ ಹಣವನ್ನು ತಮ್ಮ ಸ್ವಂತಕ್ಕೆ ಬಳಸುತ್ತಿದ್ದಾರೆ.ಅಲ್ಲದೆ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಮೂರ್ತಿ ನಿರ್ಮಿಸುವುದು,ಪ್ರಧಾನಿ ಮನೆ ನಿರ್ಮಿಸುವುದು ಮತ್ತು ಸ್ವಂತಕ್ಕೆ ವಿಮಾನವನ್ನೆ ಇಟ್ಟುಕೊಳ್ಳುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ ಮಾಜಿ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದೇಶದ ಜನರು ನಿತ್ಯವು ತೊಂದರೆ ಪಡುವಂತೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾರ್ಶ್ವವಾಯುನಿಂದ ನರಳುತ್ತಿದ್ದ ಶೆಳ್ಳಗಿ ವಿದ್ಯಾರ್ಥಿಗೆ ರಾಜುಗೌಡ ಸೇವಾ ಸಮಿತಿ ನೆರವು

ಇದೇ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಮಾತನಾಡಿ,ಬಿಜೆಪಿ ಸರಕಾರದ ದುರಾಡಳಿತ ಮಿತಿಮೀರಿದೆ ದೇಶದಲ್ಲಿನ ಜನರಿಗೆ ಸರಕಾರದ ವಿರುಧ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಜನರಿಗೆ ನೆರವು ನೀಡಲು ಆರ್ಥಿಕ ತೊಂದರೆ ನೆಪ ಹೇಳುವ ಬಿಜೆಪಿಗೆ ಕೋಟಿ ಕೋಟಿ ಖರ್ಚು ಮಾಡಿ ಚುನಾವಣೆ ಮಾಡಲು ಹಣದ ತೊಂದರೆಯಾಗುವುದಿಲ್ಲ,ಜನರಿಗೆ ನೆರವಾಗಲು ಹಣಕಾಸಿನ ತೊಂದರೆ ಎನ್ನುತ್ತಾರೆ ಹೀಗೆ ಹೋದಲ್ಲಿ ಮುಂದೆ ಬಿಜೆಪಿ ಶೂನ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಬಾಚಿಮಟ್ಟಿ ಹಾಗು ಅಬ್ದುಲ ಅಲೀಂ ಗೋಗಿ ಮಾತನಾಡಿದರು. ಇದಕ್ಕೂ ಮುನ್ನ ಕುಂಬಾರಪೇಟೆ ಎಪಿಎಮ್‌ಸಿ ಬಳಿಯ ವಾಸುದೇವ ನಾಯಕ ಪೆಟ್ರೋಲ್ ಬಂಕ್ ಬಳಿಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವೆಂಕೋಬ ಯಾದವ ಕಾಂಗ್ರೆಸ್ ಹಿರಿಯ ಮುಖಂಡರು, ಶ್ರೀ ವಿಠಲ್ ಯಾದವ, ರಾಜಾ ವಾಸುದೇವ ನಾಯಕ, ರಾಜಾ ಸಂತೋಷ ನಾಯಕ, ಸೋಮನಾಥ ಡೋಣ್ಣಿಗೇರಿ,ಅಬ್ದುಲ್ ಗಫರ್ ನಗನೂರಿ, ಶೇಖ್ ಮಹಿಬೂಬ ಒಂಟಿ, ಖಮರುದ್ದಿನ, ನಾಸೀರ್ ಕುಂಡಾಲೆ, ಧರ್ಮರಾಜ , ಮಲ್ಲಣ್ಣ ಸಾಹು, ವೆಂಟೇಶ ಹೊಸಮನಿ, ಶರಣಪ್ಪ ಕಳ್ಳಿಮನಿ, ರಾಜಾ ಕೃಷ್ಣದೇವರಾನಾಯಕ, ಗೋಪಾಲ ದಾಸ್ ಲಡ್ಡ, ಮಹಿಬೂಬ,ಜುಮ್ಮಣ್ಣ, ವೆಂಕಟರಡ್ಡಿ ಬೋವಿಗಲ್ಲಿ, ಮನೋಹರ ಕುಂಟೋಜಿ ನ್ಯಾಯವಾದಿಗಳು, ಭೀಮುನಾಯ್ಕ ಮಲ್ಲಿಭಾವಿ, ಧಾವುದ ಪಠಾಣ, ನಿಂಗಣ್ಣ ಐಕೂರ, ಪ್ರಶಾಂತ ಸಾಹು ಮುದ್ನೂರ, ವೆಂಟಕೇಶ ನಾಯಕ ಸತ್ಯಂಪೇಟ, ನಾಗಪ್ಪ ಕಟ್ಟಿಮನಿ, ಅಬೀದ ಹುಸೇನ್, ಶೇಖರಾಜ ಮೊಹ್ಮದ, ಮಲ್ಲಣ್ಣ ಹುಬ್ಳಿ, ಹಣಮಂತ ಕಟ್ಟಿಮನಿ, ಆರ್.ಎಮ್ ಕುಲಕರ್ಣಿ, ವೆಂಕಟೇಶ ನಾಯಕ ವಕೀಲರು, ಪ್ರಶಾಂತ ಉಗ್ರಂ ಬಸವರಾಜ ಹಡಪದ ಇತರರು ಭಾಗಿಯಾಗಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

7 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

8 hours ago