ಬಿಸಿ ಬಿಸಿ ಸುದ್ದಿ

ಕಲ್ಯಾಣಕ್ಕಾಗಿ ಕಾಲಮಿತಿಯ ಕಾರ್ಯಾಚರಣೆಗೆ ನೂತನ ಮುಖ್ಯಮಂತ್ರಿಗಳಿಗೆ ಅಗ್ರಹ

ಕಲಬುರಗಿ : ಕಲ್ಯಾಣ ಕರ್ನಾಟಕದ ಕಲ್ಯಾಣದ ಕುರಿತು ಕಲ್ಯಾಣ ಕರ್ನಾಟಕ ಜನಪರ ಸಂಫ? ಸಮಿತಿಯ ಮಹತ್ವದ ಸಭೆ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಬಲವಾದ ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾರಣ ಕಲ್ಯಾಣ ಕರ್ನಾಟಕಕ್ಕೆ ನಿರಂತರ ನಿರ್ಲಕ್ಷತನ ಮಲತಾಯಿ ಧೋರಣೆ ನಡೆದಿದೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದವರಾಗಿದ್ದು, ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಎಲ್ಲಾ ರೀತಿಯಿಂದಲೂ ತಿಳಿದವರಾಗಿದ್ದಾರೆ, ಕಳೆದ ಹತ್ತು ವ?ಗಳಹಿಂದೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ, ಪ್ರಾದೇಶಿಕ ಅಸಮಾನತೆಯ ನಿವಾರಣೆಯಾಗದೆ ಅಖಂಡ ಕರ್ನಾಟಕದ ಪೂರ್ಣ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂಬ ವಾಸ್ತವಿಕ ಸತ್ಯ ಹೇಳಿದರು. ಈಗ ಅವರೆ ಮುಖ್ಯಮಂತ್ರಿ ಗಳಾಗಿರುವದರಿಂದ ಕಲ್ಯಾಣ ಕರ್ನಾಟಕದ ಪ್ರಗತಿಗೆ ಕಾಲಮಿತಿಯ ಕಾರ್ಯಾಚರಣೆ ರೂಪದ ಕ್ರಮ ಕೈಗೊಳ್ಳುಲು ಸಮಿತಿ ಒತ್ತಾಯಿಸಿದೆ.

ಸಭೆಯಲ್ಲಿ ಪ್ರಸ್ತುತ ದಿನಗಳಲ್ಲಿ ತುರ್ತಾಗಿ ಈ ಡೇಸಬೇಕಾದ ಬೇಡಿಕೆಗಳಿಗೆ ವಿಶೇ? ಆದ್ಯತೆ ನೀಡಿ ತಕ್ಷಣ ಸ್ಪಂದಿಸಿ ಈಡೇಸಲು ನೂತನ ಮುಖ್ಯಮಂತ್ರಿಗಳಿಗೆ ಸಮಿತಿ ಅಗ್ರಹಿಸಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ತಲಾ ಒಂದು ಮಂತ್ರಿ ಸ್ಥಾನ ಸೇರಿದಂತೆ ಕಲ್ಯಾಣ ಕರ್ನಾಟಕದ ಎಂಟು ಮಂತ್ರಿ ಸ್ಥಾನಗಳು ನೀಡಬೇಕು. ೩೭೧ನೇ ಜೇ ಗೆ ಸಂಬಂಧಿಸಿದ ಕ್ಯಾಬಿನೆಟ್ ಉಪಸಮಿಯ ಅಧ್ಯಕ್ಷ ಸ್ಥಾನಕ್ಕೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕದ ಮಂತ್ರಿಯನ್ನೇ ಈ ಉಪ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಬೇಕು. ೩೭೧ನೇ ಜೇ ಕಲಂ ತಿದ್ದುಪಡಿಯ ವಿಶೇ? ಸ್ಥಾನಮಾನದ ಸವಲತ್ತುಗಳು ಕಲ್ಯಾಣ ಕರ್ನಾಟಕ ಜನರಿಗೆ ಸಮರ್ಪಕವಾಗಿ ತಲುಪಲು ಸರಕಾರ ಈಗಾಗಲೇ ಘೋಷಿಸಿರುವಂತೆ ಪ್ರತ್ಯೇಕ, ಮಂತ್ರಾಲಯ ಸ್ಥಾಪನೆ ಮಾಡಲೇಬೇಕು.

ಕಲ್ಯಾಣ ಕರ್ನಾಟಕದ ಕಾಲಮಿತಿಯ ರಚನಾತ್ಮಕ ಅಭಿವೃದ್ಧಿಗೆ ಒತ್ತಾಯಿಸಿ ಆಯಾ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದಂತೆ ವಿವರವಾದ ಬೇಡಿಕೆಗಳ ಪ್ರಸ್ತಾವನೆ ಆದಷ ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮನೀಷ ಜಾಜು,ಲಿಂಗರಾಜ ಸಿರಗಾಪೂರ, ಡಾ.ಮಾಜೀದ ದಾಗಿ, ಶಿವಲಿಂಗಪ್ಪ ಭಂಡಕ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಮೀರಾಜೂದ್ದಿನ, ಸಾಲೋಮನ್ ದಿವಾಕರ್, ಅಸ್ಲಮ್ ಚೌಂಗೆ, ಬಿ.ಬಿ.ನಾಯಕ,ಅಶೋಕ ಗುರುಜೀ, ಡಾ.ಭದ್ರಶೆಟ್ಟಿ, ರಾಜೆ ಶಿವಶರಣ, ಅಬ್ದುಲ ರಹೀಮ, ಸಾಹೇಬ ಗೌಡ ಸಿರಾಜ ಅಹೆಮದ್, ಮಲ್ಲಿನಾಥ ಸಂಗಶೆಟ್ಟಿ, ಎಚ್.ಎಂ.ಹಾಜಿ, ವಿರೇಶ ಪುರಾಣಿಕ, ಸಂಧ್ಯಾರಾಜ, ರಾಜು ಜೈನ್, ಎ.ಎಸ್ ಪಾಟೀಲ ಬಸವರಾಜ ಕೆ, ಸಂತೋಷ ಜವಳಿ, ದಾಮೋದರ ಮುಂಡದ್, ಮೊಖಬೂಲ್ ಪಟೇಲ್, ಬಾಬಾ ಪಕ್ರೋದ್ದಿನ್, ಸಾಜಿದ ಅಲಿ ರಂಜೋಲಿ, ಶಿವುಕುಮಾರ ಬಿರಾದಾರ, ಆನಂದ ಚವ್ಹಾಣ, ಸಂತೋಷ ಭೈರಾಮಡಗಿ, ಅಮಿತ್ ಕುಮಾರ, ಪರಮೇಶ್ವರ, ರಮೇಶ ಚವ್ಹಾಣ, ಸುನಿಲ್, ಹಾರಕುಡೆ, ಅಂಬಾರಾಯ, ಆಕಾಶ ರಾಠೋಡ, ಶಿವಾನಂದ ಕಾಂದೆ, ಜಗದೇವಿ ಹೆಗಡೆ, ಮುನ್ನಿಬೇಗಂ, ಮಾತನಾಡಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮಿತಿ ಮಂಡಿಸಿದ ಮೂರು ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಲು ಸರ್ವಾನುಮತದಿಂದ ಒತ್ತಾಯಿಸಿದರು. ಈ ಸಭೆಯಲ್ಲಿ ಸಮಿತಿಯ ನೂರಾರು ಸದಸ್ಯರು ಹಾಗೂ ಹಿರಿಯ ನಾಗರಿಕರು ಭಾಗವಹಿಸಿದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

2 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

2 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

2 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

2 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

2 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

2 hours ago