ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರದಿಂದ ಚಿಮ್ಮನಚೊಡ ತಾಂಡಾ ಕ್ರಾಸ್ ವರೆಗೆ ಸುಮಾರು 5.79 ಕಿ.ಮೀ ಕೈಗೊಂಡ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣದ ಕಾಮಗಾರಿ ಮತ್ತು ಚಿಂಚೋಳಿ ತಾಲೂಕಿನ ಸೇರಿ ಕ್ರಾಸ್‍ನಿಂದ ತಾಲೂಕಾ ಗಡಿವರೆಗೆ ಕೈಗೊಮಡ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣದ ಕಳಪೆ ಕಾಮಗಾರಿ ಮತ್ತು ಯೋಜನಾ ನಿಯಮಗಳಿಗೆ ವಿರುದ್ಧವಾಗಿ ಕೈಗೊಂಡ ಕಾಮಗಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಯುವ ಸೈನ್ಯಯು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಂಜೀನಿಯರಿಂಗನ ಮುಖ್ಯ ಕಾರ್ಯನಿರ್ವಾಹಕ ಅಭೀಯಂತರರಿಗೆ ಹಾಗೂ ಸೇಡಂ ಮುಖ್ಯ ಕಾರ್ಯನಿರ್ವಾಹಕರಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ ರಾಜು ಡೊಣ್ಣೆಗೇರಿ ಅವರು ತಿಳಿಸಿದ್ದರು.
ಗ್ರಾಮೀಣಾಭಿವೃದ್ದಿ ಸಚಿವಾಲಯ ಭಾರತ ಸರಕಾರ ಅನುದಾನಿತ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ ಒಟ್ಟು ಅಂದಾಜು 12 ಕೋಟಿ ಅನುದಾನದಲ್ಲಿ ಕೈಗೊಂಡ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿಯು ಅತ್ಯಂತ ಕಳಪೆಮಟ್ಟದಾಗಿದ್ದು, ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಯ ಉದ್ದಗಲಕ್ಕೂ ಯಾವುದೇ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿರುವುದಿಲ್ಲ ಮತ್ತು ಕಾಮಗಾರಿ ಸ್ಥಳದಲ್ಲಿ ಹಾಕಿದ ಬೋರ್ಡ್‍ನಲ್ಲಿ ವಿವರಿಸಿದಂತೆ ರಸ್ತೆಯ ಮಾದರಿ ಸೀಳು ನೋಟ ಮತ್ತು ಕೈಗೊಂಡ ಕಾಮಗಾರಿಯು ತದ್ವಿರುದ್ದವಾಗಿರುತ್ತದೆ ಎಂದು ಆರೋಪಿಸಿದರು.
ಯೋಜನೆ ಮಾದರಿ ಸೀಳು ನೋಟದಲ್ಲಿ ತೋರಿಸಿದಂತೆ ಯಾವುದೇ ಕಾಮಗಾರಿ ಆಗಿರುವುದಿಲ್ಲ. ಕೇವಲ ಈಗಾಗಲೇ ಇರುವ ರಸ್ತೆಯ ಮೇಲೆ 20 ಎಂ.ಎಂ. ಡಾಂಬರೀಕರಣ ಮಾತ್ರ ಆಗಿರುತ್ತದೆ. ಒಟ್ಟಾರೆಯಾಗಿ ಸದರಿ ಕಾಮಗಾರಿಗಳು ನಿಯಮ ಪ್ರಕಾರ ಆಗದೇ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಸದರಿ ಕಾಮಗಾರಿಯ ಬಿಲ್ ಎತ್ತುವಲ್ಲಿ ನಿರತರಾಗಿದ್ದಾರೆ .ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸ್ಥಳವನ್ನು ಮಹಜರ್ ಮಾಡಿ, ಕಾಮಗಾರಿಯು ಯಾವ ಮಟ್ಟದಾಗಿರುತ್ತದೆ ಎಂದು ಪರಿಶೀಲಿಸಿದ ನಂತರವೇ ಬಿಲ್ ಮಾಡುವಂತೆ ಮನವಿ ಮಾಡಲಾಯಿತು.
ಎಲ್ಲಾ ಮಾಹಿತಿಗಳಿಂದ ಸದರಿ ಅಧಿಕಾರಿಗಳು ನಿಯಮಗಳನ್ನು ಪಾಲಿಸದೇ ಕಾಮಗಾರಿ ಕೈಗೊಂಡಿದ್ದು, ಮತ್ತು ಕಳಪೆ ಮಟ್ಟದ ಕಾಮಗಾರಿ ಮಾಡಿರುವ ಸದರಿ ಅಧಿಕಾರಿಗಳ ವಿರುದ್ಧ ಕ್ರಿಮೀನಲ್ ಮೊಕ್ಕದ್ದಮೆ ಹೂಡಿ, ಸದರಿ ಅಧಿಕಾರಿಗಳನ್ನು ವಜಾಗೊಳಿಸಬೇಕು ಹಾಗೂ ಸದರಿ ಗುತ್ತಿಗೆದಾರರ ಲೈಸನ್ಸ್‍ನ್ನು ರದ್ದುಗೊಳಿಸಿ ಇವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಲಾಯಿತು ಎಂದು ತಿಳಿಸಿದರು.
ದಾಖಲಾತಿಗಳ ಆಧಾರದ ಮೇಲೆ ಮುಲ್ಲಾಜಿಲ್ಲದೇ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಏಳು ದಿನಗಳಲ್ಲಿ ಈ ಸೂಕ್ತ ಕ್ರಮ ಜರುಗಿಸದೇ ಹೋದಲ್ಲಿ ಮತ್ತು ವಿಳಂಬ ನೀತಿ ಅನುಸರಿಸಿದರೆ ಭಾರತೀಯ ಯುವ ಸೈನ್ಯದ ವತಿಯಿಂದ ಉಗ್ರಸ್ವರೂಪದ ಹೋರಾಟವನ್ನು ಹಮ್ಮಿಕೋಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಎಂದು ಶ್ರೀನಿವಾಸ ರಾಜು ಡೊಣ್ಣೆಗೇರಿ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸುರಪೂರಕರ್, ಅಂಬು ಮಸ್ಕಿ, ಅಂಬರೀಶ ಗುತ್ತೇದಾರ, ದೀಲಿಪ ಮೇತ್ರೆ, ಚಂದ್ರು, ರೋಮಿಯೋ ಕಾಳೆ, ಚರಣ ಉಪಾಧ್ಯಾಯ ಸೇರಿದಂತೆ ಇನ್ನಿತರರು ಇದ್ದರು.