ಹೈದರಾಬಾದ್ ಕರ್ನಾಟಕ

ಕಡಕೋಳ ಮಡಿವಾಳಪ್ಪ ಈ ಭಾಗದ ಬಹುದೊಡ್ಡ ಬಂಡಾಯಕಾರ: ಪ್ರೊ.ಎಸ್.ಪಿ. ಮೇಲ್ಕೇರಿ

ಕಲಬುರಗಿ: ಶರಣರು ನಡೆದಾಡಿದ ನೆಲದಲ್ಲಿ ಇನ್ನು ಜಾತಿಯತೆ ತಾಂಡವಾಡುತ್ತಿರುವುದು ಖೇದಕರ ಎಂದು ಗುಲಬರ್ಗಾ ವಿಶ್ವವಿದ್ಶಾಲಯದ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೆರಿ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಆಕಾಡೆಮಿ ಬೆಂಗಳೂರು ಮತ್ತು ಕನ್ನಡ ಅಧ್ಶಯನ ಸಂಸ್ಥೆ ಸುವರ್ಣ ಸಂಭ್ರಮ ಹಾಗೂ ಗುಲಬರ್ಗಾ ವಿಶ್ವವಿದ್ಶಾಲಯ ಕಲಬುರಗಿ ಸಂಯುಕ್ತಾಶ್ರಯದಲ್ಲಿ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಜೀವನ ಸಾಧನೆ ಕುರಿತು ಬುಧವಾರ ಏರ್ಪಡಿಸಿದ್ದ ರಾಜ್ಶಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಡಕೋಳ ಮಡಿವಾಳಪ್ಪನವರದ್ದು ನಿರ್ಭೀತ ವ್ಶಕ್ತಿತ್ವ. ಸಮಾಜದಲ್ಲಿರುವ ಜಾತಿˌ ಉಚ್ಛˌ ನೀಚˌ ಅಸ್ರ್ಪಶ್ಶತೆ ಕುರಿತು ಅನೇಕ ತತ್ವಪದಗಳನ್ನು ರಚಿಸಿದ್ದಾರೆ. ಪ್ರಜ್ಞಾವಂತ ಸಮಾಜ ನಿರ್ಮಿಸಲು ಶ್ರಮಿಸಿದ ಮಡಿವಾಳಪ್ಪನವರನ್ನು ಓದುವುದು ಇಂದಿನ ಅಗತ್ಶವಾಗಿದೆ. ಸಮಾಜದ ಗರ್ಭದಲ್ಲಿರುವ ಅಂಧಕಾರವನ್ನು ಹೋಗಲಾಡಿಸಲು ತತ್ವಪದಗಳ ಮೂಲಕ ಶ್ರಮಿಸಿದ ಬಂಡಾಯಕಾರ ಕಡಕೋಳ ಮಡಿವಾಳಪ್ಪ ಎಂದರು.

ನಂತರ ಮಾತನಾಡಿದ ರಾಜ್ಶ ಜಾನಪದ ಅಕಾಡೆಮಿ ಅಧ್ಶಕ್ಷ ಬಿ.ಟಾಕಪ್ಪˌ ಹೈದ್ರಾಬಾದ ಕರ್ನಾಟಕದಲ್ಲಿ ಹಲವಾರು ಕಾರ್ಯಕ್ರಮ ಮಾಡಲಾಗಿದೆ. ಈ ಭಾಗದಲ್ಲಿ ಬುಡಕಟ್ಟುˌ ಶೋಷಿತˌ ತೀರ ಹಿಂದುಳಿದ ವರ್ಗದ 10 ಸಂಶೋಧನಾ ವಿದ್ಶಾರ್ಥಿಗಳಿಗೆ ತಲಾ 1 ಲಕ್ಷ ರೂ. ನೀಡಲಾಗುವುದು ಎಂದರು. ಕನ್ನಡ ಅಧ್ಶಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿˌ ಈ ಭಾಗದ ಶರಣರ ವಿಚಾರಗಳಿಗೆ ಪ್ರಚಾರ ಕಡಿಮೆ ಸಿಗುತ್ತಿದೆ. ಬಸವಕಲ್ಶಾಣದ ಬಸವೇಶ್ವರ ಕೊಡೆಕಲ್ ಬಸವೇಶ್ವರˌ ಕಡಕೋಳ ಮಡಿವಾಳಪ್ಪ ಇವರು ಈ ಭಾಗದ ಸಾಂಸ್ರ್ಕತಿಕ ರಾಯಬಾರಿಗಳು ಎಂದರು. ಅಲ್ಲದೆ ಕನ್ನಡ ವಿಭಾಗದಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಲಾಗುತ್ತಿದೆ ಎಂದರು.

ಪ್ರೊ.ಮೀನಾಕ್ಷಿ ಬಾಳಿ ಆಶಯ ನುಡಿ ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ ಕುಲಸಚಿವ ಸಿದ್ರಾಮ ಸಿಂಧೆˌ ಸದಸ್ಶರುಗಳಾದ ಪ್ರಕಾಶ ಅಂಗಡಿˌ ವಿಜಯಕುಮಾರ ಸೋನಾರೆˌ ಕನ್ನಡ ಮತ್ತು ನಿರ್ದೇಶಕ ಬಸವರಾಜ ಹೂಗಾರˌ ಸಿಪಿಐ ಜ್ಶೋತಿರ್ಲಿಂಗˌ ಡಾ.ಸುರ್ಯಕಾಂತ ಸುಜ್ಶಾತˌ ಡಾ.ಎಂ.ಬಿ.ಕಟ್ಟಿˌ ಡಾ.ಸಂತೋಷ ಕಂಬಾರ ಸೇರಿದಂತೆ ಇತರರು ಇದ್ದರು. ಮಹಾಂತೇಶ ನಾಡಗೀತೆ ಹಾಡಿ ಸ್ವಾಗತಿಸಿದರು. ಡಾ. ಹಣಮಂತ ಮೇಲಕೇರಿ ನಿರೂಪಿಸಿದರು. ಡಾ. ಶಿವಪುತ್ರ ವಂದಿಸಿದರು. ಶ್ರೀಶೈಲ್ ನಾಗರಾಳˌ ಅಮ್ರತಾ ಕಟಕೆ ಸೇರಿದಂತೆ ಅನೇಕರು ಪ್ರಬಂಧ ಮಂಡಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago