ಬಿಸಿ ಬಿಸಿ ಸುದ್ದಿ

ಕಳಪೆ ರಸ್ತೆ ಕಾಮಗಾರಿ: ಸ್ಥಳ ಪರಿಶೀಲಿಸಿ ಬಿಲ್ ಮಾಡುವಂತೆ ಶ್ರೀನಿವಾಸರಾಜು ಮನವಿ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರದಿಂದ ಚಿಮ್ಮನಚೊಡ ತಾಂಡಾ ಕ್ರಾಸ್ ವರೆಗೆ ಸುಮಾರು 5.79 ಕಿ.ಮೀ ಕೈಗೊಂಡ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣದ ಕಾಮಗಾರಿ ಮತ್ತು ಚಿಂಚೋಳಿ ತಾಲೂಕಿನ ಸೇರಿ ಕ್ರಾಸ್‍ನಿಂದ ತಾಲೂಕಾ ಗಡಿವರೆಗೆ ಕೈಗೊಮಡ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣದ ಕಳಪೆ ಕಾಮಗಾರಿ ಮತ್ತು ಯೋಜನಾ ನಿಯಮಗಳಿಗೆ ವಿರುದ್ಧವಾಗಿ ಕೈಗೊಂಡ ಕಾಮಗಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಯುವ ಸೈನ್ಯಯು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಂಜೀನಿಯರಿಂಗನ ಮುಖ್ಯ ಕಾರ್ಯನಿರ್ವಾಹಕ ಅಭೀಯಂತರರಿಗೆ ಹಾಗೂ ಸೇಡಂ ಮುಖ್ಯ ಕಾರ್ಯನಿರ್ವಾಹಕರಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ ರಾಜು ಡೊಣ್ಣೆಗೇರಿ ಅವರು ತಿಳಿಸಿದ್ದರು.

ಗ್ರಾಮೀಣಾಭಿವೃದ್ದಿ ಸಚಿವಾಲಯ ಭಾರತ ಸರಕಾರ ಅನುದಾನಿತ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ ಒಟ್ಟು ಅಂದಾಜು 12 ಕೋಟಿ ಅನುದಾನದಲ್ಲಿ ಕೈಗೊಂಡ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿಯು ಅತ್ಯಂತ ಕಳಪೆಮಟ್ಟದಾಗಿದ್ದು, ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಯ ಉದ್ದಗಲಕ್ಕೂ ಯಾವುದೇ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿರುವುದಿಲ್ಲ ಮತ್ತು ಕಾಮಗಾರಿ ಸ್ಥಳದಲ್ಲಿ ಹಾಕಿದ ಬೋರ್ಡ್‍ನಲ್ಲಿ ವಿವರಿಸಿದಂತೆ ರಸ್ತೆಯ ಮಾದರಿ ಸೀಳು ನೋಟ ಮತ್ತು ಕೈಗೊಂಡ ಕಾಮಗಾರಿಯು ತದ್ವಿರುದ್ದವಾಗಿರುತ್ತದೆ ಎಂದು ಆರೋಪಿಸಿದರು.

ಯೋಜನೆ ಮಾದರಿ ಸೀಳು ನೋಟದಲ್ಲಿ ತೋರಿಸಿದಂತೆ ಯಾವುದೇ ಕಾಮಗಾರಿ ಆಗಿರುವುದಿಲ್ಲ. ಕೇವಲ ಈಗಾಗಲೇ ಇರುವ ರಸ್ತೆಯ ಮೇಲೆ 20 ಎಂ.ಎಂ. ಡಾಂಬರೀಕರಣ ಮಾತ್ರ ಆಗಿರುತ್ತದೆ. ಒಟ್ಟಾರೆಯಾಗಿ ಸದರಿ ಕಾಮಗಾರಿಗಳು ನಿಯಮ ಪ್ರಕಾರ ಆಗದೇ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಸದರಿ ಕಾಮಗಾರಿಯ ಬಿಲ್ ಎತ್ತುವಲ್ಲಿ ನಿರತರಾಗಿದ್ದಾರೆ .ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸ್ಥಳವನ್ನು ಮಹಜರ್ ಮಾಡಿ, ಕಾಮಗಾರಿಯು ಯಾವ ಮಟ್ಟದಾಗಿರುತ್ತದೆ ಎಂದು ಪರಿಶೀಲಿಸಿದ ನಂತರವೇ ಬಿಲ್ ಮಾಡುವಂತೆ ಮನವಿ ಮಾಡಲಾಯಿತು.

ಎಲ್ಲಾ ಮಾಹಿತಿಗಳಿಂದ ಸದರಿ ಅಧಿಕಾರಿಗಳು ನಿಯಮಗಳನ್ನು ಪಾಲಿಸದೇ ಕಾಮಗಾರಿ ಕೈಗೊಂಡಿದ್ದು, ಮತ್ತು ಕಳಪೆ ಮಟ್ಟದ ಕಾಮಗಾರಿ ಮಾಡಿರುವ ಸದರಿ ಅಧಿಕಾರಿಗಳ ವಿರುದ್ಧ ಕ್ರಿಮೀನಲ್ ಮೊಕ್ಕದ್ದಮೆ ಹೂಡಿ, ಸದರಿ ಅಧಿಕಾರಿಗಳನ್ನು ವಜಾಗೊಳಿಸಬೇಕು ಹಾಗೂ ಸದರಿ ಗುತ್ತಿಗೆದಾರರ ಲೈಸನ್ಸ್‍ನ್ನು ರದ್ದುಗೊಳಿಸಿ ಇವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಲಾಯಿತು ಎಂದು ತಿಳಿಸಿದರು.

ದಾಖಲಾತಿಗಳ ಆಧಾರದ ಮೇಲೆ ಮುಲ್ಲಾಜಿಲ್ಲದೇ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಏಳು ದಿನಗಳಲ್ಲಿ ಈ ಸೂಕ್ತ ಕ್ರಮ ಜರುಗಿಸದೇ ಹೋದಲ್ಲಿ ಮತ್ತು ವಿಳಂಬ ನೀತಿ ಅನುಸರಿಸಿದರೆ ಭಾರತೀಯ ಯುವ ಸೈನ್ಯದ ವತಿಯಿಂದ ಉಗ್ರಸ್ವರೂಪದ ಹೋರಾಟವನ್ನು ಹಮ್ಮಿಕೋಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ಎಂದು ಶ್ರೀನಿವಾಸ ರಾಜು ಡೊಣ್ಣೆಗೇರಿ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸುರಪೂರಕರ್, ಅಂಬು ಮಸ್ಕಿ, ಅಂಬರೀಶ ಗುತ್ತೇದಾರ, ದೀಲಿಪ ಮೇತ್ರೆ, ಚಂದ್ರು, ರೋಮಿಯೋ ಕಾಳೆ, ಚರಣ ಉಪಾಧ್ಯಾಯ ಸೇರಿದಂತೆ ಇನ್ನಿತರರು ಇದ್ದರು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

18 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago